

Team Udayavani, Oct 18, 2024, 12:31 AM IST
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮೊಬೈಲ್ ಬಳಕೆ ಬಗ್ಗೆ ನಿರಂತರ ದೂರುಗಳು ಬರುತ್ತಿರುವ ಬೆನ್ನಲ್ಲೇ ಇತ್ತೀಚೆಗೆ ರೌಡಿಶೀಟರ್ ಸೋಮಶೇಖರ್, ಜೋಸೆಫ್ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಸಂದೇಶ ಕಳುಹಿಸಿರುವ ಕುರಿತು ಜೈಲಿನ ಅಧೀಕ್ಷಕರ ವಿರುದ್ಧವೇ ತನಿಖೆ ನಡೆಸುವಂತೆ ಕಾರಾಗೃಹ ಐಜಿಪಿಗೆ ಕೋರ್ಟ್ ಆದೇಶ ಹೊರಡಿಸಿದೆ.
2021ರಲ್ಲಿ ಕೋರಮಂಗಲದಲ್ಲಿ ನಡೆದಿದ್ದ ರೌಡಿಶೀಟರ್ ಜೋಸೆಫ್ ಬಾಬು ಅಲಿಯಾಸ್ ಬಬ್ಲು ಕೊಲೆಯಲ್ಲಿ ಬಂಧನಕ್ಕೊಳಗಾಗಿರುವ ರೌಡಿ ಸೋಮಶೇಖರ್ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಆಟೋ ಚಾಲಕನಾಗಿರುವ ಆರ್ಮುಗಂ ಇನ್‌ಸ್ಟಾಗ್ರಾಂ ಖಾತೆಯ ಮೆಸೆಂಜರ್‌ಗೆ ಸೆಪ್ಟಂಬರ್ 22ರಂದು ಸಲಗ ಸೋಮ ಹೆಸರಿನ ಐಡಿಯಿಂದ ಮೂರು ವಾಯ್ಸ ಮೆಸೇಜ್ ಕಳುಹಿಸಿದ್ದ. ಬಬ್ಲು ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳಬಾರದು. ಸಾಕ್ಷ್ಯ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಪ್ರಕರಣದ ಮಾಹಿತಿ ಪಡೆದಿರುವ ನ್ಯಾಯಾಲಯ, ಜೈಲು ಅಧೀಕ್ಷಕರ ವಿರುದ್ಧ ಐಜಿಪಿ ಸಮಗ್ರ ತನಿಖೆ ನಡೆಸಬೇಕು. ಅಲ್ಲದೆ, ಪ್ರಕರಣದ ವಿಚಾರಣೆ ಅಂತ್ಯವಾಗುವರೆಗೂ ಸಾಕ್ಷಿದಾರರಿಗೆ ಪ್ರಕರಣದ ತನಿಖಾಧಿಕಾರಿ ಹಾಗೂ ಕೋರಮಂಗಲ ಪೊಲೀಸರು ರಕ್ಷಣೆ ನೀಡಬೇಕು ಎಂದು ಸೂಚಿಸಿದೆ.
MUDA ಸೈಟ್ ಹಿಂದಿರುಗಿಸಿದ ನಂತರ ಇ.ಡಿ ನೋಟಿಸ್ ಕೊಡಲಾಗದು: ಪಾರ್ವತಿ ಪರ ವಕೀಲ ಸಂದೇಶ ಚೌಟ
Davanagere: ಹೆಬ್ಬಾಳ್ಕರ್- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್ ಖಾದರ್
Gadag: ಸಾಲ ನೀಡುವಾಗ ಗಿರವಿ, ಶ್ಯೂರಿಟಿ ಇಟ್ಟುಕೊಳ್ಳುವುದು ಅಪರಾಧ: ಡಿಸಿ ಸಿ.ಎನ್. ಶ್ರೀಧರ
Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು
ಅನ್ನಭಾಗ್ಯದಡಿ ಇನ್ನು ಅಕ್ಕಿ ಭಾಗ್ಯ; ಕೇಂದ್ರದಿಂದ ಅಕ್ಕಿ ಪೂರೈಕೆ ಕಾರಣ ರಾಜ್ಯದ ಈ ನಿರ್ಧಾರ
You seem to have an Ad Blocker on.
To continue reading, please turn it off or whitelist Udayavani.