ಸಂಕಷ್ಟಕ್ಕೆ ಸಿಲುಕಿದ ಲಕ್ಷಾಂತರ ಬಾಡಿಗೆದಾರರು
ವಿನಾಯಿತಿ ಕೇಳಿದರೆ ಮನೆ, ಅಂಗಡಿ ಖಾಲಿ ಮಾಡಲು ಮಾಲೀಕರ ತಾಕೀತು
Team Udayavani, Apr 13, 2020, 2:46 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆ ಹಾಗೂ ಅಂಗಡಿ -ವಾಣಿಜ್ಯ ಮಳಿಗೆಗಳ ಲಕ್ಷಾಂತರ ಬಾಡಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡ ಹಾಗೂ ಮಧ್ಯಮ ವರ್ಗ ಸೇರಿ ಖಾಸಗಿ ವಲಯದವರಿಗೆ ಲಾಕ್ ಡೌನ್ ನಿಂದ ದುಡಿಮೆ ಇಲ್ಲ, ಅಗತ್ಯ ವಸ್ತುಗಳ ದಿನಸಿ ತರಕಾರಿ ಔಷಧ ಹೊರತುಪಡಿಸಿದರೆ ಇತರೆ ಅಂಗಡಿಗಳು ಮುಚ್ಚಿದ್ದು ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಇಂತಹ ಸ್ಥಿತಿಯಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹೀಗಾಗಿ ಮಾಸಿಕ ಬಾಡಿಗೆ ವಿನಾಯಿತಿ ಕೇಳಿದರೆ ಮಾಲೀಕರು ಒಪ್ಪದೆ “ಬಾಡಿಗೆ ಕೊಡಿ ಇಲ್ಲವೇ ಖಾಲಿ ಮಾಡಿ’ ಎಂದು ಹೇಳುವಂತಾಗಿದೆ. ಇದರಿಂದ ಬಾಡಿಗೆದಾರರು ಬಾಡಿಗೆ ಹೊಂದಿಸಲು ಪರದಾಡುವಂತಾಗಿದೆ. ಮಾರ್ಚ್ ತಿಂಗಳ ಬಾಡಿಗೆ ಏಪ್ರಿಲ್‌ನಲ್ಲಿ ಕೊಡಲು ಸಾಧ್ಯವಾಗಿಲ್ಲ. ಏಪ್ರಿಲ್ ತಿಂಗಳು ಪೂರ್ತಿ ಲಾಕ್ ಡೌನ್ ಘೋಷಣೆ ಆಗಿರುವು ದರಿಂದ ಏಪ್ರಿಲ್ ತಿಂಗಳ ಬಾಡಿಗೆ ನೀಡುವುದು ಕಷ್ಟವಾಗಲಿದೆ. ಹೀಗಾಗಿ ಬಾಡಿಗೆದಾರಿಗೆ ಸಂಕಷ್ಟ ಎದುರಾಗಿದೆ.
ಬಡ ವರ್ಗಕ್ಕೆ ಸರ್ಕಾರ ಉಚಿತ ಪಡಿತರ ನೀಡುತ್ತದೆ. ಆದರೆ ಆಟೋಚಾಲಕರು, ಗಾರ್ಮೆಂಟ್ಸ್ ನೌಕರರು ಮಧ್ಯಮ ವರ್ಗದ ಕುಟುಂಬಗಳು ಸಾಕಷ್ಟು ಮಂದಿ ಬಾಡಿಗೆ ಮನೆಯಲ್ಲಿದ್ದಾರೆ. ಜೀವನಕ್ಕಾಗಿ ಈ ಪೈಕಿ ಹಲವರು ಅಂಗಡಿ ಬಾಡಿಗೆಗೆ ಪಡೆದು ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ಬ್ಯಾಂಕ್ ಗಳಲ್ಲಿ ಸಾಲ ಪಡೆದು ವಾಣಿಜ್ಯ ಮಳಿಗೆ ಬಾಡಿಗೆಗೆ ಪಡೆದು ವಹಿವಾಟಿನಲ್ಲಿ ತೊಡಗಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ಲಾಕ್ ಡೌನ್ ನಿಂದಾಗಿ ಬಾಡಿಗೆದಾರ ವರ್ಗ ತೊಂದರೆಗೊಳಗಾಗಿದೆ. ರಾಜ್ಯದಲ್ಲಿ ಸುಮಾರು 40 ಲಕ್ಷ ಬಾಡಿಗೆ ಮನೆಗಳಿದ್ದು, 20 ಲಕ್ಷವರೆಗೆ ಬಾಡಿಗೆ ಅಂಗಡಿ ವಾಣಿಜ್ಯ ಮಳಿಗೆಗಳಿವೆ. ಅದರಲ್ಲಿ ಬೆಂಗಳೂರಿನಲ್ಲೇ 10 ಲಕ್ಷದವರೆಗೆ ಬಾಡಿಗೆ ಮನೆ, 1 ಲಕ್ಷ ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳಿವೆ.
