Dengue Cases ತಿಂಗಳಲ್ಲಿ 2,300ಕ್ಕೂ ಅಧಿಕ ಡೆಂಗ್ಯೂ ಪ್ರಕರಣ

6 ಮಂದಿ ಸಾವು ; ಚಿಕ್ಕಮಗಳೂರು ಪ್ರಥಮ, ಮೈಸೂರು ದ್ವಿತೀಯ

Team Udayavani, Jul 2, 2024, 12:04 AM IST

ತಿಂಗಳಲ್ಲಿ 2,300ಕ್ಕೂ ಅಧಿಕ ಡೆಂಗ್ಯೂ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದೊಂದು ತಿಂಗಳಲ್ಲಿ 2,300ಕ್ಕೂ ಅಧಿಕ ಮಂದಿಯಲ್ಲಿ ಡೆಂಗ್ಯೂ ದೃಢವಾಗಿದ್ದು ಬಿಬಿಎಂಪಿ ಸೇರಿ ರಾಜ್ಯದಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಜನವರಿ 1ರಿಂದ ಜು. 1ರ ವರೆಗೆ ಒಟ್ಟು 4,624 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 1,563 ಡೆಂಗ್ಯೂ ಪ್ರಕರಣಗಳು ಸೇರಿ ಒಟ್ಟು 6 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಹಾಸನದಲ್ಲಿ ಇಬ್ಬರು, ಬಿಬಿಎಂಪಿ ವ್ಯಾಪ್ತಿ, ಶಿವಮೊಗ್ಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಯಲ್ಲಿ ತಲಾ ಒಬ್ಬರಂತೆ ಒಟ್ಟು ಆರು ಮಂದಿ ಮೃತರಾಗಿದ್ದಾರೆ. ಮೃತಪಟ್ಟ ಕೆಲ ವ್ಯಕ್ತಿಗಳಲ್ಲಿ ಡೆಂಗ್ಯೂ ದೃಢವಾಗಿದೆ. ಆದರೆ ಅವರು ಇತರ ತೀವ್ರ ತರಹದ ಕಾಯಿಲೆಯಿಂದ ಬಳಲುತ್ತಿದ್ದು ಅವರ ಸಾವಿಗೆ ಡೆಂಗ್ಯೂ ಕಾರಣವಲ್ಲ ಎನ್ನುವ ವರದಿಯ ಜಿಲ್ಲಾ ಮಟ್ಟದಿಂದ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದೆ.

ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಅತ್ಯಧಿಕ
ಸಂಖ್ಯೆಯಲ್ಲಿ ಡೆಂಗ್ಯೂ ಪ್ರಕರಣ ವರದಿಯಾದ ಜಿಲ್ಲಾವಾರು ಪಟ್ಟಿಯಲ್ಲಿ ಮೊದಲ ಸ್ಥಾನ ಚಿಕ್ಕಮಗಳೂರು ಪಡೆದುಕೊಂಡಿದೆ. 491 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ. ಉಳಿದಂತೆ ಮೈಸೂರು 479, ಹಾವೇರಿ 451, ಶಿವಮೊಗ್ಗ 283 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಎರಡಂಕಿ ಪ್ರಕರಣಗಳು ವರದಿಯಾಗಿವೆ.

ಹಾವೇರಿಯಲ್ಲಿ ಇದುವರೆಗೆ 2 ಶಂಕಿತ ಮರಣ ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. ಡೆತ್‌ ಆಡಿಟ್‌ನಲ್ಲಿ 10 ವರ್ಷದ ಬಾಲಕ ಡೆಂಗ್ಯೂನಿಂದ ಮೃತಪಟ್ಟಿರುವುದು ದೃಢವಾಗಿದೆ. ಪ್ರಸ್ತುತ ಹಾವೇರಿಯಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಡೆಂಗ್ಯೂ ಪ್ರಕರಣಗಳ ಸೀರಂ ಮಾದರಿ ಪರೀಕ್ಷೆಯಲ್ಲಿ ಕ್ರಮವಾಗಿ ಶೇ. 79 ಹಾಗೂ 80ರಷ್ಟು ಏರಿಕೆಯಾಗಿದೆ.

ಬಿಬಿಎಂಪಿ 1,563 ಪಾಸಿಟಿವ್‌
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವಾರ ಮೃತಪಟ್ಟ 27 ವರ್ಷದ ಯುವಕನಲ್ಲಿ ಡೆಂಗ್ಯೂ ದೃಢವಾಗಿದ್ದು ಇದನ್ನು ಡೆತ್‌ ಆಡಿಟ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಯುವಕನಲ್ಲಿ ತೀವ್ರ ತರಹದ ಮಧುಮೇಹ, ಲಿವರ್‌ ಸಂಬಂಧಿಸಿದ ಸೋಂಕಿನ ಜತೆಗೆ ಡೆಂಗ್ಯೂ ಲಕ್ಷಣಗಳಿದ್ದವು. ಇನ್ನೂ ಡೆಂಗ್ಯೂ ಪಾಸಿಟಿವ್‌ ಬಂದಿದ್ದ 80 ವರ್ಷದ ವೃದ್ಧೆ ಸಾವಿಗೆ ಡೆಂಗ್ಯೂ ನೇರವಾದ ಕಾರಣವಲ್ಲ, ಅವರು ಇತರ ಕಾಯಿಲೆಯಿಂದ ಬಳಲುತ್ತಿದ್ದು, ಡೆಂಗ್ಯೂ ಲಕ್ಷಣಗಳಿರಲಿಲ್ಲ ಎನ್ನುವುದಾಗಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌
ಡೆಂಗ್ಯೂ ಹೆಚ್ಚಿರುವ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಕಾದಿರಿಸಲಾಗಿದೆ. ರಾಜ್ಯಾದ್ಯಂತ ಆರೋಗ್ಯ ಇಲಾಖೆಯು ಆರೋಗ್ಯ ಸಿಬಂದಿ ಮತ್ತು ಆಶಾ ಕಾರ್ಯಕರ್ತೆಯರು ಒಳಾಂಗಣ ಮತ್ತು ಹೊರಾಂಗಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಿಯಮಿತ ತಪಾಸಣೆ ನಡೆಸಿ, ಲಾರ್ವಾ ನಾಶಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ

Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ

Bantwal: ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ

Bantwal: ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ

Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ

Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

BJP-Member

Congress Government: ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ 

Mangaluru ಪ್ರತ್ಯೇಕ ರೈಲ್ವೇ ವಿಭಾಗಕ್ಕೆ ಅಭಿಯಾನ ಆರಂಭ

Mangaluru ಪ್ರತ್ಯೇಕ ರೈಲ್ವೇ ವಿಭಾಗಕ್ಕೆ ಅಭಿಯಾನ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-Member

Congress Government: ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ 

VIjayendra

CM Siddaramaiah ರಾಜೀನಾಮೆ ನೀಡಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Congress-Symbol

By Election: ಸಚಿವ ಜಾರಕಿಹೊಳಿ ಮುಂದೆಯೇ ಶಿಗ್ಗಾವಿ ಟಿಕೆಟ್‌ ಕಿತ್ತಾಟ

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

BK-hariprasad

RSSನಿಂದ ತುರ್ತು ಪರಿಸ್ಥಿತಿಗೆ ಬೆಂಬಲ: ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್‌

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !

Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ

Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ

Bantwal: ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ

Bantwal: ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ

Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ

Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

Ajekar ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳ ಅನಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.