ಪ್ರತ್ಯೇಕ ರಾಜ್ಯ ಉದಯ ಆದರೆ ನಾನಂತು ಸಿಎಂ ಆಗಲ್ಲ, ನನ್ನ ಮಗ ಆಗಬಹುದು: ಉಮೇಶ್ ಕತ್ತಿ
ವರ್ಷದೊಳಗೆ ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಸ್ಥಾಪನೆ -ಉಮೇಶ ಕತ್ತಿ
Team Udayavani, Jun 27, 2022, 12:41 PM IST
ಚಿಂಚೋಳಿ ( ಕಲಬುರಗಿ) : ಉತ್ತರ ಕರ್ನಾಟಕ ಪ್ರತ್ಯೇಕವಾದ ರಾಜ್ಯದ ಬೇಡಿಕೆ ಅನೇಕ ವರ್ಷಗಳಿಂದ ಈ ಭಾಗದ ಜನರ ಆಶ್ರಯ ಇದೆ. ನಮ್ಮ ದೇಶದಲ್ಲಿ ಬರುವ ದಿನಗಳಲ್ಲಿ 50 ರಾಜ್ಯಗಳು ಉದಯ ಆಗಲಿವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿರುವುದರಿಂದ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ಇದೆ ಎಂದು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದರು.
ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷದ್ಯೋನ ವನ ಉದ್ಘಾಟನೆ ಸಮಾರಂಭ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಪ್ರತ್ಯೇಕ ರಾಜ್ಯ ಉದಯ ಆದರೆ ನಾನಂತು ಮುಖ್ಯ ಮಂತ್ರಿ ಆಗುವುದಿಲ್ಲ. ನನ್ನ ಮಗ ಮುಖ್ಯಮಂತ್ರಿ ಆಗಬಹುದು ಎಂದು ಕತ್ತಿ ಹೇಳಿದರು.
ಚಿಂಚೋಳಿಯಲ್ಲಿ ಕಾಲೇಜು ಸ್ಥಾಪನೆಗೆ ಅನೇಕ ವರ್ಷದಿಂದ ಬೇಡಿಕೆಯಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ ಅವರೊಂದಿಗೆ ಚರ್ಚಿಸಿ ಶೀಘ್ರ ಆರಂಭಿಸಲಾಗುವುದು. ಇದರಿಂದ ಈ ಭಾಗದಲ್ಲಿ ಅರಣ್ಯ ಕಾಳಜಿ ಹೆಚ್ಚಲಿದೆ ಜೊತೆಗೆ ಈ ಭಾಗದಿಂದಲೂ ಅರಣ್ಯ ಅಧಿಕಾರಿಗಳು ಹೊರಬರಲು ಸಹಾಯವಾಗುತ್ತದೆ ಎಂದರು.
ಕಲ್ಯಾಣ ಕರ್ನಾಕದ ಮಳೆನಾಡೆಂದೇ ಕರೆಸಿಕೊಳ್ಳುವ ಚಿಂಚೋಳಿ ಒಳಗೊಂಡ ಕಲಬುರಗಿ, ಪಕ್ಕದ ಬೀದರ, ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಪ್ರದೇಶವನ್ನು ಮಳೆನಾಡನ್ನಾಗಿ ಪರಿವರ್ತಿಸಲಾಗುವುದು. ಪರಿಸರ, ಅರಣ್ಯ ಸಂರಕ್ಷಿಸಿದ್ದರೆ ಮಾತ್ರ ಉತ್ತಮ ಮಳೆ-ಬೆಳೆ ಜೊತೆಗೆ ನಾವು-ನೀವೆಲ್ಲ ಜೀವನ ಸಾಗಿಸಬಹುದು ಎಂದು ಸಚಿವ ಉಮೇಶ ವಿ. ಕತ್ತಿ ಹೇಳಿದರು.
2 ಕೋಟಿ ರೂ. ವೆಚ್ಚದ ಕಾಟೇಜ್ ನಿರ್ಮಾಣಕ್ಕೆ ತಿಂಗಳಾಂತ್ಯದಲ್ಲಿ ಅಡಿಗಲ್ಲು :
ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುವ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಬಳಿ ಪ್ರವಾಸಿಗರು ತಂಗಲು ಕಾಟೇಜ್ ನಿರ್ಮಾಣಕ್ಕೆ 2 ಕೋಟಿ ರೂ. ಕರ್ನಾಟಕ ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್ ನಿಗಮಕ್ಕೆ ಬಿಡುಗಡೆಗೊಳಿಸಿದ್ದು, ತಿಂಗಳಾಂತ್ಯದಲ್ಲಿ ಇದಕ್ಕೆ ಅಡಿಗಲ್ಲು ಹಾಕಲಾಗುವುದು ಎಂದರು.
