ಪರಿಷತ್ ಫೈಟ್: ಮತದಾನ ಆರಂಭ, ಗೆಲುವಿನ ವಿಶ್ವಾಸದಲ್ಲಿ ಪಕ್ಷಗಳು
Team Udayavani, Dec 10, 2021, 9:30 AM IST
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ಶುಕ್ರವಾರ (ಡಿ.10) ಮತದಾನ ಆರಂಭವಾಗಿದೆ. ಒಟ್ಟು 99 ಸಾವಿರ ಮತದಾರರು ಕಣದಲ್ಲಿರುವ 90 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ಮತದಾನಕ್ಕಾಗಿ 6,072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನ ದಿನದ ಚುನಾವಣಾ ಪ್ರಕ್ರಿಯೆಗಳ ನಿರ್ವಹಣೆಗೆ 7,073 ಚುನಾವಣಾಧಿಕಾರಿಗಳು, 9,344 ಮತದಾನ ಅಧಿಕಾರಿಗಳು ಮತ್ತು 6,648 ವೀಕ್ಷಕರನ್ನು ನಿಯೋಜಿಸಲಾಗಿದೆ. ಒಟ್ಟು 99,062 ಮತದಾರರಲ್ಲಿ 47,205 ಪುರುಷರು, 51, 854 ಮಹಿಳೆಯರು ಹಾಗೂ ಮೂವರು ತೃತೀಯ ಲಿಂಗಿ ಮತದಾರರು ಇದ್ದಾರೆ.
ಇದನ್ನೂ ಓದಿ:ಬೆಳಗಾವಿ ಅಧಿವೇಶನದಲ್ಲಿ ಉ.ಕರ್ನಾಟಕದ ನೀರಾವರಿ ಸಮಸ್ಯೆಗಳ ಚರ್ಚೆ: ಸಿಎಂ ಬೊಮ್ಮಾಯಿ
ಬೆಳಗಾವಿಯಲ್ಲಿ ಅತಿ ಹೆಚ್ಚು 8,875 ಹಾಗೂ ಕೊಡಗಿನಲ್ಲಿ ಅತಿ ಕಡಿಮೆ 1,334 ಮತದಾರರು ಇದ್ದಾರೆ. ಕಣದಲ್ಲಿರುವ ಒಟ್ಟು 90 ಅಭ್ಯರ್ಥಿಗಳಲ್ಲಿ 89 ಪುರುಷರು, ಒಬ್ಬ ಮಹಿಳೆ ಇದ್ದಾರೆ. ಅಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ 20, ಜೆಡಿಎಸ್‌ನ 6, ಇತರೆ ಪಕ್ಷಗಳ 11 ಹಾಗೂ ಪಕ್ಷೇತರರು 33 ಮಂದಿ ಅಭ್ಯರ್ಥಿಗಳು ಇದ್ದಾರೆ.
ಖೂಬಾ ಮತದಾನ
ಬೀದರ್: ಇಲ್ಲಿನ ನಗರಸಭೆ ಕಚೇರಿ ಮತಗಟ್ಟೆಯಲ್ಲಿ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಮತದಾನ ಮಾಡಿದರು.
ನಗರಸಭೆಯ ಮತಗಟ್ಟೆ ಸಂಖ್ಯೆ 1 ರಲ್ಲಿ ಮತದಾನದ ಹಕ್ಕು ಚಲಾಯಿಸಿದರು. ಬೀದರ ಕ್ಷೇತ್ರದಲ್ಲಿ ಎಲ್ಲೆಡೆ ಬಿಜೆಪಿ ಪರ ಅಲೆ ಇದ್ದು, 500 ಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಗೆದ್ದು ವಿಧಾನ ಪರಿಷತ್ ಪ್ರವೇಶಿಸಲಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.