ಬಿಜೆಪಿ ಜಾಲತಾಣದಲ್ಲಿ “ಮೋದಿ ಮತ್ತೂಮ್ಮೆ’
Team Udayavani, Mar 11, 2019, 12:38 AM IST
ಬೆಂಗಳೂರು: ಚುನಾವಣಾ ಆಯೋಗ ಭಾನುವಾರ ಸಂಜೆ ಲೋಕಸಭಾ ಚುನಾವಣೆ ದಿನಾಂಕ ಘೋಷಿಸುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹಿತವಾಗಿ ಪ್ರಮುಖ ನಾಯಕರು, ಸಂಸದರು ಸಾಮಾಜಿಕ ಜಾಲತಾಣದಲ್ಲಿ “ಮತ್ತೂಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಲು ಮತ ನೀಡುವ ದಿನ ಫಿಕ್ಸ್ ಆಗಿದೆ’ ಎಂಬ ಸಂದೇಶ ಹರಿಬಿಟ್ಟಿದ್ದಾರೆ.
ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ, ಕಾಂಗ್ರೆಸ್ ಮುಕ್ತ ಭಾರತಕ್ಕೆ ದಿನಾಂಕ ಘೋಷಣೆಯಾಗಿದೆ. ವಿರೋಧ ಪಕ್ಷದವರು ಸುಳ್ಳುಗಳನ್ನು ಹಣಿಯಲು ತಯಾರಾಗಿದ್ದಾರೆ. ನಾವು ಅದನ್ನು ಎದುರಿಸಿ ಅವರ ನಿಜಬಣ್ಣ ಬಯಲು ಮಾಡಲು ಸಿದ್ಧರಿದ್ದೇವೆ. ಈ ಚುನಾವಣೆ ಫಲಿತಾಂಶ ಭಾರತದ ಮಣ್ಣಿನ ಆಚರಣೆಯಾಗಲಿದೆಯೇ ಹೊರತು ಪಾಕಿಸ್ತಾನದ್ದಲ್ಲ. ಮತ್ತೂಮ್ಮೆ ಮೋದಿ ಸರ್ಕಾರ ಎಂದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಒಂದು ಮಿಷನ್‌ಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣವೆಂದರು. ಸಂಸದ ಪ್ರತಾಪ್‌ಸಿಂಹ ಪ್ರಧಾನಿ ಮೋದಿ ಅವರ ಭಾವಚಿತ್ರದ ಪೋಸ್ಟರ್ ಹಾಕಿ ನಮೋ ಎಗೈನ್-ಮೇ 23,2019 ಎಂದು ಟ್ವೀಟ್ ಮಾಡಿದ್ದಾರೆ.
ಹಾಗೆಯೇ 5 ವರ್ಷದಲ್ಲಿನ ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳ ಪಟ್ಟಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮೋದಿ ಮತ್ತೂಮ್ಮೆ ಎಂಬ ಪೋಸ್ಟರ್, ಬರಹ ಹರಿಬಿಡಲು ಆರಂಭಿಸಿದ್ದಾರೆ. “ಭ್ರಷ್ಟಾಚಾರವಿಲ್ಲದೇ 5 ವರ್ಷ ಪೂರೈಸಿದ ಏಕೈಕ ಸರ್ಕಾರ, ಜನ ಮೆಚ್ಚಿದ ಸರ್ಕಾರ, ಸೈನಿಕರಿಗೆ ಸೌಲಭ್ಯ, ದೇಶದ ಭದ್ರತೆ, ರಕ್ಷಣೆ ಆದ್ಯತೆಯಾಗಿಟ್ಟುಕೊಂಡಿರುವ ಸರ್ಕಾರ’ವೆಂಬ ಬರಹಗಳನ್ನು ವ್ಯಾಪಕವಾಗಿ ಹರಿಬಿಡಲು ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
MUST WATCH
ಹೊಸ ಸೇರ್ಪಡೆ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Karkala: ಸೆಲ್ಫಿ ಕಾರ್ನರ್ ಮಾಡಿದರೂ ತ್ಯಾಜ್ಯ ಎಸೆತ ನಿಂತಿಲ್ಲ!
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.