MLC Election: 78 ಅಭ್ಯರ್ಥಿಗಳು ಅಂತಿಮ; 12 ಮಂದಿ ಕಣದಿಂದ ಹಿಂದಕ್ಕೆ

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಗರಿಷ್ಠ 19 ಮಂದಿ ಕಣದಲ್ಲಿ

Team Udayavani, May 20, 2024, 11:28 PM IST

MLC Election: 78 ಅಭ್ಯರ್ಥಿಗಳು ಅಂತಿಮ; 12 ಮಂದಿ ಕಣದಿಂದ ಹಿಂದಕ್ಕೆ

ಬೆಂಗಳೂರು: ರಾಜ್ಯದಲ್ಲಿ ಜೂನ್‌ 3ರಂದು ನಡೆಯಲಿರುವ ಮೂರು ಶಿಕ್ಷಕರು ಮತ್ತು ಮೂರು ಪದವೀಧರ ಕ್ಷೇತ್ರಗಳ ಅಂತಿಮ ಅಖಾಡದಲ್ಲಿ ಒಟ್ಟು 78 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಹನ್ನೆರಡು ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಗರಿಷ್ಠ 19 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಒಬ್ಬರು ನಾಮಪತ್ರ ಹಿಂಪಡೆದಿದ್ದು 15 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಒಬ್ಬರು ನಾಮಪತ್ರ ಹಿಂಪಡೆದಿದ್ದು, ಹತ್ತು ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಒಬ್ಬರು ನಾಮಪತ್ರ ಹಿಂಪಡೆದಿದ್ದು, 15 ಮಂದಿ ಕಣದಲ್ಲಿ ಉಳಿದಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇಬ್ಬರು ನಾಮಪತ್ರ ಹಿಂಪಡೆದಿದ್ದು, 11 ಮಂದಿ ಕಣದಲ್ಲಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಬ್ಬರು ನಾಮಪತ್ರ ಹಿಂಪಡೆದಿದ್ದು, 8 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಮಾತ್ರ ಮಹಿಳೆಯೊಬ್ಬರು ಕಣದಲ್ಲಿದ್ದಾರೆ.

ಅಂತಿಮ ಮತದಾರರ ಪಟ್ಟಿ ಪ್ರಕಟ
ಈ ನಡುವೆ ಚುನಾವಣ ಆಯೋಗವು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರು ಪದವೀಧರ ಕ್ಷೇತ್ರಗಳಲ್ಲಿ ಒಟ್ಟು 3,63,573 ಮಂದಿ ಮತದಾರರಿದ್ದಾರೆ. ಮೂರು ಶಿಕ್ಷಕರ ಕ್ಷೇತ್ರದಲ್ಲಿ 70,260 ಮತದಾರರಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 1,56 ಲಕ್ಷ, ನೈಋತ್ಯ ಪದವೀಧರ ಕ್ಷೇತ್ರದಲ್ಲಿ 85,090 ಮತ್ತು ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 1.21 ಲಕ್ಷ ಮತದಾರರಿದ್ದಾರೆ. ಇನ್ನು ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 25,309, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 23,402 ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 21,549 ಮತದಾರರಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 159, ನೈರುತ್ಯ ಪದವೀಧರ ಕ್ಷೇತ್ರದಲ್ಲಿ 108, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 194 ಮತದಾನ ಕೇಂದ್ರಗಳಿರಲಿವೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 47, ನೈಋತ್ಯ ಕ್ಷೇತ್ರದಲ್ಲಿ 79 ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 44 ಮತಗಟ್ಟೆಗಳಿವೆ.

ಲೋಕಸಭಾ ಚುನಾವಣೆಯ ಮಾದರಿಯಲ್ಲಿಯೇ ಈ ಚುನಾವಣೆಯಲ್ಲಿಯೂ ಮತಕೇಂದ್ರದ ಮಾಹಿತಿ ಇರುವ ಕ್ಯೂಆರ್‌ ಕೋಡ್‌ ಇರುವ ವೋಟರ್‌ ಸ್ಲಿಪ್‌ಗ್ಳನ್ನು ಮತದಾರರಿಗೆ ವಿತರಿಸಲಾಗುವುದು ಎಂದು ಚುನಾವಣ ಆಯೋಗ ಹೇಳಿದೆ.

ಮತದಾನಕ್ಕೆ ಮತದಾರರ ಗುರುತು ಚೀಟಿ ಹೊಂದಿರುವುದು ಕಡ್ಡಾಯ. ಒಂದು ವೇಳೆ ಗುರುತು ಚೀಟಿ ಇಲ್ಲದಿದ್ದಲ್ಲಿ ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌, ಪಾನ್‌ಕಾರ್ಡ್‌, ಭಾರತೀಯ ಪಾಸ್‌ಪೋರ್ಟ್‌, ಸೇವಾ ಗುರುತಿನ ಪತ್ರ, ಡಿಗ್ರಿ ಅಥವಾ ಡಿಪ್ಲೊಮಾದ ಒರಿಜಿನಲ್‌ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರ ನೀಡಿರುವ ವಿಕಲಚೇತನತೆಯ ಪ್ರಮಾಣ ಪತ್ರವನ್ನು ಬಳಸಿ ಮತದಾನ ಮಾಡಬಹುದು.

ಟಾಪ್ ನ್ಯೂಸ್

ಸರ್ಕಾರ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಬಿ.ವೈ.ರಾಘವೇಂದ್ರ

Shimoga; ರಾಜ್ಯ ಸರ್ಕಾರ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಬಿ.ವೈ.ರಾಘವೇಂದ್ರ

ಸಂತೋಷ್ ಲಾಡ್

Shiggavi Bypoll; ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ: ಸಂತೋಷ್ ಲಾಡ್

ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ ?: ಜೀವನದ ಪ್ರಯಾಣದಲ್ಲಿ ಎಲ್ಲವನ್ನು ಅನುಭವಿಸಬೇಕು

INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ

INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ

Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ

Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂತೋಷ್ ಲಾಡ್

Shiggavi Bypoll; ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ: ಸಂತೋಷ್ ಲಾಡ್

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

3-Shivamogga

Shivamogga: ಅಂಬ್ಯುಲೆನ್ಸ್ – ಬೈಕ್ ಅಪಘಾತ ; ಮೂವರು ಬೈಕ್ ಸವಾರರು ಸಾವು

2-gadag

Gadag: ಪೊಲೀಸರ ಮೇಲೆ‌ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

7

Theft: ಬೈಕ್‌ನಲ್ಲಿ ಬಂದು ಮಾಂಗಲ್ಯ ಸರ ಕಳವು ಮಾಡಿದ್ದ ಇಬ್ಬರ ಬಂಧನ

9-ptr-bus

Puttur: ಅನುಮತಿ ಇಲ್ಲದ ಕಡೆ ಏರಿಯಾ ಸ್ಕೀಂನಲ್ಲಿ ಬಸ್‌

ಸರ್ಕಾರ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಬಿ.ವೈ.ರಾಘವೇಂದ್ರ

Shimoga; ರಾಜ್ಯ ಸರ್ಕಾರ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಬಿ.ವೈ.ರಾಘವೇಂದ್ರ

6

Actor Darshan: ಜೈಲಿನ ಬಳಿ ಯಾರೂ ಬರಬೇಡಿ; ಫ್ಯಾನ್ಸ್‌ಗೆ ದರ್ಶನ್‌ ಮನವಿ

Bengaluru: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐಗೆ 2 ರೂ. ಲಕ್ಷ ದಂಡ

Bengaluru: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐಗೆ 2 ರೂ. ಲಕ್ಷ ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.