![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jun 18, 2021, 10:55 AM IST
ಬೆಂಗಳೂರು: ಗುರುವಾರ ಸಿಎಂ ಯಡಿಯೂರಪ್ಪ ಮಾತನಾಡಿ ಸ್ವಪಕ್ಷೀಯರ ಟೀಕೆಗೆ ಗುರಿಯಾಗಿದ್ದ ಮಾಜಿ ಸಚಿವ, ಎಂಎಲ್ ಸಿ ಹೆಚ್.ವಿಶ್ವನಾಥ್ ಇಂದು ಮತ್ತೆ ಸಿಎಂ, ಬಿಜೆಪಿ ಶಾಸಕರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಲಕ್ಷ್ಮಣ ರೇಖೆ ಇದೆ. 75 ವರ್ಷ ಮೀರಿದವರಿಗೆ ಆಡಳಿತ ವೇಗ ಇರುವುದಿಲ್ಲ, ವಯಸ್ಸು, ಆರೋಗ್ಯದಿಂದ ಯಡಿಯೂರಪ್ಪ ಬಳಲಿದ್ದಾರೆ. ಯಡಿಯೂರಪ್ಪ ಅವರಿಗೆ ಶಕ್ತಿ ಇತ್ತು. ಆದರೆ ಈಗ ಮೊದಲಿನ ಶಕ್ತಿಇಲ್ಲ. ಹಾಗಾಗಿ ಸರ್ಕಾರದಿಂದ ಆಗುತ್ತಿರುವ ಅನಾಹುತ ತಪ್ಪಿಸಬೇಕು, ಸರ್ಕಾರಕ್ಕೆ ಚಿಕಿತ್ಸೆ ನೀಡಬೇಕು. ಹೀಗಾಗಿ ನಾಯಕತ್ವ ವಿಚಾರವೇ ಅತ್ಯಂತ ಮುಖ್ಯ ಎಂದರು.
ನಾನು ನಿನ್ನೆ ಅರುಣ್ ಸಿಂಗ್ ಭೇಟಿ ಮಾಡಿದ್ದೆ. ಪಕ್ಷದ ರಾಜಕಾರಣ, ಆಡಳಿತ, ವ್ಯವಸ್ಥೆ ಇದರ ಬಗ್ಗೆ ಸವಿಸ್ತಾರವಾಗಿ ನಿವೇದನೆ ಮಾಡಿಕೊಂಡಿದ್ದೇನೆ. ಇದೇ ರೀತಿ ಹೋದರೆ ದುರಂತ ಅನುಭವಿಸಬೇಕಾಗುತ್ತದೆ. 2024ರ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದೇನೆ ಎಂದರು.
ಇದನ್ನೂ ಓದಿ:ಅರುಣ್ ಸಿಂಗ್ ಭೇಟಿಯಾದ ಪಂಚಮಸಾಲಿ ಪೀಠದ ಶ್ರೀ: ಸಿಎಂ ಸ್ಥಾನಕ್ಕೆ ಸಮುದಾಯದ ಪರ ಬ್ಯಾಟಿಂಗ್?
ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ. ಇಲ್ಲಿಯೂ ಕುಟುಂಬ ರಾಜಕಾರಣ ನಿಲ್ಲಬೇಕು ಎಂದ ಅವರು, ಬಹುಪರಾಕ್ ಹಾಕುವ ಮನುಷ್ಯ ನಾನಲ್ಲ. ಏನು ಹೇಳಬೇಕು ಅದು ಹೇಳಿದ್ದೇನೆ. ಬಿಜೆಪಿ ಎಂಎಲ್‌ಸಿಯಾಗಿ ಸತ್ಯ ಹೇಳಬೇಕು, ಇಲ್ಲವಾದರೆ ಪಕ್ಷಕ್ಕೆ ವಂಚನೆ, ದ್ರೋಹ ಮಾಡಿದಂತೆ ಎಂದರು.
