Muzrai Department Temple; ಸೊರಗಿದೆ ಶಿಶು ಆರೈಕೆ ಕೇಂದ್ರ: ಏನಿದು?
ತಾಯಂದಿರ ಬಗೆಹರಿಯದ ಸಂಕಷ್ಟ
Team Udayavani, Oct 29, 2024, 6:52 AM IST
ಉಡುಪಿ: ದೇವರ ದರ್ಶನಕ್ಕೆಂದು ದೇಗುಲ ಗಳಿಗೆ ಭೇಟಿ ನೀಡುವ ತಾಯಂದಿರು ಶಿಶು ಆರೈಕೆ, ಸ್ತನ್ಯ ಪಾನ ಸಂದರ್ಭ ಮುಜುಗರ ಅನುಭವಿಸುವುದನ್ನು ತಪ್ಪಿಸ ಲೆಂದು ಸರಕಾರ ಜಾರಿಗೆ ತಂದಿರುವ ಶಿಶು ಆರೈಕೆ ಕೇಂದ್ರಗಳು ಅನುಷ್ಠಾನದಲ್ಲಿ ಸೊರಗಿವೆ.
ಭಕ್ತ ಮಹಿಳೆಯರು ದೇವಸ್ಥಾನಗಳಲ್ಲಿ ಅನು ಭವಿಸುವ ತೊಂದರೆ, ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆ ಮುಂದಾಗಿತ್ತು. ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಶಿಶುಗಳ ಜತೆಗೆ ದೇಗುಲಕ್ಕೆ ಆಗಮಿಸುವ ಮಹಿಳೆಯರಿಗಾಗಿ ಪ್ರತ್ಯೇಕ ಶಿಶು ಆರೈಕೆ ಕೇಂದ್ರ ನಿರ್ಮಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಅದು ಆದೇಶಕ್ಕಷ್ಟೆ ಸೀಮಿತವಾಗಿದೆ. ನಿರ್ಮಾಣವಾಗಿರುವ ಶಿಶು ಆರೈಕೆ ಕೇಂದ್ರಗಳು ಕೂಡ ಹಲವು ನ್ಯೂನತೆಗಳನ್ನು ಎದುರಿಸುತ್ತಿವೆ.
ಮುಜರಾಯಿ ಇಲಾಖೆ ವ್ಯಾಪ್ತಿಯ, ಭಕ್ತರು ಹೆಚ್ಚು ಆಗಮಿಸುವ ದೇಗುಲಗಳಲ್ಲಿ ಶಿಶು ಆರೈಕೆಗೆ ಪ್ರತ್ಯೇಕ ಕೊಠಡಿ ನಿರ್ಮಿಸುವಂತೆ ಆದೇಶ ಇದೆ. ಆರಂಭದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 6 ಪ್ರಮುಖ ದೇಗುಲಗಳಲ್ಲಿ ಕೇಂದ್ರ ತೆರೆಯಲಾಗಿತ್ತು.
ದೇಗುಲಕ್ಕೆ ಬರುವ ತಾಯಂದಿರು ಮಕ್ಕಳಿಗೆ ಹಾಲುಣಿ ಸಲು ಅನುಕೂಲವಾಗುವ ಉದ್ದೇಶದಿಂದ ದೇಗುಲದ ಆವರಣದಲ್ಲಿ ಪ್ರತ್ಯೇಕ ಕೊಠಡಿ ಇದು. ತೆರೆದ ಪ್ರದೇಶದಲ್ಲಿ ಎದೆ ಹಾಲುಣಿಸುವುದು ಹಾಗೂ ಆರೈಕೆಯ ಸಂದರ್ಭ ಎದುರಾಗುವ ಮುಜುಗರದಿಂದ ಮುಕ್ತಿ ನೀಡುವುದು ಇದರ ಆಶಯ.