ಮಾಸಿಕ 3 ಸಾವಿರದಿಂದ 20 ಸಾವಿರದವರೆಗೆ ಬೆಂಗಳೂರಿನಲ್ಲಿ ಮನೆ ಹಾಗೂ ಅಂಗಡಿ ಬಾಡಿಗೆ ಇದ್ದರೆ, ಮೈಸೂರು, ಬೆಳಗಾವಿ, ಕಲಬುರಗಿ, ಮಂಗಳೂರು ಸೇರಿ ಪ್ರಮುಖ ನಗರಗಳಲ್ಲಿ 1 ಸಾವಿರದಿಂದ 10 ಸಾವಿರ ರೂ., ನಗರ ಹಾಗೂ ಪಟ್ಟಣಗಳಲ್ಲಿ 5 ಸಾವಿರದ ವರೆಗೆ ಬಾಡಿಗೆ ಇದೆ. ಲಾಕ್ ಡೌನ್ ನಿಂದಾಗಿ ಬಹುತೇಕ ಎಲ್ಲವೂ ಸ್ಥಗಿತಗೊಂಡಿರುವುದರಿಂದ ಬಾಡಿಗೆ ಪಾವತಿಯೂ ಕಷ್ಟವಾಗಿದೆ. ಒಂದೆಡೆ ಲಾಕ್ ಡೌನ್ ಅವಧಿಯಲ್ಲಿ ಜೀವನ ನಿರ್ವಹಣೆ, ಮತ್ತೂಂದೆಡೆ ಮುಂದೆ ಮಕ್ಕಳ ಶೈಕ್ಷಣಿಕ ಭವಿಷ್ಯ, ಇದರ ನಡುವೆ ಬಾಡಿಗೆ ಹೊರೆಯಿಂದಾಗಿ ಬಾಡಿಗೆದಾರರು ದಿಕ್ಕು ಕಾಣದಂತಾಗಿದ್ದಾರೆ. ಆದರೆ, ಶೇ.50 ರಷ್ಟು ಮಾಲೀಕರು ನಿವೃತ್ತಿ ನಂತರ ಬಾಡಿಗೆಯಿಂದಲೇ ಜೀವನ ನಿರ್ವಹಣೆ ಮಾಡು ತ್ತಿರುವುದರಿಂದ ಬಾಡಿಗೆ ನಿಂತರೆ ಮಾಲೀಕರಿಗೂ ಸಮಸ್ಯೆಯಾಗಲಿದೆ. ಇಂತಹ ಸಮಯದಲ್ಲಿ ಸರ್ಕಾರವೇ ನೆರವಾಗಬೇಕು ಎಂಬ ಬೇಡಿಕೆಯೂ ಇದೆ. ದೆಹಲಿಯಲ್ಲಿ ಅಲ್ಲಿನ ಸರ್ಕಾರ ಮೂರು ತಿಂಗಳ ಬಾಡಿಗೆ ವಿನಾಯಿತಿ ನೀಡಿ ಸರ್ಕಾರದ ವತಿ
ಯಿಂದಲೇ ಪಾವತಿಸುವ ಭರವಸೆ ನೀಡಿದೆ. ಕರ್ನಾಟಕದಲ್ಲೂ ಅದೇ ರೀತಿಯ ಒತ್ತಡ ಇದೆ. ಆದರೆ , ರಾಜ್ಯದಲ್ಲಿ ಅದು ಸಾಧ್ಯವಿಲ್ಲ. ಈಗಲೇ ಸರ್ಕಾರವೇ ಸಂಕಷ್ಟದಲ್ಲಿರುವುದರಿಂದ ಕಷ್ಟ ಎಂದು ಹೇಳಲಾಗುತ್ತಿದೆ.
ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ
2011 ಯಲ್ಲೂ ಇಂತಹ ಸಂದರ್ಭಗಳಲ್ಲಿ ಯಾವ ರೀತಿಯಲ್ಲಿ ಏನು ಮಾಡಬೇಕು ಎಂಬ ಉಲ್ಲೇಖವಿಲ್ಲ. ಎರಡು ತಿಂಗಳು ಸತತ ಬಾಡಿಗೆ ಪಾವತಿ ಮಾಡದಿದ್ದರೆ ಒಪ್ಪಂದದಂತೆ ವಿದ್ಯುತ್ ಸಂಪರ್ಕ ಸೇರಿ ಇತರೆ ನಿಗದಿತ ಶುಲ್ಕ ಪಾವತಿಸದಿದ್ದರೆ ಮನೆ ಅಥವಾ ಅಂಗಡಿ ಖಾಲಿ ಮಾಡಿಸಬಹುದು ಎಂದಿದೆ. ಹೀಗಾಗಿ ಬಾಡಿಗೆದಾರರಿಗೆ ಕಾನೂನಿನ ಬೆಂಬಲವೂ ಸಿಗದು. ಮಾಲೀಕರು ಒಂದೊಮ್ಮೆ ಎರಡು ತಿಂಗಳು ಬಾಡಿಗೆ ಪಾವತಿಸದಿದ್ದರೆ ಅಡ್ವಾನ್ಸ್ ಹಣಕ್ಕೆ ಜಮೆ ಮಾಡಿ ಖಾಲಿಮಾಡಿಸಿದರೆ ಕಷ್ಟ ಎಂದು ಬಾಡಿಗೆದಾರರ ಅಳಲು.
ಇಡೀ ದೇಶದಲ್ಲಿ ಲಾಕ್ ಡೌನ್ ಇದೆ. ಮನೆ ಮಾಲೀಕರು ಪರಿಸ್ಥಿತಿ ಅರ್ಥ ಮಾಡಿಕೊಂಡು ಬಾಡಿಗೆಗೆ ಬಲವಂತ ಮಾಡಬಾರದು. ಮನೆ ಅಥವಾ ಅಂಗಡಿ ಖಾಲಿ ಮಾಡಿ ಎಂದು ಹೇಳಬಾರದು. ಸರ್ಕಾರವು ಈ ಕುರಿತು ಮೌಕಿಕವಾಗಿ ಸೂಚನೆ ನೀಡಿದೆ, ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ರಿಯಾಯಿತಿ ನೀಡಿದೆ.
●ಆರ್. ಅಶೋಕ್, ಕಂದಾಯ ಸಚಿವ
ಲಾಕ್ ಡೌನ್ ಹಿನ್ನೆಲೆಯಲ್ಲಿ ಬಾಡಿಗೆ ವಿನಾಯಿತಿ ಘೋಷಿಸಬೇಕು. ದೆಹಲಿ ಸರ್ಕಾರ 3 ತಿಂಗಳ ಬಾಡಿಗೆ ತಾನೇ ಕೊಡುವ ಯೋಜನೆ ಘೋಷಿಸಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ 3 ತಿಂಗಳು ಬಾಡಿಗೆ ವಿನಾಯಿತಿಯನ್ನು ಮೋದಿಯವರು ಘೋಷಿಸಬೇಕು. ಮಾಲೀಕರು ಬಾಡಿಗೆ ವಿಚಾರದಲ್ಲಿ ಉದಾರತೆ ತೋರಬೇಕು.
● ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ.
●ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.