ಸಕ್ಕರೆ ಕಾರ್ಖಾನೆ: ತಿಂಗಳಾಂತ್ಯದೊಳಗೆ ಬಾಕಿ ಪಾವತಿಸಿ; ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ
Team Udayavani, May 11, 2022, 2:16 PM IST
ಸಕ್ಕರೆ ಕಾರ್ಖಾನೆ: ತಿಂಗಳಾಂತ್ಯದೊಳಗೆ ಬಾಕಿ ಪಾವತಿಸಲು ಸಚಿವ ಶಂಕರ ಪಾಟೀಲ್ ಸೂಚನೆ
ಬೆಂಗಳೂರು : ಸಕ್ಕರೆ ಕಾರ್ಖಾನೆ ಮಾಲಿಕರ ಸಭೆ ಕರೆದು ಬಾಕಿ ನೀಡುವ ಕುರಿತು ಚರ್ಚೆ ನಡೆಸಿದ್ದೇವೆ. ಈ ತಿಂಗಳಾಂತ್ಯದೊಳಗೆ ಬಾಕಿ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,ರಾಜ್ಯದಲ್ಲಿ 621.93 ಮೆ.ಟನ್ ಕಬ್ಬು ನುರಿಸಲಾಗಿದೆ. 19626. ಕೋಟಿ ರೂ. ರೈತರಿಗೆ ಕೊಡಿಸಬೇಕಿದೆ. 18224. ಕೋಟಿ ಈಗಾಗಲೇ ಪಾವತಿ ಮಾಡುವ ಕೆಲಸ ಮಾಡಲಾಗಿದೆ. ಸರ್ಕಾರ ಸೂಚನೆ ಕೊಟ್ಟ ನಂತರ 400 ಕೋಟಿ ಕೊಟ್ಟಿದ್ದಾರೆ. ಶೇ. 93 ರಷ್ಟು ಹಣ ನೀಡಿದ್ದಾರೆ. ಬಾಕಿ 7% ಹಣವನ್ನು ಈ ತಿಂಗಳ ಅಂತ್ಯದೊಳಗೆ ನೀಡುವಂತೆ ಸೂಚಿಸಿದ್ದೇವೆ ಎಂದು ಹೇಳಿದರು.
1435 ಕೋಟಿ ಬಾಕಿ ಉಳಿದಿದೆ. ಇಂದಿನ ಸಭೆಯಲ್ಲಿ 200. ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ. ನಾವು ಮುಂಜಾಗ್ರತ ಕ್ರಮವಾಗಿ ಈಗಲೇ ಕ್ರಮ ವಹಿಸಿದ್ದರಿಂದ ರಾಜ್ಯದ ರೈತರು ಬೀದಿಗಿಳಿಯದಂತೆ ನೋಡಿಕೊಳ್ಳಲಾಗಿದೆ. ಮೂರ್ನಾಲ್ಕು ಕಾರ್ಖಾನೆಗಳು ಶೇ 100 ರಷ್ಟು ಹಣ ಸಂದಾಯ ಮಾಡಿದ್ದಾರೆ. ರಾಜ್ಯದಲ್ಲಿ ಎಥೆನಾಲ್ ಗೆ 32 ಸಕ್ಕರೆ ಕಾರ್ಖಾನೆಗಳು ಆರಂಭಿಸಿವೆ. ಕೇಂದ್ರದಿಂದ 68 ಘಟಕಗಳು ಅನುಮತಿ ಪಡೆದಿವೆ ಎಂದು ವಿವರಿಸಿದರು.
ಇದನ್ನೂ ಓದಿ:ಟೊಮೆಟೊ ಜ್ವರ ಆತಂಕ !: ಕೇರಳದಲ್ಲಿ 80 ಕ್ಕೂ ಹೆಚ್ಚು ಪುಟ್ಟ ಮಕ್ಕಳಿಗೆ ಸೋಂಕು
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು 50 ಕೋಟಿ ನೀಡಲಾಗಿದೆ. ಬಾಗಲಕೋಟೆಯ ರನ್ನ ಕಾರ್ಖಾನೆಯನ್ನು ಖಾಸಗಿಯವರು ಮುಂದೆ ಬಂದಿದ್ದಾರೆ. ಮೈಸೂರಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕಬ್ಬು ಬೆಳೆದ ರೈತರ ಕಬ್ಬು ಮಹಾರಾಷ್ಟ್ರ ಕ್ಕೆ ಹೋಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜಕೀಯ ಪಕ್ಷಗಳ ನಾಯಕರ ಕಾರ್ಖಾನೆಗಳಿವೆ ಆದರೆ ನಾವು ಯಾವುದೇ ಮುಲಾಜಿಲ್ಲದೆ ರೈತರಿಗೆ ಹಣ ಪಾವತಿ ಮಾಡಿಸಲು ಪ್ರಯತ್ನ ಮಾಡಲಾಗುತ್ತಿದೆ. ರೈತ ಸಂಘಟನೆಗಳು ಮಾಡುವ ಆರೋಪದ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರ ಸೂಕ್ತ ಮಾಹಿತಿ ಒದಗಿಸಲಾಗುವುದು. ಯಾವುದೇ ದಾಖಲೆ ಮುಚ್ಚಿಡುವ ಪ್ರಶ್ನೆ ಇಲ್ಲ. ಹಿಂದಿನ ವರ್ಷಗಳದ್ದು 11.58.ಕೋಟಿ ರೂ. ಬಾಕಿ ಇದೆ. ಕಾರ್ಖಾನೆ ಮಾಲಿಕರು ಇಳುವರಿ ಆಧಾರದಲ್ಲಿ ರೈತರಿಗೆ ಹೆಚ್ಚಿನ ಹಣ ಕೊಡಿಸಲು ತಂಡ ರಚನೆ ಮಾಡಲಾಗಿದ್ದು ವರದಿ ಪಡೆಯಲಾಗಿದೆ ಎಂದರು.
ನಿರಾಣಿ ಅವರ ಕಾರ್ಖಾನೆ ಬಾಕಿ ಇದೆ. ಅವರ ಪುತ್ರ ಸಭೆಗೆ ಆಗಮಿಸಿದ್ದರು. 40 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಎಥೆನಾಲ್ ನೀತಿ ಜಾರಿಗೊಳಿಸಲಾಗಿದೆ. ಎಥೆನಾಲ್ ಉತ್ಪಾದನೆಯಿಂದ ರೈತರಿಗೆ ಪಾಲು ನೀಡುವ ಬಗ್ಗೆ ಸಕ್ಕರೆ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು.
ಮೈಶುಗರ್ ಕಾರ್ಖಾನೆಗೆ 528. ಕೋಟಿ ನೀಡಲಾಗಿದೆ. ಅದರಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.