ಹಸುಗಳ ಜತೆಗೆ ಎತ್ತು, ಹೋರಿ, ಕೋಣ ವಿಮಾ ವ್ಯಾಪ್ತಿಗೆ: ಸಚಿವ ಪ್ರಭು ಬಿ. ಚೌಹಾಣ್
Team Udayavani, Feb 14, 2023, 7:30 AM IST
ಬೆಂಗಳೂರು: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅನ್ವಯ ಪ್ರಸಕ್ತ ಸಾಲಿನಿಂದ ಹಸುಗಳ ಜತೆಗೆ ಎತ್ತು, ಹೋರಿ, ಕೋಣ, ಮಣಕ, ಕುರಿ, ಮೊಲ, ಹಂದಿ, ದೇಶಿ ತಳಿ ರಾಸುಗಳನ್ನೂ ವಿಮಾ ವ್ಯಾಪ್ತಿಗೊಳಪಡಿಸಲು ಅರ್ಹ ವಿಮಾ ಸಂಸ್ಥೆ ಗುರುತಿಸಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚೌಹಾಣ್ ತಿಳಿಸಿದ್ದಾರೆ.
ಶಾಸಕ ಯು.ಟಿ. ಖಾದರ್ ಪರವಾಗಿ ಪ್ರಶ್ನೆ ಕೇಳಿದ ಅಜಯ್ ಧರಂಸಿಂಗ್‌ಗೆ ಉತ್ತರಿಸಿದ ಅವರು, ಇದಕ್ಕಾಗಿ 14 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಕೇಂದ್ರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಮಲೆನಾಡು ಗಿಡ್ಡ ತಳಿಯ ಹಸುಗಳನ್ನೂ ವಿಮೆ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಹೇಳಿದರು.
ದೇಗುಲಗಳ ಅಭಿವೃದ್ಧಿಗೆ 483 ಕೋಟಿ ರೂ.
ಮುಜರಾಯಿ ಮತ್ತು ಮುಜರಾಯೇತರ ದೇವಸ್ಥಾನಗಳ ಅಭಿವೃದ್ಧಿಗೆ 2022-23ನೇ ಸಾಲಿನಲ್ಲಿ 483 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ದುರಸ್ತಿ, ಜೀರ್ಣೋದ್ಧಾರ, ನಿರ್ಮಾಣಕ್ಕೆಂದು 422 ಕೋಟಿ ರೂ., ಆರಾಧನಾ ಯೋಜನೆಗೆ 5 ಕೋಟಿ ರೂ., ಪರಿಶಿಷ್ಟ ಉಪಯೋಜನೆಯಡಿ 5 ಕೋಟಿ ರೂ., ಗಿರಿಜನ ಉಪಯೋಜನೆಯಡಿ 1.20 ಕೋಟಿ ರೂ. ಸೇರಿ ಒಟ್ಟು 483 ಕೋಟಿ ರೂ. ಒದಗಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಗೆ ತಿಳಿಸಿದ್ದಾರೆ.
ದುರಸ್ತಿ ಜೀರ್ಣೋದ್ಧಾರ, ಅಭಿವೃದ್ಧಿ ಯೋಜನೆಗಾಗಿ ಸರಕಾರದ ಹಂತದಲ್ಲಿ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ದೇವಾಲಯಗಳನ್ನು ಗುರುತಿಸಿ ಜಿಲ್ಲಾವಾರು ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಮುಜರಾಯಿ ಮತ್ತು ಮುಜರಾಯೇತರ ಒಟ್ಟು 5,672 ದೇವಸ್ಥಾನಗಳ ಅಭಿವೃದ್ಧಿಗೆ 422 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಪ್ರಾದೇಶಿಕ ಅಸಮತೋಲನ: ಪುನರ್ ಪರಿಶೀಲನೆ ಅಗತ್ಯ
ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಕ್ಷೇತ್ರಗಳ ಸ್ವರೂಪದ ಬಗ್ಗೆ ವ್ಯಾಪಕ ಚರ್ಚೆಯಾಗಬೇಕಿದೆ. ಪ್ರಾದೇಶಿಕ ಅಸಮತೋಲನದ ಬಗ್ಗೆ ಪುನರ್ ಪರಿಶೀಲನೆಯಾಗಬೇಕಾದ ಅಗತ್ಯವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪಿತವಾದ ಹಿಂದುಳಿದ ತಾಲೂಕುಗಳ ಪೈಕಿ ಅನೇಕ ತಾಲೂಕಿನ ಚಹರೆ ಈಗ ಬದಲಾಗಿದೆ. ಹಲವು ಕಡೆ ನೀರಾವರಿಯಾಗಿದೆ, ಇನ್ನು ಕೆಲವೆಡೆ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಹೊಸ ತಾಲೂಕುಗಳು ರಚನೆಯಾಗಿವೆ. ಹೀಗಾಗಿ ಪ್ರಾದೇಶಿಕ ಅಸಮತೋಲನೆ, ಹಿಂದುಳಿದ ಪ್ರದೇಶದ ಪುನರ್ ಪರಿಶೀಲನೆಯಾಗುವ ಅಗತ್ಯವಿದೆ ಎಂದು ಹೇಳಿದರು.
ಮೂಲಸೌಕರ್ಯ ಇಲಾಖೆ ಈಗಾಗಲೇ ಈ ಬಗ್ಗೆ ವರದಿ ಸಲ್ಲಿಸಿದೆ. ವಿಸ್ತೃತ ವರದಿ ನೀಡಲು ಸೂಚನೆ ನೀಡಲಾಗಿದೆ. ಮತ್ತೂಂದು ಸಮಿತಿ ರಚಿಸುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಚಿತ್ತಾಪುರ ಮತ ಕ್ಷೇತ್ರಕ್ಕೆ ಗಿರಿಜನ ಉಪ ಯೋಜನೆಗಳಡಿ ಯಾವುದೇ ಹೊಸ ರಸ್ತೆ ಕಾಮಗಾರಿಗೆ ಮಂಜೂರಾತಿ ನೀಡಿಲ್ಲ ಎಂಬ ಸರಕಾರದ ಲಿಖೀತ ಉತ್ತರವನ್ನೇ ಪ್ರಸ್ತಾಪಿಸಿ, ನಮ್ಮದು ಮೀಸಲು ಕ್ಷೇತ್ರ. ಇಲ್ಲಿಗೆ ರಸ್ತೆ ಕಾಮಗಾರಿ ಮಂಜೂರಾತಿ ನೀಡದೇ ಇದ್ದರೆ ಹೇಗಾಗುತ್ತದೆ. ಸರಕಾರವನ್ನು ಕೇಳಿದರೆ 100 ಹಾಸ್ಟೆಲ್ ನಿರ್ಮಿಸುತ್ತೇವೆ ಎಂದು ಉತ್ತರಿಸುತ್ತಿದೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಈ ಸಂದರ್ಭ ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.