ನಾಪತ್ತೆಯಾಗಿದ್ದ ಆನೆ ದಂತ ಪತ್ತೆ! ;ಹಲವು ಅನುಮಾಗನಳು
Team Udayavani, Feb 27, 2019, 12:30 AM IST
ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕಾಣೆಯಾಗಿದ್ದ ಆನೆ ದಂತವು ಅದೇ ಕಟ್ಟಡದಲ್ಲಿ ಪತ್ತೆಯಾಗುವ ಮೂಲಕ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅಪರ ಪೊಲೀಸ್ ವರಿಷ್ಠಾ ಧಿಕಾರಿ ಮುತ್ತುರಾಜ್, ನೂತನ ಎಸ್‌ಪಿ ಎಂ. ಅಶ್ವಿನಿ ಅವರು ಅಧಿಕಾರ ವಹಿಸಿಕೊಂಡ ನಂತರ ಕಚೇರಿ ಮೇಲಿದ್ದ ದಾಸ್ತಾನು ಕೊಠಯಲ್ಲಿನ 8-10 ವರ್ಷಗಳ ಪೇಪರ್, ರಿಜಿಸ್ಟರ್ ಇರುವ ಕೊಠಡಿಯನ್ನು ಸ್ವತ್ಛ ಮಾಡಲು ಸೂಚಿಸಿದ್ದರು. ಅದರಂತೆ ಸೋಮವಾರ ಸ್ವತ್ಛತಾ ಕಾರ್ಯ ಆರಂಭವಾಗಿತ್ತು. ಈ ವೇಳೆ ಗೌರಮ್ಮ ಎಂಬ ಸಿಬ್ಬಂದಿಗೆ ಪೇಪರ್‌ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಆನೆ ದಂತ ಪತ್ತೆಯಾಗಿದೆ. ಈ ಮಾಹಿತಿ ತಿಳಿಸಿದ ಕೂಡಲೇ ಅದನ್ನು ತಕ್ಷಣ ವಶಕ್ಕೆ ಪಡೆಯಲಾಗಿದೆ. ಈ ವಿಷಯ ವನ್ನು ಸಿಐಡಿ ಅ ಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. 2014ರ ನಂತರ ಆನೆ ದಂತ ಕಳುವಾಗಿದೆ ಎಂದು ಹಿಂದಿನ ಎಸ್‌ಪಿ ಅಭಿನವ್ ಖರೆ ಅವರು ತನಿಖೆಗೆ ಆದೇಶಿಸಿದ್ದರು. ಪ್ರಾಥಮಿಕ ತನಿಖೆ ಮಾಡಿ ಕಳೆದ ವರ್ಷ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ತನಿಖೆ ಮುಂದುವರಿದು ಜನವರಿ ತಿಂಗಳಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.
ಭಾರೀ ಗಾತ್ರದ ಆನೆದಂತಗಳು ಎಸ್ಪಿ ಕಚೇರಿಗೆ ಮುಕುಟ ಪ್ರಾಯದಂತೆ ಇದ್ದವು. ಅಧಿಕಾರ ಹಸ್ತಾಂತರ ಸಂದರ್ಭಗಳಲ್ಲೆಲ್ಲ ಅ ಧಿಕಾರಿಗಳು ದಂತಗಳ ಮುಂದೆ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಆಕರ್ಷಕವಾಗಿದ್ದ ದಂತಗಳು ಮುರುಗನ್ ಅವರು ಅಧಿ ಕಾರ ಸ್ವೀಕರಿಸಿದಾಗಲೂ ಇದ್ದವು. ಆದರೆ, ಆನಂತರದ ಐದಾರು ವರ್ಷಗಳಲ್ಲಿ ದಂತಗಳು ನಾಪತ್ತೆಯಾದವು.ಟೇಬಲ್ ಮೇಲೆ ಅಲಂಕೃತ ಮರದ ಪೀಠದ ಮೇಲೆ ಸುಂದರವಾಗಿ ಇಡಲಾಗಿದ್ದ ದಂತವನ್ನು ಯಾರು ಅಪಹರಿಸಿದರು ಎಂಬುದು ನಿಗೂಢವಾಗಿದೆ. ಇದರ ಆಧಾರದ ಮೇಲೆ ಹುಡುಕಿದಾಗ ದಂತ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ 2018ನೇ ಮೇ 22ರಂದು ಎಸ್‌ಪಿ ಕಚೇರಿಯ ರಹಸ್ಯ ಶಾಖೆಯ ಶೀಘ್ರ ಲಿಪಿಗಾರ ಎ.ಬಿ.ಶ್ರೀನಾಥ್ ಅವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಕಮಲ್ ಪಂತ್ ಅಗಮಿಸಿ ತನಿಖೆಗೆ ಚುರುಕು ನೀಡುವ ಪ್ರಯತ್ನ ನಡೆಸಿದ್ದರು. ಅದರ ಭಾಗವಾಗಿ ಕರ್ತವ್ಯ ಲೋಪದ ಆಧಾರದ ಮೇಲೆ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಲಾಗಿತ್ತು. ಇನ್ಸ್ ಪೆಕ್ಟರ್‌ಗೆ ತನಿಖೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ, ತನಿ ಖೆಯಲ್ಲಿ ಯಾವುದೇಪ್ರಗತಿಯಾಗಿರಲಿಲ್ಲ.
ನಂತರ ಇದನ್ನು ಜನವರಿ 2019ರಲ್ಲಿ ಸಿಐಡಿ ತನಿಖೆಗೆವಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.