ಹಿಜಾಬ್ ವಿಚಾರ: ಹೈಕೋರ್ಟಿನ ಆದೇಶ ಚಾಲ್ತಿಯಲ್ಲಿರುತ್ತದೆ; ಶಾಸಕ ರಘುಪತಿ ಭಟ್
Team Udayavani, Oct 13, 2022, 7:39 PM IST
ರಬಕವಿ-ಬನಹಟ್ಟಿ: ಇಂದಿನ ಹಿಜಾಬ್ ವಿಷಯದಲ್ಲಿ ಸ್ಪಷ್ಟ ನಿರ್ಧಾರವಾಗಿಲ್ಲ. ಇದು ತ್ರೀ ಸದಸ್ಯ ಇಲ್ಲವೇ ಪಂಚ ಸದಸ್ಯ ಪೀಠಕ್ಕೆ ಹೋಗುವ ಸಂಭವವಿದೆ. ಅಲ್ಲಿಯವರೆಗೆ ಹೈಕೋರ್ಟಿನ ಆದೇಶ ಚಾಲ್ತಿಯಲ್ಲಿರುತ್ತದೆ. ಇವತ್ತಿನ ಆದೇಶದಿಂದ ಶಾಲೆಯ ಒಳಗೆ ಹಿಜಾಬನ್ನು ಹಾಕಬಾರದು ಎಂಬ ಸರಕಾರದ ಆದೇಶ ಮುಂದುವರೆಯುತ್ತದೆ. ಎರಡು ಸದಸ್ಯರು ಅದನ್ನು ನಿರಾಕರಿಸಿದ್ದರೆ ಮಾತ್ರ ಅದನ್ನು ತೆಗೆಯಬೇಕಾಗಿತ್ತು. ಶಾಲೆಯ ಒಳಗೆ ಹಿಜಾಬ್ ತೆಗೆದಿಟ್ಟು ಶಾಲೆ ಪ್ರವೇಶಿಸುವ ನಮ್ಮ ನಿಲುವಿನಲ್ಲಿ ಯಾವುದೇ ದಕ್ಕೆ ಬಂದಿಲ್ಲ ಎಂದು ಉಡಪಿ ಶಾಸಕ ರಘುಪತಿ ಭಟ್ ಹೇಳಿದರು.
ಗುರುವಾರ ಸಂಜೆ ಬನಹಟ್ಟಿಯ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಬಂದಂತಹ ತೀರ್ಪಿನಲ್ಲಿ ಎರಡು ಸುಪ್ರೀಂ ಕೋರ್ಟ್ ನಲ್ಲಿ ಎರಡು ಅಭಿಪ್ರಾಯಗಳು ಬಂದಿವೆ. ಈ ಎರಡು ಅಭಿಪ್ರಾಯಗಳಲ್ಲಿ ಒಬ್ಬರು ಹೈಕೋರ್ಟಿನ ಆದೇಶ ಎತ್ತಿ ಹಿಡಿದಿದ್ದು ಮತ್ತು ಅರ್ಜಿದಾರದು ವಜಾ ಮಾಡಿದ್ದಾರೆ ಇನ್ನೋಬ್ಬರು ಕೆಲವು ಕಾರಣಗಳನ್ನು ಕೊಟ್ಟು ಅವರ ಆದೇಶದಲ್ಲಿ ಕೆಲವು ಹಳ್ಳಿಯ ಭಾಗದಲ್ಲಿ ಹೆಣ್ಣು ಮಕ್ಕಳ ವಿದ್ಯಾಬ್ಯಾಸ ಮುಗಿಸಲು ಹಿಜಾಬ್ ಬೇಕು ಎಂದು ವಾದ ಮಂಡಿಸಿದ್ದಾರೆ ಎಂದರು.
ಇನ್ನೂ ಸ್ಪಷ್ಟವಾದ ಆದೇಶ ತ್ರೀ ಸದಸ್ಯ ಇಲ್ಲವೇ ಪಂಚ ಸದಸ್ಯರ ಪೀಠದ ಸುಪ್ರೀಂ ಸದಸ್ಯರು ಮಾಡಿದ ನಂತರ ತಿಳಿಯುತ್ತದೆ. ಅಲ್ಲಿಯೂ ಕೂಡಾ ನಾವು ಸರಿಯಾದ ದಾಖಲೆಯನ್ನು ಒದಗಿಸುತ್ತೇವೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟನಲ್ಲಿ ನಮ್ಮ ಸರಕಾರಿ ವಕೀಲರು ಸರಿಯಾದ ದಾಖಲೆಯನ್ನು ಒದಗಿಸಿದ್ದಾರೆ. ಪಂಚ ಸಮಿತಿಗೆ ಒದಗಿಸಲು ನಮ್ಮಲ್ಲಿ ಎಲ್ಲ ದಾಖಲೆಗಳಿವೆ. ಯಾವುದೇ ದಾಖಲೆ ಇಲ್ಲದೇ ನಾವು ಮಾತನಾಡುವುದಿಲ್ಲ. 15-20 ವರ್ಷದಿಂದ ಹಿಜಾಬ್ ತೆಗೆದಿಟ್ಟು ಶಾಲೆಗೆ ಬರುತ್ತಿದ್ದ ಮಕ್ಕಳು ಸಿಎಫ್‌ಐ ಅವರ ಪ್ರಚೋದನೆಯಿಂದ ಡಿಸೆಂಬರ್ 27 ರಿಂದ ಹಿಜಾಬ್ ಬೇಕು ಎಂದು ಹೇಳಿದ್ದಾರೆ. 45 ದಿಣ ಹಿಜಾಬ್ ತೆಗೆದಿಟ್ಟು ಶಾಲೆಗೆ ಬಂದಿರುವ ದಾಖಲೆಗಳು ನಮ್ಮ ಬಳಿ ಇವೆ. ಅದೇ ರೀತಿ ಮುಂದೆ ಸುಪ್ರೀಂನ ತ್ರೀ, ಪಂಚ ಸದಸ್ಯರ ಮುಂದೆ ದಾಖಲೆಗಳನ್ನು ಇಡುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.