MUDA Scam: ಸಿದ್ದರಾಮಯ್ಯ ಪತ್ನಿ ಸಹಿತ ಸಾವಿರ ಮುಡಾ ನಿವೇಶನ ಅಕ್ರಮ ಹಂಚಿಕೆ: ಇ.ಡಿ.
ಲೋಕಾಯುಕ್ತಕ್ಕೆ ಸ್ಫೋಟಕ ಪತ್ರ ರವಾನೆ, ಬಹುದೊಡ್ಡ ಹಗರಣಕ್ಕೆ ಸಾಕ್ಷ್ಯ ಲಭ್ಯ, ಮಾರ್ಗಸೂಚಿ ಉಲ್ಲಂಘನೆಯೂ ದೃಢ
Team Udayavani, Dec 4, 2024, 7:45 AM IST
ಹೊಸದಿಲ್ಲಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯ ಲೋಕಾಯುಕ್ತಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ.)ವು ಸ್ಫೋಟಕ ಪತ್ರವೊಂದನ್ನು ಬರೆದಿದೆ.
ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮಾತ್ರವಲ್ಲದೆ ಒಟ್ಟು 700 ಕೋಟಿ ರೂ. ಮೌಲ್ಯದ ಇನ್ನೂ 1,095 ಸೈಟುಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮವಾಗಿ ಮಂಜೂರು ಮಾಡಿದೆ ಎಂದು ತಿಳಿಸಿದೆ ಎಂಬುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾರ್ವತಿ ಅವರಿಗೆ ಮಂಜೂರಾದ 14 ಸೈಟ್‌ವರ್ಗಾವಣೆ ಸಂಬಂಧಿಸಿ ಹಲವು ಅಕ್ರಮಗಳು ನಡೆದಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ.
ಸಿದ್ದರಾಮಯ್ಯ ಅವರ ಸಹಾಯಕ ಎಸ್‌ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ. ಕುಮಾರ್ ಕೂಡ ನಿವೇಶನ ಮಂಜೂರು ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ. ಸೈಟ್‌ಗಳನ್ನು ವರ್ಗಾಯಿಸುವ ಸಂದರ್ಭದಲ್ಲಿ ಶಾಸನಬದ್ಧ ಮಾರ್ಗಸೂಚಿಗಳನ್ನು ಉಲ್ಲಂ ಸಲಾಗಿದೆ. ಕಚೇರಿ ಪ್ರಕ್ರಿಯೆಗಳನ್ನೂ ಉಲ್ಲಂ ಸಲಾಗಿದ್ದು, ಪ್ರಕರಣದಲ್ಲಿ ಅಧಿಕಾರಿಗಳು ಅನಗತ್ಯ ಒಲವು ತೋರಿರುವುದು, ಪೋರ್ಜರಿ ಸಾಕ್ಷ್ಯಗಳು ಕೂಡ ಪತ್ತೆಯಾಗಿವೆ ಎನ್ನಲಾಗಿದೆ.
ಇದಲ್ಲದೆ ಬೇನಾಮಿ ಮತ್ತು ಇತರ ವ್ಯವಹಾರಗಳಲ್ಲಿ, ಭೂಮಿ ಕಳೆದುಕೊಂಡವರು ಎಂಬ ಸೋಗಿನಲ್ಲಿ ಮುಡಾ ಒಟ್ಟು 1,095 ಸೈಟ್‌ಗಳನ್ನು ಅಕ್ರಮವಾಗಿ ಬೇನಾಮಿ ಅಥವಾ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಮಂಜೂರು ಮಾಡಿದೆ. ಆದರೆ ಅಕ್ರಮವಾಗಿ ಭೂಮಿ ಪಡೆದಿರುವ ಫಲಾನುಭವಿಗಳೆಲ್ಲಾ ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿಗಳೇ ಆಗಿದ್ದಾರೆ ಎಂದೂ ಇ.ಡಿ. ಹೇಳಿದೆ.
ಸಿಎಂ ಪತ್ನಿ ಪಾರ್ವತಿ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಉಡುಗೊರೆ ರೂಪದಲ್ಲಿ ನೀಡಿದ ಕೃಷಿ ಭೂಮಿಯು ಅಸಲಿಗೆ ಕೃಷಿ ಭೂಮಿ ಆಗಿರಲಿಲ್ಲ. ಅಲ್ಲಿ ಅದಾಗಲೇ ಮುಡಾದಿಂದ ಕೆಲವು ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ವಿಶೇಷವಾಗಿ ದೇವರಾಜು ಎಂಬವರು ಆ ಭೂಮಿಯನ್ನು ಮಲ್ಲಿಕಾರ್ಜುನ ಅವರಿಗೆ ಮಾರುವ ಮೊದಲೇ ಇತ್ತ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು ಎಂದು ಇ.ಡಿ. ಹೇಳಿದೆ ಎನ್ನಲಾಗಿದೆ.
ಜತೆಗೆ ಸ್ಥಳೀಯ ಪ್ರದೇಶದ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಸರ್ವೇಯರ್, ಕಂದಾಯ ನಿರೀಕ್ಷಕರು, ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿದ್ದರೂ ಸ್ಥಳದಲ್ಲಿ ಮುಡಾ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದನ್ನು ಮಾತ್ರ ನಮೂದಿಸಿಲ್ಲ. ಬದಲಿಗೆ ಸ್ಥಳದಲ್ಲಿ ಯಾವುದೇ ಅಕ್ರಮ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ವರದಿ ಮಾಡಿದ್ದಾರೆ. ಆದರೆ ಇದು, ಪ್ರದೇಶಕ್ಕೆ ಸಂಬಂಧಿಸಿ ಉಪಗ್ರಹ ಚಿತ್ರಗಳು ತಿಳಿಸುವ ಸತ್ಯಕ್ಕೆ ಹಾಗೂ ಮುಡಾ ದಾಖಲೆಗಳಿಗೆ ದೂರವಾಗಿದೆ ಎಂದೂ ಇ.ಡಿ. ನಮೂದಿಸಿದೆ ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ಪತ್ರದಲ್ಲಿ ಏನಿದೆ?
*ಸಿಎಂ ಪತ್ನಿ ಸೈಟ್ ಬಿಟ್ಟು 700 ಕೋ. ರೂ. ಮೌಲ್ಯದ ಇನ್ನೂ 1,095 ಸೈಟ್ ಅಕ್ರಮವಾಗಿ ಮಂಜೂರು
* ನಿವೇಶನ ಮಂಜೂರು ಪ್ರಕ್ರಿಯೆಯಲ್ಲಿ ಶಾಸನಬದ್ಧ ಮಾರ್ಗಸೂಚಿ, ಕಚೇರಿ ಪ್ರಕ್ರಿಯೆಗಳ ಉಲ್ಲಂಘನೆ
* ಅಧಿಕಾರಿಗಳ ಅನಗತ್ಯ ಒಲವು, ಪೋರ್ಜರಿಗೆ ಸಾಕ್ಷ್ಯ ಲಭ್ಯ
* 1,095 ಸೈಟ್ ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಮಂಜೂರು
ಇ.ಡಿ. ವಿಚಾರಣೆಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಜರು
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಐಎಎಸ್ ಅಧಿಕಾರಿ ದೀಪಾ ಚೋಳನ್ ಮಂಗಳವಾರ ದಾಖಲೆಗಳ ಸಮೇತ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆಗೆ ಹಾಜರಾಗಿದ್ದು, ಸತತ 8 ತಾಸು ಅವರನ್ನು ವಿಚಾರಣೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.