Politics: “ಕಿಚ್ಚು” ಹೊತ್ತಿಸಿದ ಶಾಸಕ ಯತ್ನಾಳ್ “ಕನಸಿನ ಮಾತು”
Team Udayavani, Aug 15, 2023, 11:58 PM IST
“ಇನ್ನು ಆರು ತಿಂಗಳಲ್ಲಿ ರಾಜ್ಯ ಸರಕಾರ ಬೀಳುತ್ತದೆ’ ಎನ್ನುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಯತ್ನಾಳ್ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. “ಯತ್ನಾಳ್ ಹಗಲುಗನಸು ಕಾಣುವ ನಾಯಕ. ಅವರ ಕನಸು ಕನಸಾಗಿಯೇ ಉಳಿಯುತ್ತದೆ’ ಎಂದು ಸರಕಾರದ ಸಚಿವರು ಯತ್ನಾಳ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ನಡುವೆ “ಲೋಕಸಭೆ ಚುನಾವಣೆ ವೇಳೆ ರಾಜ್ಯ ಸರಕಾರ ಪತನಗೊಳ್ಳಲಿದೆ’ ಎಂಬ ಮಾಜಿ ಸಚಿವ ಸಿ.ಟಿ. ರವಿ ಹೇಳಿಕೆಗೂ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.
ಕಮಿಷನ್ ಹಣದ ಮದದಿಂದ ಸರಕಾರ ಬೀಳಿಸುವ ಮಾತು: ದಿಗ್ವಿಜಯ ಸಿಂಗ್
ಹುಬ್ಬಳ್ಳಿ: ಜನರ ಆಶೀರ್ವಾದದಿಂದ ಬಹುದೊಡ್ಡ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ದಿಗ್ವಿಜಯಸಿಂಗ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಹಾಗೂ ಶೇ. 40ರಷ್ಟು ಕಮಿಷನ್‌ನಿಂದ ಬೇಸತ್ತು ಕರ್ನಾಟಕದ ಮತದಾರರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಬಿಸಾಡಿದರೂ ಅವರಿಗೆ ಇನ್ನೂ ಬುದ್ದಿ ಬಂದಂತಿಲ್ಲ. ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರ ಹಿಡಿದ ಕಾಂಗ್ರೆಸ್ ಸರಕಾರ ಇನ್ನಾರು ತಿಂಗಳಲ್ಲಿ ಉರುಳಲಿದೆ ಎಂಬುದು ಬಿಜೆಪಿ ನಾಯಕರ ಅನಿಸಿಕೆಯಾಗಿದೆ. ಕಮಿಷನ್ ಹಣ ಜಮಾ ಆಗಿರುವ ಅಹಂಕಾರದಿಂದ ಇಂತಹ ಮಾತುಗಳನ್ನು ಹೇಳುತ್ತಿದ್ದಾರೆ. ಹಿಂದಿನಂತೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯಬಹುದೆಂಬ ಆಲೋಚನೆಯಲ್ಲಿದ್ದಾರೆ. ಅದು ಅಸಾಧ್ಯದ ಮಾತು ಎಂದರು.
