ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತೀರ್ಮಾನಿಸುವುದು ಜನ,ಬಿಜೆಪಿ ನಾಯಕರಲ್ಲ: ರಮೇಶ್ ಕುಮಾರ್
Team Udayavani, Jul 27, 2022, 2:50 PM IST
ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುವುದು ರಾಜಕೀಯ ಸಹಜ. ಆದರೆ ಯಾರು ಅಧಿಕಾರಕ್ಕೆ ಬರಬೇಕೆಂದು ತೀರ್ಮಾನಿಸುವುದು ರಾಜ್ಯದ ಜನತೆಯೇ ಹೊರತು ಬಿಜೆಪಿ ನಾಯಕರಲ್ಲ ಎಂದು ರಾಜ್ಯ ವಿಧಾನಸಭೆ ಮಾಜಿ ಅಧ್ಯಕ್ಷರಾದ ಶಾಸಕ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ನಾಯಕರೇ ಹೇಳಿದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತೆಂದು ಕಾಂಗ್ರೆಸ್ ನಾಯಕರು ಹೇಳಿದರೆ ಅದರ ರಾಜಕಾರ ಏನಿರುತ್ತೆ ಎಂದು ಪ್ರಶ್ನಿಸಿದ ರಮೇಶಕುಮಾರ, ಅವರ ಕೆಲಸ ಅವರು ಮಾಡಲಿ, ನಮ್ಮ ಕೆಲಸ ನಾವು ಮಾಡುತ್ತೇವೆ. ಅಂತಿಮವಾಗಿ ಜನ ತೀರ್ಮಾನಿಸುತ್ತಾರೆ ಎಂದರು.
ಬೆಳ್ಳಾರೆಯ ಪ್ರವೀಣ ಹತ್ಯೆಯನ್ನು ಖಂಡಿಸಿದ ರಮೇಶ್ ಕುಮಾರ್, ಇಂಥ ಯಾವುದೇ ಅಸಹಜ ಸಾವುಗಳು ನಾಗರಿಕ ಸಮಾಜಕ್ಕೆ ತರವಲ್ಲ. ಹಿಂದು, ಮುಸ್ಲೀಂ ಕ್ರೈಸ್ತ ಯಾರದೇ ಹತ್ಯೆಯಾದರೂ ಜೀವ ಒಂದೇ ಅಲ್ಲವೇ. ಜಾತಿ ಧರ್ಮದ ಹೆಸರಲ್ಲಿ ಹತ್ಯೆ ನಡೆಸುವುದು ನಾಗರಿಕತೆ ಅಲ್ಲ. ನಾಗರಿಕ ಸಮಾಜಕ್ಕೆ ಇದು ಶೋಭೆ ತರುವ ವಿಷಯವೂ ಅಲ್ಲ, ನಾಗರಿಕ ಸಮಾಜಕ್ಕೆ ಇಂಥ ಘಡನೆಗಳು ಅಪಮಾನ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಸಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ರ‍್ಯಾಗಿಂಗ್ ಕುಚೋದ್ಯ- ದಿಂಬು, ಸಹಪಾಠಿಗಳ ಜತೆ ಸೆಕ್ಸ್ ನಟನೆ..!ಪೋಷಕರ ಆಕ್ರೋಶ
ದುಡ್ಡು ಸಂಪಾದನೆ ಮಾಡಿದ್ದೇವೆಂದು ಹೇಳಿದೆನಾ.?: ರಮೇಶ್ ಕುಮಾರ್
ವಿಜಯಪುರ: ಸೋನಿಯಾ ಗಾಂಧಿ ಪರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಹೋರಾಟದಲ್ಲಿ ನಾನು ಮಾತನಾಡಿದ್ದನ್ನು ನೀವು (ಮಾಧ್ಯಮದವರು) ಕಟ್-ಪೇಸ್ ಮಾಡಿದರೆ ನಾನೇನು ಮಾಡಲಿ. ದುಡ್ಡು, ಹಣ ಸಂಪಾದನೆ ಮಾಡಿದ್ದಾಗಿ ಹೇಳಿದೆನಾ? ಭಾವನಾತ್ಮಕವಾಗಿ ಮಾತನಾಡಿದ್ದನ್ನು ಮಾಧ್ಯಮದ ನೀವೇ ವಿವಾದ ಮಾಡಿದಿರಿ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ, ಹಾಲಿ ಶಾಸಕ ರಮೇಶಕುಮಾರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದೇಶದ ಸ್ವಾತಂತ್ರ್ಯ ಸಂಗ್ರಾಮ, ಬಲಿದಾನ, ಸ್ವಾತಂತ್ರ್ಯ ನಂತರ ನೆಹರು ಕುಟುಂಬದ ಕೊಡುಗೆ ಬಗ್ಗೆ ಮಾತನಾಡಿದೆ. ಆದರೆ ನಾನೆಲ್ಲೂ ಹಣದ ಬಗ್ಗೆ ಮಾತನಾಡಿಲ್ಲ. ಆದರೂ ನೀವು ನನ್ನ ಹೇಳಿಕೆಯನ್ನು ಕಟ್-ಪೇಸ್ಟ್ ಮಾಡಿದ್ದೇ ವಿವಾದಕ್ಕೆ ಕಾರಣವಾಯ್ತು ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.