ಮೊಬೈಲ್ ಕದ್ದ ಆರೋಪ: ಬಾಲಕಿ ಆತ್ಮಹತ್ಯೆ
Team Udayavani, Sep 12, 2019, 3:02 AM IST
ಶಹಾಪುರ: ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ ಮೊಬೈಲ್ ಕದ್ದ ಆರೋಪದಿಂದ ಮನನೊಂದ 9ನೇ ತರಗತಿ ವಿದ್ಯಾರ್ಥಿನಿ, ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆ. ಲಕ್ಷ್ಮೀ ಮಲ್ಲಣ್ಣ (14) ಮೃತ ವಿದ್ಯಾರ್ಥಿನಿ. ಶಹಾಪುರ ತಾಲೂಕಿನ ಅರಳಳ್ಳಿ ಗ್ರಾಮದ ಈ ಬಾಲಕಿ, ಕಲಬುರಗಿ ಎನ್.ವಿ. ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾನಗರದ ಬಾಲಕಿಯರ ಹಾಸ್ಟೆಲ್‌ನಲ್ಲಿದ್ದಳು. ಸೆ.7ರಂದು ನಿಲಯದಲ್ಲಿ ಅಡುಗೆ ಸಹಾಯಕಿ ಯೊಬ್ಬರ ಮೊಬೈಲ್ ಕಳವಾಗಿದೆ ಎಂದು ನಿಲಯದ ಎಲ್ಲಾ ವಿದ್ಯಾರ್ಥಿನಿಯರ ಪೆಟ್ಟಿಗೆ ಪರಿಶೀಲಿಸಲಾಗಿತ್ತು.
ಆಗ ಯಾರ ಪೆಟ್ಟಿಗೆಯಲ್ಲೂ ಮೊಬೈಲ್ ಪತ್ತೆಯಾಗಲಿಲ್ಲ. ಆದರೂ, ಹಾಸ್ಟೆಲ್‌ನ ಅಡುಗೆ ಸಹಾಯಕರು ಲಕ್ಷ್ಮೀ ಮೇಲೆ ಆರೋಪ ಮಾಡಿದ್ದರು. ಇದರಿಂದ ಆಕೆ ಮನನೊಂದಿದ್ದಳು. ಮೊಹರಂ ರಜೆಗೆ ಮನೆಗೆ ತೆರಳಿದ್ದ ಲಕ್ಷ್ಮೀ, ರಜೆ ಮುಗಿದಿದ್ದರಿಂದ ಪೋಷಕರು ಮತ್ತೆ ಹಾಸ್ಟೆಲ್‌ಗೆ ಬಿಟ್ಟು ಬರುತ್ತಾರೆ ಎಂದು ಹೆದರಿ, ಮಂಗಳವಾರ ರಾತ್ರಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮೃತ ವಿದ್ಯಾರ್ಥಿನಿ ತಂದೆ ಮಲ್ಲಣ್ಣ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.