ಯತ್ನಾಳ್ ಹಗಲು ಕನಸು ಕಾಣುವ ನಾಯಕ
ಕೊಪ್ಪಳ: ಆರು ತಿಂಗಳಲ್ಲಿ ಸರಕಾರ ಬೀಳುತ್ತದೆ ಎನ್ನುವ ಬಸನಗೌಡ ಯತ್ನಾಳ್‌ಗೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ. ಅವರು ಹಗಲುಗನಸು ಕಾಣುವ ನಾಯಕ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಮೊದಲು ವಿಪಕ್ಷ ನಾಯ
ಕನನ್ನು ಮಾಡಲಿ. ಯತ್ನಾಳ್, ಸಿ.ಟಿ. ರವಿ ಹಾಗೂ ಬೊಮ್ಮಾಯಿಯವರಾಗಲಿ ಮೊದಲು ತಮ್ಮ ಪಕ್ಷ ಸರಿಪಡಿಸಿಕೊಳ್ಳಲಿ. ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಲಿ ಎಂದಿರುವ ಶಾಸಕ ಯತ್ನಾಳ್, ಮೊದಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಿ. ನಾವು ತನಿಖೆಗೆ ಸಹಕರಿಸುತ್ತೇವೆ. ನಮ್ಮ ಪಕ್ಷ ಅಧಿ ಕಾರಕ್ಕೆ ಬಂದ ತತ್‌ಕ್ಷಣ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದರಿಂದ ಅವರಿಗೆ ಹೊಟ್ಟೆಕಿಚ್ಚು ಶುರುವಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ವಿಶ್ವಾಸವಿಲ್ಲದ ಬಿಜೆಪಿ ನಾಯಕರಿಗೆ ಬಹುಮತದ ಸರಕಾರ ರಚಿಸಲು ಆಗಿಲ್ಲ. ಆದರೆ, ರಾಜ್ಯದ ಜನ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಯತ್ನಾಳ್ ಕನಸು ಕನಸಾಗಿಯೇ ಉಳಿಯುತ್ತದೆ. ಜಗದೀಶ ಶೆಟ್ಟರ್ ಬಗ್ಗೆ ಟೀಕಿಸುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಷ್ಟು ಪಕ್ಷ ಬದಲಿಸಿದ್ದಾರೆ ಎಂಬುದನ್ನು ವಿವರಿಸಬೇಕಿಲ್ಲ. – ಡಾ| ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಸಚಿವ
ಆರು ತಿಂಗಳಲ್ಲಿ ಸರಕಾರ ಪತನವಾಗಲಿದೆ ಎಂದು ಹಗಲುಗನಸು ಕಾಣುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ವಿಜಯಪುರ ಜಿಲ್ಲೆಯಲ್ಲಿನ ಕಾಂಗ್ರೆಸ್ ಶಾಸಕರೇ ಅವರ ಸಂಪರ್ಕದಲ್ಲಿಲ್ಲ. ಇನ್ನು 25 ಜನ ಶಾಸಕರು ಎಲ್ಲಿಂದ ಬಿಜೆಪಿ ಸೇರುತ್ತಾರೆ?
– ಶಿವಾನಂದ ಪಾಟೀಲ್, ಸಚಿವ
ಬಿಜೆಪಿ ನಾಯಕರು ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು, ಅದನ್ನು ಮೊದಲು ಸರಿಪಡಿಸಿಕೊಳ್ಳಲಿ. ಸಕ್ರಿಯ ವಿಪಕ್ಷದಿಂದ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯುತ್ತದೆ. ಆದರೆ, ರಾಜ್ಯದಲ್ಲಿ ಹೊಸ ಸರಕಾರ ಅ ಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದರೂ ಈವರೆಗೆ ಬಿಜೆಪಿಯವರಿಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.
– ಈಶ್ವರ ಖಂಡ್ರೆ, ಅರಣ್ಯ ಸಚಿವ
ತಿಂಗಳಲ್ಲಿ ಸರಕಾರ ಬೀಳುತ್ತದೆ ಎನ್ನುವ ಯತ್ನಾಳ್, ಬಸ್ ನಿಲ್ದಾಣದಲ್ಲಿ ಖಾಲಿ ಇರುವ ಜಾಗದಲ್ಲಿ ಕುಳಿತು ಗಿಣಿಶಾಸ್ತ್ರ ಹೇಳಲಿ. ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿರುವ ಬಗ್ಗೆ ಸಾಕ್ಷಾಧಾರ ನೀಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಸಿಎಂ ಸಹ ಇದನ್ನೇ ಹೇಳಿದ್ದಾರೆ. - ಮಧು ಬಂಗಾರಪ್ಪ, ಶಿಕ್ಷಣ ಸಚಿವ
