ಮುಂಬೈ ಯುವತಿಯ ಮಾನಭಂಗ
Team Udayavani, Dec 27, 2018, 11:25 AM IST
ಬೆಂಗಳೂರು: ವೀಕೆಂಡ್ ಪಾರ್ಟಿ ಬಳಿಕ ಮುಂಬೈ ಮೂಲದ ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರ ಯುವತಿಯನ್ನು ತನ್ನ ಮನೆಗೆ ಕರೆದೊಯ್ದು ಪ್ರತಿಷ್ಠಿತ ಹೋಟೆಲ್‌ನ ಮುಖ್ಯ ಶೆಫ್ (ಬಾಣಸಿಗ) ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 18ರಂದು ಘಟನೆ ನಡೆದಿದ್ದು, ಅತ್ಯಾಚಾರ ಘಟನೆಯಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದ ಯುವತಿ, ವೈದ್ಯರ ಬಳಿ ಕೌನ್ಸೆಲಿಂಗ್ ಪಡೆದು ಚೇತರಿಸಿಕೊಂಡಿದ್ದು, ತಡವಾಗಿ ದೂರು ನೀಡಿದ್ದಾರೆ. ಯುವತಿ ದೂರು ಆಧರಿಸಿ ಕೇರಳ ಮೂಲದ ಹಯಾನ್ ಬಬೂಲ್ (33) ಎಂಬಾತನ್ನು ಬಂಧಿಸಿರುವ ಅಶೋಕ್ ನಗರ ಠಾಣೆ ಪೊಲೀಸರು
ತನಿಖೆ ಮುಂದುವರಿಸಿದ್ದಾರೆ.
ನವೆಂಬರ್ 18ರಂದು ಘಟನೆ ನಡೆದಿದ್ದು, ಅತ್ಯಾಚಾರ ಘಟನೆಯಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದ ಯುವತಿ ವೈದ್ಯರ ಬಳಿ ಕೌನ್ಸಿಲಿಂಗ್ ಪಡೆದು ಚೇತರಿಸಿಕೊಂಡಿದ್ದು, ತಡವಾಗಿ ದೂರು ನೀಡಿರುವುದಾಗಿ ಯುವತಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆನಡಾಗೆ ಹಾರುವ ಆಸೆ!: ಸಂತ್ರಸ್ತೆ ಯುವತಿ ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಪೂರ್ಣಗೊಳಿಸಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಆಸ್ಟಿನ್ ಟೌನ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಆರು ತಿಂಗಳ ಅಪ್ರಂಟೀಸ್ (ತರಬೇತಿ)ಗಾಗಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸೇರಿಕೊಂಡಿದ್ದರು. ಹೋಟೆಲ್‌ನ ಮುಖ್ಯ ಶೆಫ್ ಆಗಿದ್ದ ಹಯಾನ್ ಬಬೂಲ್, ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಇಬ್ಬರೂ ಆಗಾಗ ಊಟಕ್ಕೆ ಒಟ್ಟಿಗೇ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
“ನವೆಂಬರ್ 18ರಂದು ರಾತ್ರಿ ವೀಕೆಂಡ್ ಪಾರ್ಟಿಗಾಗಿ ಮನೆಗೆ ಬರುವಂತೆ ಹಯಾನ್ ಆಹ್ವಾನಿಸಿದ್ದ. ಅದರಂತೆ ನಾನು ಆಸ್ಟಿನ್‌ಟೌನ್‌ನಲ್ಲಿರುವ ಆತನ ಮನೆಗೆ ತೆರಳಿದ್ದೆ. ಪಾರ್ಟಿ ಮುಗಿದಾಗ ತಡರಾತ್ರಿಯಾಗಿತ್ತು. ಹೀಗಾಗಿ ಅವರ ಮನೆಯಲ್ಲೇ ಇದ್ದ ಪ್ರತ್ಯೇಕ ಕೋಣೆಯಲ್ಲಿ ಉಳಿದುಕೊಂಡಿದ್ದೆ’. ಮುಂಜಾನೆ ಮೂರು ಗಂಟೆ ಸುಮಾರಿಗೆ ನಿದ್ರೆಯಲ್ಲಿದ್ದ ಯಾರೋ ನನಗೆ ಮುತ್ತು ನೀಡಿದ ಅನುಭವ ಆಯಿತು. ಎಚ್ಚರಗೊಂಡು ನೋಡಿದರೆ,
ಹಯಾನ್ ನನ್ನ ಪಕ್ಕದಲ್ಲಿದ್ದ. ಗಾಬರಿಗೊಂಡು ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಆತ ನನ್ನನ್ನು ಬಿಡದೇ, ಬಲವಂತವಾಗಿ ಅತ್ಯಾಚಾರ ಎಸಗಿದ,’ ಎಂದು ಯುವತಿ ಆರೋಪಿಸಿದ್ದಾಳೆ ಎಂದು
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಘಟನೆಯಿಂದ ಖನ್ನತೆ, ಕೌನ್ಸೆಲಿಂಗ್: “ತರಬೇತಿ ಪೂರ್ಣಗೊಂಡ ಬಳಿಕ ಕೆನಡಾಗೆ ತೆರಳಲು ಸಜ್ಜಾಗಿದ್ದ ನಾನು, ಹಯಾನ್ ಎಸಗಿದ ಕೃತ್ಯದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಹೀಗಾಗಿ, ಅಂದಿನಿಂದ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ. ಬಳಿಕ, ಆಪ್ತ ಸಮಾಲೋಚಕರ ಬಳಿ ತೆರಳಿ ಕೌನ್ಸೆಲಿಂಗ್‌ಗೆ ಒಳಗಾದೆ. ನಂತರ ಪೋಷಕರ ಜತೆ ಚರ್ಚಿಸಿ ದೂರು ನೀಡಿದೆ,’ ಎಂದು ಯುವತಿ ಹೇಳಿದ್ದಾರೆ.
ಆರೋಪಿ ಹಯಾತ್ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಹೋಟೆಲ್ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಆರೋಪಿಗೆ ವಿವಾಹವಾಗಿದ್ದು, ಪತ್ನಿ ಹಾಗೂ ಎರಡು ತಿಂಗಳ ಮಗು ಇದ್ದು, ಅವರು ಕೇರಳಕ್ಕೆ ತೆರಳಿದ್ದರು. ಈ ಸಂಧರ್ಭದಲ್ಲಿ ಯುವತಿಯನ್ನು ಹಯಾತ್ ಮನೆಗೆ ಕರೆಸಿಕೊಂಡಿದ್ದ. ಪಾರ್ಟಿ ಬಳಿಕ ಮದ್ಯದ ಅಮಲಿನಲ್ಲಿ ತಪ್ಪು ನಡೆದಿದೆ ಎಂದು ಆರೋಪಿ ಹೇಳುತ್ತಿದ್ದಾನೆ ಎಂದು ಅಧಿಕಾರಿ ಹೇಳಿದರು.
ಯುವತಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಡಿ.ದೇವರಾಜು, ಕೇಂದ್ರ ವಿಭಾಗದ ಡಿಸಿಪಿ
ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.