ನಗರಸಭೆ ವ್ಯಾಪ್ತಿಯ ಕಟ್ಟಡ ಸಕ್ರಮಗೊಳಿಸಿ: ಆರ್ವಿಡಿ
Team Udayavani, Nov 17, 2019, 3:03 AM IST
ಬೆಂಗಳೂರು: ನಗರಸಭೆ ವ್ಯಾಪ್ತಿಗಳಲ್ಲಿನ ಅನಧಿಕೃತ ವಾಸದ ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರಬರೆದಿದ್ದಾರೆ.
ನಗರಸಭೆ ವ್ಯಾಪ್ತಿ ಯಲ್ಲಿನ ಆಸ್ತಿಗಳಿಗೆ ನಮೂನೆ-3 ನೀಡುವಾಗ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಬಡವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇ-ಆಸ್ತಿ ತಂತ್ರಾಂಶದಲ್ಲಿ ಒಂದು ಬಾರಿ ಅನಧಿಕೃತ ವಾಸದ ಕಟ್ಟಡಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಮಸ್ಯೆಯೇನು?: ಪೌರ ಸುಧಾರಣಾ ಯೋಜನೆಯಡಿ ಸರ್ವೇ ಮಾಡಿದ ಆಸ್ತಿಗಳ ಮಾಹಿತಿಗಳು ತಂತ್ರಾಂಶದಲ್ಲಿ ಲಭ್ಯವಿದ್ದು, ಆಸ್ತಿಗಳ ಸರ್ವೇ ಸಮಯದಲ್ಲಿ ಎಫ್ಎಆರ್-19ರ ದಾಖಲೆಯಲ್ಲಿ ಲಭ್ಯವಿದ್ದ ಆಸ್ತಿಗಳನ್ನು ಅಧಿಕೃತ ಆಸ್ತಿಗಳು ಎಂದು ಪರಿಗಣಿಸಲಾಗಿದೆ. ಈ ಆಸ್ತಿ ಗಳಿಗೆ ನಮೂನೆ-3 ನೀಡುವಾಗ ಯಾವುದೇ ದಾಖಲಾತಿ ಅಪ್‌ಲೋಡ್ ಮಾಡುವ ಅವಶ್ಯಕತೆಯಿಲ್ಲ.
ಆದರೆ, ನಗರಸಭೆ ವ್ಯಾಪ್ತಿಯ ಬಹಳಷ್ಟು ಆಸ್ತಿಗಳು ಭೂ ಪರಿ ವರ್ತನೆ ಗೊಂಡು ಅನೇಕ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನು ಮೋದನೆ ಪಡೆದಿಲ್ಲ. ಅಂತಹ ಬಡಾವಣೆಗಳ ನಿವೇಶನಗಳಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಲಕ್ಷಾಂತರ ಜನ ವಾಸ ಮಾಡುತ್ತಿದ್ದಾರೆ. ಈ ಆಸ್ತಿದಾರರಿಗೆ ನಮೂನೆ-3 ನೀಡಲು ಸಮಸ್ಯೆಗಳು ಎದುರಾಗುತ್ತಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ಮತ್ತೂಮ್ಮೆ ಅನಧಿಕೃತ ವಾಸದ ಕಟ್ಟಡಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಿದರೆ ಜನರ ತೊಂದರೆ ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.