MLC; ನೈಋತ್ಯ ಪದವೀಧರರ ಕ್ಷೇತ್ರ: ಬಿಜೆಪಿಯ ಡಾ.ಧನಂಜಯ ಸರ್ಜಿ ಜಯಭೇರಿ
ಮೂರನೇ ಸ್ಥಾನಕ್ಕೆ ಕುಸಿದ ರಘುಪತಿ ಭಟ್
Team Udayavani, Jun 7, 2024, 1:01 AM IST
ಮೈಸೂರು: ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ವಿಧಾನ ಪರಿಷತ್ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಗುರುವಾರ ತಡರಾತ್ರಿ ಪೂರ್ಣಗೊಂಡಿದ್ದು, ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು 24,111 ಮತಗಳ ಭಾರಿ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಅಂತಿಮ ಸುತ್ತಿನ ವೇಳೆಗೆ 37,627 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು 24,111 ಮತಗಳ ಅಂತರದಿಂದ ಸೋಲಿಸಿದರು. ಮಂಜುನಾಥ್ 13,516 ಮತ ಪಡೆದರು.
ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಕೆ.ರಘುಪತಿ ಭಟ್ 7039 ಮತಗಳನ್ನು ಮಾತ್ರ ಗಳಿಸಿದರು. 66,497 ಸಾವಿರ ಮತಗಳ ಎಣಿಕೆ ಮಾಡಿದ್ದು. 5115 ಮತಗಳು ತಿರಸ್ಕೃತಗೊಂಡವು.
ನಾಲ್ಕನೇ ಸುತ್ತಿನಲ್ಲೇ ನಿಗದಿತ ಕೋಟಾ 30692 ತಲುಪಿದ್ದ ಮೈತ್ರಿ ಅಭ್ಯರ್ಥಿ ಸರ್ಜಿ ಐದನೇ ಸುತ್ತಿನಲ್ಲಿ 37627 ಮತಗಳಿಸಿ ಭರ್ಜರಿ ಗೆಲುವು ಸಾಧಿಸಿದರು. ಎಸ್ .ಪಿ.ದಿನೇಶ್ 2518 ಮತಗಳನ್ನು ಗಳಿಸಿದರು.
ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್ ಗೆಲುವಿನ ಪ್ರಮಾಣ ಪತ್ರ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.