ನಾನು ಸಂಘದ ಸ್ವಯಂ ಸೇವಕ. ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ. ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ. ಅವರದ್ದು ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಅಂತ ನನಗೆ ಭಯ. ರಕ್ಷಣೆಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಅವರು(ಡಿ.ಕೆ.ಶಿವಕುಮಾರ್) ದೇಶದ ಶ್ರೀಮಂತ ಶಾಸಕ. ನನ್ನನ್ನು ಟಾರ್ಗೆಟ್ ಮಾಡಿದರೆ ಅವರು ಸಿಎಂ ಆಗಲು ಆಗಲ್ಲ. ನೀವು ಸಿಎಂ ಆಗಲು ಬೇರೆಯವರನ್ನು ಟಾರ್ಗೆಟ್ ಮಾಡಬೇಕು. – ಸಿ.ಟಿ. ರವಿ, ಮಾಜಿ ಸಚಿವ
ಲೋಕಸಭೆ ಚುನಾವಣೆ ವೇಳೆ ರಾಜ್ಯ ಸರಕಾರ ಪತನ: ಸಿ.ಟಿ. ರವಿ
ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಹೊತ್ತಿಗೆ ರಾಜ್ಯ ಸರಕಾರ ಬೀಳಬಹುದು. ನನಗೆ ಭವಿಷ್ಯ ಹೇಳಲು ಬರುವುದಿಲ್ಲ. ಯತ್ನಾ°ಳ್ ಅವರಿಗೆ ನಿಖರ ಮಾಹಿತಿ ಇರಬಹುದು. ಒಳ ಆಕ್ರೋಶ ಸ್ಫೋಟಗೊಂಡು ಸರಕಾರ ಬಿದ್ದರೂ ಬೀಳಬಹುದು ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಅಸಹನೆಯ ಆಕ್ರೋಶಕ್ಕೆ ತುತ್ತಾಗಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಬಿದ್ದರೂ ಬೀಳಬಹುದು. ಗ್ರಾ.ಪಂ.ನಂತೆ ಮುಖ್ಯಮಂತ್ರಿಗಳ ಹಂಚಿಕೆಯಾಗಿದೆ ಎಂಬ ಮಾಹಿತಿ ಇದೆ. ಸರಕಾರ ಬಂದು ಮೂರು ತಿಂಗಳಾಗಿಲ್ಲ. ಈಗಾಗಲೇ 30 ಶಾಸಕರು ಆಕ್ರೋಶ ಹೊರ ಹಾಕಿದ್ದಾರೆ. ದಲ್ಲಾಳಿಗಳ ಮೂಲಕ ಕೆಲಸ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನು ಗಮನಿಸಿದಾಗ ರಾಜ್ಯ ಸರಕಾರದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ಕೊಡುತ್ತದೆ ಎಂದರು.
ಯಾರೊಬ್ಬರಿಂದಲೂ ಸರಕಾರ ಪತನ ಅಸಾಧ್ಯ
ವಿಜಯಪುರ: ರಾಜ್ಯ ಸರಕಾರ, ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಬಿಜೆಪಿ ಶಾಸಕ ಯತ್ನಾಳ್, ತಮ್ಮ ಸರಕಾರ ಅಧಿ ಕಾರದಲ್ಲಿದ್ದಾಗ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ ವಿರುದ್ಧ ಏನೇನು ಆರೋಪ ಮಾಡಿದ್ದನ್ನು ಮರೆಯಬಾರದು. ನಮ್ಮ ಸರಕಾರ ಸುಭದ್ರವಾಗಿದ್ದು, ಯಾರೊಬ್ಬರಿಂದಲೂ ಅಸ್ಥಿರಗೊಳಿಸಲು ಆಗುವುದಿಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಅವರ ಮಗ ಬಿ.ವೈ. ವಿಜಯೇಂದ್ರ ಮಾಡುತ್ತಿರುವ ಭ್ರಷ್ಟಾಚಾರ ಮಿತಿ ಮೀರಿದೆ. 10 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿರುವ ಯಡಿಯೂರಪ್ಪ ಹಾಗೂ ಅವರ ಮಗ ಮಾರಿಷಸ್ ಪ್ರವಾಸಕ್ಕೆ ಪದೇ ಪದೇ ಹೋಗುತ್ತಿರುವುದೇ ಅದಕ್ಕಾಗಿ ಎಂದು ಇದೇ ಯತ್ನಾಳ್ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ವೀಡಿಯೋಗಳನ್ನು ರಾಜ್ಯದ ಜನರು ನೋಡಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.