ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್
ಮೊದಲೇ ಕಾಂಗ್ರೆಸ್ ಬಗ್ಗೆ ಬೇಜಾರಿತ್ತು... ಈಗ ಮತ್ತಷ್ಟು ಬೇಜಾರಾಯಿತು
Team Udayavani, Aug 18, 2022, 12:27 PM IST
ಶಿವಮೊಗ್ಗ: ಕಾಂಗ್ರೆಸ್ ನಾಯಕರ ನಡೆಯ ವಿರುದ್ಧ ಶಿವಮೊಗ್ಗ ಟಿಪ್ಪುನಗರ ಭಾಗದ ಮುಸ್ಲಿಂ ಮುಖಂಡ ನಜರುಲ್ಲಾ ಶೇಕ್ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಜರುಲ್ಲಾ ಶೇಕ್ ಮುಸ್ಲಿಂ ಫೇಸ್‌ಬುಕ್ ಪೇಜ್ ನಲ್ಲಿ ಬುಧವಾರ ರಾತ್ರಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು ಇದೀಗ ವೈರಲ್ ಆಗಿದೆ.
ಕಾಂಗ್ರೆಸ್ ಲೀಡರ್ಸ್ ಅನ್ನುವವರು ಬಹಳ ಜನ ಇದ್ದಾರೆ. ಜಿಲ್ಲೆಯಲ್ಲಿ ಬೇಕಾದಷ್ಟು ಜನ ಸಿಗುತ್ತಾರೆ. ಸಿದ್ದರಾಮಯ್ಯ, ಡಿಕೆಶಿ ಅಂತಹ ನಾಯಕರು ಬಂದಾಗ ಕೇವಲ ಫ್ಲೇಕ್ಸ್ ಹಾಕುವುದಕ್ಕಷ್ಟೇ… ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿಗೆ ಎನಾದರೂ ಪೊಲೀಸರು ತೊಂದರೆ ಕೊಟ್ಟರೆ ಹೋರಾಟ ಮಾಡುತ್ತಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಗೆ ಸಮಸ್ಯೆಯಾದರೂ ಶಿವಮೊಗ್ಗದಲ್ಲಿ ಹೋರಾಟ ಮಾಡುತ್ತಾರೆ. ನಿಮ್ಮ ಪಕ್ಷದ ಕಾರ್ಪೋರೇಟರ್ ಗಂಡನನ್ನು ಜೈಲಿಗೆ ಹಾಕಿದ್ದಾರೆ. ಈಗ ಎಲ್ಲಿದ್ದೀರಾ ಸ್ವಾಮಿ ನೀವು ಕಾಂಗ್ರೆಸ್ ನವರು…? ಬರೀ ವೋಟ್ ಕೇಳುವುದಕ್ಕಷ್ಟೇ ಬರೋದಾ…? ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಹುಲ್, ಡಿಕೆಶಿ, ಸಿದ್ದರಾಮಯ್ಯ ಅವರಿಗೆ ತೊಂದರೆ ಆದರೆ ಮಾತ್ರ ಬರೋದಾ..? ಕಾಂಗ್ರೆಸ್ ಕಾರ್ಯಕರ್ತರ ಜೊತೆ ನಾವು ಇದ್ದೀವಿ ಅನ್ನುತ್ತೀರಿ. ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಗಂಡನನ್ನೇ ಜೈಲಿಗೆ ಹಾಕಿದ್ದಾರೆ. ಇಲ್ಲಿಗೆ ಯಾವ ಕಾಂಗ್ರೆಸ್ ನಾಯಕನೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಸಾವರ್ಕರ್ ಭಾವಚಿತ್ರ ನೀಡಿ, ಕಪ್ಪು ಬಾವುಟದ ಸ್ವಾಗತ
ಟಿಪ್ಪುನಗರಕ್ಕೆ ವೋಟ್ ಕೇಳಲು ಬರಲು ನೀವು ಯೋಚನೆ ಮಾಡಬೇಕು. ನಿಮ್ಮ ಯೋಗ್ಯತೆ ಏನು ಎಂದು ನೀವು ಯೋಚನೆ ಮಾಡಿ…. ಕಾರ್ಪೋರೇಟರ್ ಗಂಡನನ್ನೇ ಕಾಪಾಡಲಿಲ್ಲ. ಜನರನ್ನು ಹೇಗೆ ಕಾಪಾಡುತ್ತೀರಾ? ಗಾಂಧಿ, ಸುಭಾಶ್ ಚಂದ್ರ ಬೋಸ್ ಫೋಟೋ ಚಿಕ್ಕದಾಗಿ ಹಾಕಿದ್ದಾರೆ ಎಂದು ಕೇಳಿದ್ದೆ ತಪ್ಪಾ…? ಹೋರಾಟ ಮಾಡಿದರೂ.. ಜೈಲಿಗೆ ಹಾಕುತ್ತಾರಾ…? ಕೆಟ್ಟ ರಾಜಕೀಯ ಮಾಡುವುದನ್ನು ಬಿಡಿ. ಮೊದಲೇ ಕಾಂಗ್ರೆಸ್ ಬಗ್ಗೆ ಬೇಜಾರಿತ್ತು… ಈಗ ಮತ್ತಷ್ಟು ಬೇಜಾರಾಯಿತು ಎಂದು ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.