MUDA: 29 ತಾಸುಗಳ ಇ.ಡಿ. ಶೋಧ ಅಂತ್ಯ, ದಾಖಲೆ ವಶ
ರವಿವಾರ ಬೆಳಗಿನ ಜಾವ 2.40ರ ವರೆಗೆ ದಾಖಲೆ ಪರಿಶೀಲನೆ
Team Udayavani, Oct 21, 2024, 6:00 AM IST
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಎರಡು ದಿನಗಳಿಂದ ಕಡತಗಳ ಪರಿಶೋಧನೆಯಲ್ಲಿ ತೊಡಗಿದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ರವಿವಾರ ಬೆಳಗಿನ ಜಾವ 2.40ಕ್ಕೆ ಶೋಧ, ವಿಚಾರಣೆಯನ್ನು ಅಂತ್ಯಗೊಳಿಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ತೆಗೆದು ಕೊಂಡು ಹೋಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ವಾಪಸ್ ನೀಡಿರುವ 14 ನಿವೇಶನಗಳ ಸಹಿತ ಮುಡಾದಲ್ಲಿ ಇಲ್ಲಿಯ ವರೆಗೆ 50:50 ಅನುಪಾತದಲ್ಲಿ ನಡೆದಿರುವ ನಿವೇಶನಗಳ ಅಕ್ರಮ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಮುಡಾ ಕಚೇರಿಯನ್ನು ಜಾಲಾಡಿ ಸಂಗ್ರಹಿಸಿರುವ ಇ.ಡಿ.ಅಧಿಕಾರಿಗಳು ಅವುಗಳನ್ನು ಎರಡು ಪೆಟ್ಟಿಗೆಗಳಲ್ಲಿ ಒಯ್ದಿದ್ದಾರೆ.
ಅಧಿಕಾರಿಗಳ ವಿಚಾರಣೆ
ಇ.ಡಿ. ಅಧಿಕಾರಿಗಳು ಮುಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಹಂತದ ಅಧಿಕಾರಿ, ಸಿಬಂದಿ ಹಾಗೂ ನೌಕರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವ ಯಾವ ಆಯುಕ್ತರು, ಅಧ್ಯಕ್ಷರ ಅವಧಿಯಲ್ಲಿ 50:50 ಅನುಪಾತದ ಎಷ್ಟೆಷ್ಟು ನಿವೇಶನಗಳನ್ನು ಹಂಚಲಾಗಿದೆ ಎಂಬ ವಿವರಗಳು, ದಾಖಲೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಡೆವಲಪರ್ ಹಾಗೂ ಗುತ್ತಿಗೆದಾರರನ್ನು ಹೊರತುಪಡಿಸಿ ಮುಡಾ ಕಚೇರಿಯಲ್ಲಿ ಹೆಚ್ಚು ಓಡಾಡುತ್ತಿದ್ದ ವ್ಯಕ್ತಿಗಳ ಬಗ್ಗೆ ಕೂಡ ಕೆಳ ಹಂತದ ನೌಕರರನ್ನು ವಿಚಾರಿಸಿದ್ದಾರೆ ಎನ್ನಲಾಗಿದೆ.
ಕೆಲವು ನೌಕರರ ಮೊಬೈಲ್ ವಶಕ್ಕೆ ಪಡೆದು ದತ್ತಾಂಶ, ಸಂಪರ್ಕ ಸಂಖ್ಯೆಗಳು, ಕರೆ ದಾಖಲೆ, ಸಂದೇಶಗಳ ಮಾಹಿತಿಗಳನ್ನು ಸಂಗ್ರ ಹಿಸಿ ದ್ದಾರೆ. ಇ.ಡಿ.ಯವರ ಪ್ರಶ್ನೆಗಳ ಬಾಣಕ್ಕೆ ತತ್ತರಿಸಿ ಮುಡಾ ಸಿಬಂದಿ ಉತ್ತರಿಸಲು ತಡಬಡಾಯಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಸುದೀರ್ಘ ಪರಿಶೀಲನೆ
ಮುಡಾದಲ್ಲಿ ಇ.ಡಿ. ಅಧಿಕಾರಿಗಳು 29 ತಾಸು ಕಾಲ ಕಡತಗಳನ್ನು ಪರಿಶೀಲಿಸಿದ್ದಾರೆ. ಶುಕ್ರವಾರ ಬೆಳಗ್ಗೆ 10.45ರ ಸುಮಾರಿಗೆ ಮುಡಾ ಕಚೇರಿಗೆ ದಾಳಿ ಮಾಡಿದ ಇ.ಡಿ. ಅಧಿಕಾರಿಗಳು ಮೊದಲ ದಿನ 12 ತಾಸು ಕಾಲ ವಿಚಾರಣೆ ನಡೆಸಿದ್ದಾರೆ. ಎರಡನೇ ದಿನವಾದ ಶನಿವಾರ ಬೆಳಗ್ಗೆ 9.40ಕ್ಕೆ ವಿಆರಂಭಿಸಿ ರವಿವಾರ ಬೆಳಗಿನ ಜಾವ 2.40ಕ್ಕೆ ಅಂತ್ಯಗೊಳಿಸಿದ್ದಾರೆ. ಅಂದರೆ ಸತತವಾಗಿ 17 ತಾಸು ಕಾಲ ದಾಖಲೆಗಳನ್ನು ಪರಿಶೋಧಿಸಿದ್ದಾರೆ. ಎರಡು ದಿನಗಳಲ್ಲಿ ಒಟ್ಟು 29 ತಾಸು ಪರಿಶೀಲನೆ ನಡೆಸಿದ್ದಾರೆ. ಮುಡಾ ಸ್ಥಾಪನೆಯಾದ ಬಳಿಕ ತನಿಖಾ ಸಂಸ್ಥೆಗಳಿಂದ ಇಷ್ಟು ದೊಡ್ಡ ದಾಳಿ ಇದೇ ಮೊದಲ ಬಾರಿ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
MUST WATCH
ಹೊಸ ಸೇರ್ಪಡೆ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ
UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.