ಕೇಂದ್ರದ ರಸಾಯನಿಕ, ರಸಗೊಬ್ಬರ ಹಾಗೂ ಹೊಸ ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಅಗೂ ಬೀದರ ಸಂಸದ ಭಗವಂತ ಖೂಬಾ ಮಾತನಾಡಿ, ಸಾಲುಮರದ ತಿಮ್ಮಕನ್ನ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರತಿ ತಾಲೂಕಿನ ನಗರ ಪ್ರದೇಶದಲ್ಲಿ ಪರಿಸರದ ಅನುಭೂತಿ ಪಡೆಯಲು ವೃಕ್ಷೋಧ್ಯಾನ ನಿರ್ಮಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ತಿಮ್ಮಕ್ಕನ ಪ್ರೇರಣೆಯಿಂದ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸುವುದು ಅವಶ್ಯಕವಾಗಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಇಂದಿನ ವರೆಗೆ ವಾಡಿಕೆಯಂತೆ ಮಳೆಯಾಗಿಲ್ಲ. ಎರಡ್ಮೂರು ದಿನದಲ್ಲಿ ಮಳೆ ಬರುವ ಸಾಧ್ಯತೆಯಿಂದ ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಬೀಜ, ರಸಗೊಬ್ಬರ ಕೊರತೆಯಿಲ್ಲ. ಡಿ.ಎ.ಪಿ., ಯೂರಿಯಾ, ಕಾಂಪ್ಲೆಕ್ಸ್ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ರೈತರು ಆತಂಕ್ಕೊಳಗಾಗಬಾರದು ಮತ್ತು ಪ್ರತಿಪಕ್ಷದವರ ಗೊಂದಲದ ಹೇಳಿಕೆಗೆ ಕಿವಿಗೊಡಬಾರದೆಂದು ಮನವಿ ಮಾಡಿದರು.
ರೈತರು ಸ್ವಾಲಂಬಿಯಾಗಲು ಕಳೆದ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರ ಪಿ.ಎಂ.ಕಿಸಾನ್ ಯೋಜನೆಯಡಿ 11 ಕೋಟಿ ರೈತರಿಗೆ 2.03 ಲಕ್ಷ ಕೋಟಿ ರೂ. ಆರ್ಥಿಕ ಸಹಾಯಧನ ನೀಡಿದೆ. ದೇಶದ 81 ಕೋಟಿ ಜನರು ಕೇಂದ್ರದ ಯೋಜನೆಗಳ ಲಾಭ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ ಜಿಲ್ಲೆಯ 31 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 21 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಇರುವುದು ಚಿಂಚೋಳಿ ತಾಲೂಕಿನಲ್ಲಿ. ವನ್ಯಜೀವಿ ಧಾಮ, ಚಂದ್ರಂಪಳ್ಳಿ ಜಲಾಶಯ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿವೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಚಂದ್ರಂಪಳ್ಳಿ, ಕುಂಚಾವರಂ ವೀಕ್ಷಿಸಿ ಚಂದ್ರಂಪಳ್ಳಿಯಲ್ಲಿ ಅರಣ್ಯ ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕೂಡಲೇ ಕಾಲೇಜು ಮಂಜೂರು ಮಾಡಬೇಕೆಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.
ಪ್ರಾದೇಶಿಕ ಅರಣ್ಯ ಕಲಬುರಗಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಾದ್ಯಂತ 300 ಕ್ಕೂ ಹೆಚ್ಚು ಟ್ರೀ ಪಾರ್ಕ್ ನಿರ್ಮಿಸಲಾಗಿದೆ. 8 ಎಕರೆ ಪ್ರದೇಶದ ಪೋಲಕಪಳ್ಳಿ ವೃಕ್ಷೋಧ್ಯಾನದಲ್ಲಿ ಪ್ರಸ್ತುತ ವಾಕ್ ಪಾತ್, ಮಕ್ಕಳ ಆಟಕ್ಕೆ ಉದ್ಯಾನವನವಿದ್ದು, ಮುಂದಿನ ದಿನದಲ್ಲಿ ರಾಕ್, ಬಟರ್ ಪ್ಲೈ, ಹಾಗೂ ಕ್ಯಾಚಪ್ ಗಾರ್ಡನ್ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ 9 ಕಿ.ಮೀ ಉದ್ದದ ಚಂದ್ರಂಪಳ್ಳಿ-ಗೊಟ್ಟಮಗೊಟ್ಟ ಚಾರಣ ಪಥದಲ್ಲಿ (Nature Trial) ಯಾವ ಸ್ಥಳದಲ್ಲಿ ಏನು ವೈಶಿಷ್ಟಗಳಿವೆ ಎಂಬುದರ ಕುರಿತು ಚಾರಣ ಪ್ರಿಯರಿಗೆ ಮಾಹಿತಿ ನೀಡುವ ಮೋಬೈಲ್ ತಂತ್ರಾಂಶ (App) ಮತ್ತು ಫಾರೆಸ್ಟ್ ಟ್ರೆಕ್ ಗೈಡ್ ಕಿರುಹೊತ್ತಿಗೆಯನ್ನು ಸಚಿವ ಉಮೇಶ ವಿ. ಕತ್ತಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಭಾಗವಾಗಿ ಸಚಿವರಾದ ಉಮೇಶ ಕತ್ತಿ, ಭಗವಂತ ಖೂಬಾ, ಶಾಸಕ ಡಾ. ಅವಿನಾಶ ಜಾಧವ ಅವರು ವೃಕ್ಷೋಧ್ಯಾನದಲ್ಲಿ ಗಿಡ ನೆಟ್ಟು ನೀರುಣಿಸಿದರು.
ಕಾರ್ಯಕ್ರಮದಲ್ಲಿ ಕೆ.ಕೆ.ಆರ್.ಟಿ.ಸಿ. ಮತ್ತು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಪೋಲಕಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಯ್ಯದ್ ಝಾಕೀರ್ ಸಾಬ್, ಕಲಬುರಗಿ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ವೆಂಕಟೇಸನ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಭಾವಿಕಟ್ಟಿ, ತಹಶೀಲ್ದಾರ ಅಂಜುಂ ತಬಸ್ಸುಮ್, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್.ಹಂಪಣ್ಣ, ಡಿ.ಎಸ್.ಪಿ ಬಸವೇಶ್ವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.