‘ಸುಮ್ಮನಿರದಿದ್ದರೆ ಶಾಮನೂರು ಬಣ್ಣ ಬಯಲು ಮಾಡುವೆ’
Team Udayavani, Jan 14, 2019, 6:33 AM IST
ಹುಬ್ಬಳ್ಳಿ: ಶಾಮನೂರು ಶಿವಶಂಕರಪ್ಪ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಅವರ ಬಣ್ಣ ಬಯಲು ಮಾಡುತ್ತೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಮನೂರು ಶಿವಶಂಕರಪ್ಪ ಒಬ್ಬ ಸ್ವಾರ್ಥ ರಾಜಕಾರಣಿ. ತಾವು ಹಾಗೂ ತಮ್ಮ ಕುಟುಂಬದ ಏಳ್ಗೆಯೇ ಅವರ ಉದ್ದೇಶವಾಗಿದೆ. ಹೀಗಾಗಿಯೇ ಅವರು ಇನ್ನೊಬ್ಬರ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಾರೆ. ಅವರು ನನ್ನ ತಂದೆಯ ಸಮಾನ. ಆದರೆ, ನನ್ನ ವಿರುದ್ಧ ಅಸಹ್ಯವಾಗಿ ಮಾತನಾಡಿದ್ದಾರೆ. ನನ್ನ ವಿರುದ್ಧ ಅವರ ಟೀಕೆ ಇದೇ ರೀತಿ ಮುಂದುವರಿದರೆ ಅವರ ಬಣ್ಣ ಬಯಲು ಮಾಡಬೇಕಾಗುತ್ತದೆ. ಲಂಚದ ಹಣದಿಂದ ಲಿಂಗಾಯತ ಸಮಾವೇಶ ನಡೆಸಿ¨್ದಾರೆ ಎಂದು ಶಾಮನೂರು ಹೇಳಿದ್ದಾರೆ. ಆದರೆ, ಬೀದರ ಮತ್ತು ಬೆಳಗಾವಿಯಲ್ಲಿ ಲಿಂಗಾಯತ ಹೋರಾಟ ಪ್ರಾರಂಭವಾದಾಗ ನಾನು ಅದರಲ್ಲಿರಲಿಲ್ಲ. ಜನ ತಮ್ಮ ಅಸ್ಮಿತೆ ಸಲುವಾಗಿ ಹಣ ಕೂಡಿಸಿ ಬೃಹತ್ ಸಮಾವೇಶ ಮಾಡಿದ್ದಾರೆ. ಅದನ್ನು ಮೊದಲು ಅವರು ತಿಳಿದುಕೊಳ್ಳಲಿ ಎಂದರು.
ಶಾಮನೂರು ಅವರು ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆಗುವ ಮೊದಲು ಕಿರಾಣಿ ಮತ್ತು ದಲ್ಲಾಳಿ ಅಂಗಡಿ ಮಾಡಿಕೊಂಡಿದ್ದರು. ಕೊಟ್ಟೂರ ಬಸಪ್ಪ ಕುಟುಂಬದವರು ಬಾಪೂಜಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದರು. ಅವರು ವಿದೇಶಕ್ಕೆ ಹೋದಾಗ ಮೋಸದಿಂದ ಶಾಮನೂರು ಶಿವಶಂಕರಪ್ಪ ಸಂಸ್ಥೆಯ ಅಧ್ಯಕ್ಷರಾದರು. ಅದರ ಅಧಿಕಾರದ ಹಣದಿಂದಲೇ ಅವರು ದರ್ಪ ತೋರುತ್ತಿದ್ದಾರೆ. ಲಿಂಗಾಯತ ಹೋರಾಟದಲ್ಲಿ ವಿನಯ ಕುಲಕರ್ಣಿ, ಶರಣ ಪ್ರಕಾಶ ಪಾಟೀಲ ಸೋತರೆಂದು ಹೇಳುತ್ತಿದ್ದಾರೆ. ಆದರೆ, ಅವರ ಮಗ ಮಲ್ಲಿಕಾರ್ಜುನ ಕೂಡ ಸೋತಿದ್ದಾರೆ. ಅದಕ್ಕೆ ಕಾರಣವೇನೆಂಬುದನ್ನು ಅವರು ತಿಳಿಸಲಿ ಎಂದರು.
ನಾನು ಸುಮ್ಮನಿರಲ್ಲ: ಶಾಮನೂರು ಶಿವಶಂಕರಪ್ಪ, ಅವರ ತಂದೆ-ತಾಯಿ, ಪೂರ್ವಜರು ಹಾಗೂ ವೀರೇಂದ್ರ ಪಾಟೀಲ, ಬಿ.ಡಿ.ಜತ್ತಿ, ಬಿ.ಎಂ.ಪಾಟೀಲ, ಎಸ್. ನಿಜಲಿಂಗಪ್ಪ ಅವರ ಜನ್ಮ ಹಾಗೂ ಶಾಲಾ ಪ್ರಮಾಣಪತ್ರ ತೆಗೆದು ನೋಡಿದಾಗ ಹಿಂದೂ ಲಿಂಗಾಯತವೆಂದು ಇದೆ. ನನ್ನ ಅಜ್ಜ ಶಿರಸಂಗಿ ಲಿಂಗರಾಜರು ಸ್ಥಾಪಿಸಿದ ಅಖೀಲ ಭಾರತ ವೀರಶೈವ ಮಹಾಸಭಾದ ವಿರು ದ್ಧವೇ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಶಾಮನೂರು ಶಿವ ಶಂಕರಪ್ಪ ಅವರು ಏಕವಚನದಲ್ಲಿ, ಕೀಳಾಗಿ ಮಾತನಾಡುವು ದನ್ನು ಮುಂದುವರಿಸಿದರೆ ನಾನು ಸುಮ್ಮನಿರಲ್ಲ. ನಾನು ಯಾರಿಗೂ ಅಂಜಿ ಹಿಂದೆ ಸರಿಯಲ್ಲ. ನನ್ನಲ್ಲಿ ಹರಿಯುತ್ತಿರು ವುದು ನನ್ನ ತಂದೆ ಬಿ.ಎಂ.ಪಾಟೀಲ ರಕ್ತ. ಅವಹೇಳನಕಾರಿ ಹೇಳಿಕೆ ನೀಡುವುದನ್ನು ಇಲ್ಲಿಗೆ ನಿಲ್ಲಿಸಲಿ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.