ಮಾತಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ : ಕಾಂಗ್ರೆಸ್ ಆರೋಪ
Team Udayavani, Apr 30, 2021, 4:05 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತೆ ಹೆಚ್ಚಳವಾಗುತ್ತಿದೆ. ಸೋಂಕಿನಿಂದ ಮೃತರಾಗುತ್ತಿರವವರ ಸಂಖ್ಯೆಯೂ ಏರಿಕೆಯಾಗುತ್ತಿರವ ಕಾರಣದಿಂದಾಗಿ ರಾಜ್ಯ ಕಾಂಗ್ರೆಸ್ ಪಕ್ಷ, ಕೋವಿಡ್ ಸೋಂಕನ್ನು ನಿವಾರಿಸುವಲ್ಲಿ ಬಿಜೆಪಿ ವಿಫಲಗೊಂಡಿದೆ ಎಂಬಂತೆ ಆರೋಪಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯ ಸೇರಿ ದೇಶದ ಹಲವೆಡೆ ಕೋವಿಡ್ ಸೋಂಕಿನ ಚಿಕಿತ್ಸೆಗೆ ಆಮ್ಲಜನಕ, ಲಸಿಕೆಗಳ ಕೊರತೆ ಇದೆ ಎಂಬ ಆರೋಪಗಳ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ತೀವ್ರವಾಗಿ ಟೀಕೆ ಮಾಡಿದೆ.
ಈ ಬಗ್ಗೆ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಜ್ಯ ಕಾಂಗ್ರೆಸ್, ಕೋವಿಡ್ ಸೋಂಕಿನ ನಿವಾರಣೆಗೆ ಬೇಕಾದ ಎಲ್ಲಾ ಸೌಲಭ್ಯಗಳು ಇವೆ ಎನ್ನುವುದು ಫೇಕ್ ಫ್ಯಾಕ್ಟರಿ ಖ್ಯಾತಿಯ ಬಿಜೆಪಿಯ ಟ್ವಿಟರ್ ಗಳಲ್ಲಿ ಮಾತ್ರ ಎಂದು ಕಟುವಾಗಿ ಆರೋಪಿಸಿದೆ.
ಓದಿ : ಬೀದರ್ ನಗರಸಭೆ ಚುನಾವಣೆ: ಬಿಜೆಪಿಗೆ ಮುಖಭಂಗ, ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ
“ಲಸಿಕೆ ಸಾಕಷ್ಟು ಇದೆ, ಆಕ್ಸಿಜನ್ ಬೇಕಾದಷ್ಟಿದೆ ಬೆಡ್ ಗಳು ಸರಾಗವಾಗಿ ಸಿಗುತ್ತಿದೆ, ರೆಮಿಡಿಸಿವಿರ್ ಸಾಕಷ್ಟಿದೆ ರಾಜ್ಯದಲ್ಲಿ ಸೋಂಕಿತರು ಸಾಯುತ್ತಲೇ ಇಲ್ಲ ಯಾವುದೇ ವೈದ್ಯಕೀಯ ಸಮಸ್ಯೆಗಳೇ ಇಲ್ಲ” ಇದೆಲ್ಲವೂ ಫೇಕ್ ಫ್ಯಾಕ್ಟರಿ ಖ್ಯಾತಿಯ ಬಿಜೆಪಿ ಟ್ವೀಟರ್ ಗಳಲ್ಲಿ ಮಾತ್ರ ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ಆಕ್ರೋಶ ಹೊರ ಹಾಕಿದೆ.
ಇನ್ನು, ಜನ ಸಾಯುತ್ತಿದ್ದಾರೆ, ಇವರ ಸುಳ್ಳು ಮುಂದುವರಿಯುತ್ತಲೇ ಇದೆ ಎಂದು ಕೂಡ ಹೇಳಿದೆ.
ಲಸಿಕೆ ಸಾಕಷ್ಟು ಇದೆ
ಆಕ್ಸಿಜನ್ ಬೇಕಾದಷ್ಟಿದೆ
ಬೆಡ್ಗಳು ಸರಾಗವಾಗಿ ಸಿಗುತ್ತಿದೆ
ರೆಮಿಡಿಸಿವಿರ್ ಸಾಕಷ್ಟಿದೆ
ರಾಜ್ಯದಲ್ಲಿ ಸೋಂಕಿತರು ಸಾಯುತ್ತಲೇ ಇಲ್ಲ
ಯಾವುದೇ ವೈದ್ಯಕೀಯ ಸಮಸ್ಯೆಗಳೇ ಇಲ್ಲಇದೆಲ್ಲವೂ ಫೇಕ್ ಫ್ಯಾಕ್ಟರಿ ಖ್ಯಾತಿಯ @BJP4Karnataka ಟ್ವೀಟ್ಗಳಲ್ಲಿ ಮಾತ್ರ.
ಜನ ಸಾಯುತ್ತಿದ್ದಾರೆ, ಇವರ ಸುಳ್ಳು ಮುಂದುವರೆಯುತ್ತಲೇ ಇದೆ.
— Karnataka Congress (@INCKarnataka) April 30, 2021
ಮತ್ತೊಂದು ಟ್ವೀಟ್ ನಲ್ಲಿ, “ಮಾತಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ” ಎಂದು ಕೂಡ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ.
ಮಾತಲ್ಲಿ ಲಸಿಕೆ ಅಭಿಯಾನ,
ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ.— Karnataka Congress (@INCKarnataka) April 30, 2021
ಇನ್ನು, ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಆರ್ಡರ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದು, ಸೀರಂ ಇನ್ಸ್ಟಿಟ್ಯೂಟ್ 1 ತಿಂಗಳಲ್ಲಿ 5-6 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುತ್ತಿದೆ. ಭಾರತ್ ಬಯೋಟೆಕ್ 1-1.5 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ. ರಷ್ಯಾದ ಸ್ಪುಟ್ನಿಕ್ ಲಸಿಕೆ ಕೂಡಾ ಬರುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ : ಜೀವ ಬೆದರಿಕೆಯಿದ್ದರೂ ಪೊಲೀಸ್ ಭದ್ರತೆ ನಿರಾಕರಿಸಿದ ನಟ ಸಿದ್ಧಾರ್ಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.