ರೇಣುಕಾಚಾರ್ಯಗೆ ತಿರುಗೇಟು: ತಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದ ರೇಣುಕಾಚಾರ್ಯಗೆ ತಿರುಗೇಟು ನೀಡಿದ ವಿಶ್ವನಾಥ್, ಸತ್ಯ ಹೇಳುವವರ ವಿರುದ್ಧ ಕ್ರಮ ಆಗಬೇಕಾ? ‘ನಾನು ಪ್ಯೂರ್ ಬಿಜೆಪಿ, ನೀನು ಮಿಕ್ಸ್ ಬಿಜೆಪಿ’. ನೀನು ಕೆಜೆಪಿಯಿಂದ ಬಂದವನು. ನಿನ್ನ ನರ್ಸ್ ಜಯಲಕ್ಷ್ಮಿ ಕತೆ ಏನಾಯ್ತು? ಯಡಿಯೂರಪ್ಪ ವಿರುದ್ಧ ನೀನು ಹೈದರಾಬಾದ್‌ಗೆ ಹೋಗಿದ್ದೆ ಎಂದು ಆಕ್ರೋಶ ಹೊರಹಾಕಿದರು.
ಹರತಾಳು ಹಾಲಪ್ಪ ವಿರುದ್ದ ಕಿಡಿಕಾರಿದ ಅವರು, ಉಂಡ ಮನೆಗೆ ಮದ್ದು ಹಾಕುವೆ ಎನ್ನುತ್ತಾನೆ. ಗೆಳೆಯನ ಮನೆಗೆ ಊಟಕ್ಕೆ ಹೋಗಿ ಅತ್ಯಾಚಾರ ಮಾಡಲು ಹೋದವನು ನೀನು. ಅದರಿಂದ ಮಂತ್ರಿಗಿರಿ ಕಳೆದುಕೊಂಡಿದ್ದೆ ನೀನು ಟಾಂಗ್ ನೀಡಿದರು.
ಸಚಿವ ಈಶ್ವರಪ್ಪ ಬಗ್ಗೆ ಮಾತನಾಡಿದ ವಿಶ್ವನಾಥ್, ನಾವು ಬಂದಮೇಲೆ ತಾನೇ ಬಹುಮತ ಬಂದಿದ್ದು. ಈಶ್ವರಪ್ಪನವರೇ ಇಷ್ಟು ಸಣ್ಣ ವಿಷಯ ಅರ್ಥವಾಗುದಿಲ್ಲವೇ ಎಂದು ಪ್ರಶ್ನಸಿದರು.
ಇದನ್ನೂ ಓದಿ:ಬಿಎಸ್‌ವೈಗೆ ಶಾಸಕರ ಸಾಥ್ : 53 ಶಾಸಕರ ಅಭಿಮತ ಸಂಗ್ರಹಿಸಿದ ಅರುಣ್ ಸಿಂಗ್
ಇದು ಕೂಡ ಕುಟುಂಬ ರಾಜಕಾರಣದ ಗಿರಾಕಿ. ಈಶ್ವರಪ್ಪ ಯಾಕೆ ರಾಜ್ಯಪಾಲರ ಬಳಿ ಹೋಗಿದ್ದು? ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದೂರು ನೀಡಿಲ್ವಾ? ಈ ವಿಷಯ ಈಗ ಚರ್ಚೆಯಾಗುವುದಿಲ್ಲ. ಹೇಳುವಂತಹ ಧೈರ್ಯ ಯಾರಿಗೂ ಇಲ್ಲ ಎಂದರು.
ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ವಿಶ್ವನಾಥ್, ಆ ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡಿದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
Jayalalithaa Assets: ಮಾಜಿ ಸಿಎಂ ಜಯಲಲಿತಾ 27 ಕೆ.ಜಿ. ಚಿನ್ನಾಭರಣ ತಮಿಳುನಾಡು ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.