ಅನಂತರ ಆದೇಶವನ್ನು ರಾಜ್ಯವ್ಯಾಪಿ ದೇವಸ್ಥಾನಗಳಿಗೆ ವಿಸ್ತರಿಸಲಾಗಿತ್ತು.ದ.ಕ., ಉಡುಪಿಯಲ್ಲಿ 1,304 ದೇವಸ್ಥಾನಗಳು ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರದಷ್ಟು ದೇಗುಲಗಳಿವೆ. ಈ ಪೈಕಿ ಎ ಮತ್ತು ಬಿ ಶ್ರೇಣಿಯಲ್ಲಿ ಸುಮಾರು 500 ಹಾಗೂ ಸಿ ಶ್ರೇಣಿಯಲ್ಲಿ 34,500 ದೇಗುಲಗಳಿವೆ. ದ.ಕ.ದಲ್ಲಿ 494, ಉಡುಪಿಯಲ್ಲಿ 810 ಸೇರಿ ಉಭಯ ಜಿಲ್ಲೆಗಳಲ್ಲಿ 1,304 ದೇವಸ್ಥಾನಗಳಿವೆ. ಇವುಗಳ ಪೈಕಿ 64 ಎ ಶ್ರೇಣಿಯವು. ಎ ಹಾಗೂ ಬಿ ಶ್ರೇಣಿಯ ದೇಗುಲಗಳಲ್ಲಿ ಶಿಶುಪಾಲನ ಕೊಠಡಿ ತೆರೆಯಲು ಸೂಚನೆ ಇದೆ. ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ದೇಗುಲಗಳಲ್ಲಿ ಆದ್ಯತೆಯ ಮೇರೆಗೆ ಈ ಸೌಲಭ್ಯ ಕಲ್ಪಿಸಲು ಆದೇಶವಿದೆ.
ಹಲವು ದೇಗುಲಗಳು ಬಾಕಿ
ಕೆಲವು ದೇವಸ್ಥಾನಗಳು ದಾನಿಗಳು, ಖಾಸಗಿ ಸಹಭಾಗಿತ್ವದಲ್ಲಿ ಈ ವ್ಯವಸ್ಥೆಯನ್ನು ಸ್ಥಳೀಯವಾಗಿ ಮಾಡಿಕೊಂಡಿದ್ದರೆ ಹೆಚ್ಚಿನ ದೇವಸ್ಥಾನಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿಲ್ಲ. ದೇವಸ್ಥಾನಗಳ ಆಡಳಿತಗಳು ಆದೇಶವನ್ನು ಹಗುರವಾಗಿ ಪರಿಗಣಿಸಿರುವುದು ಒಂದು ಕಾರಣವಾದರೆ, ಪೂರ್ಣ ಪ್ರಮಾಣದ ವ್ಯವಸ್ಥಾಪನ ಸಮಿತಿಗಳ ರಚನೆಯಾಗದಿರುವುದು ಇನ್ನೊಂದು ಕಾರಣ.
ಮುಜುಗರ ತಪ್ಪಿಸಲು ವ್ಯವಸ್ಥೆ
ಸಾಮಾನ್ಯವಾಗಿ ದೇವಸ್ಥಾನಕ್ಕೆ ಬರುವ ತಾಯಂದಿರಿಗೆ ಮಕ್ಕಳಿಗೆ ಹಾಲುಣಿಸುವುದೇ ದೊಡ್ಡ ಸಮಸ್ಯೆ. ತಾವು ಬಂದ ವಾಹನದಲ್ಲಿ ಅಥವಾ ದೇಗುಲದ ಪ್ರಾಂಗಣದ ವಾಣಿಜ್ಯ ಮಳಿಗೆಗಳ ಮಾಲಕರನ್ನು ಕಾಡಿಬೇಡಿ ಹಾಲುಣಿಸಬೇಕಾದ ಪರಿಸ್ಥಿತಿ ಇದೆ. ಇಂದಿಗೂ ಸರಿಯಾದ ಸ್ಥಳಾವಕಾಶ ಸಿಗದೆ ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸುವ ದೃಶ್ಯ ಕಾಣಸಿಗುತ್ತದೆ. ಇದರಿಂದ ಅನೇಕರು ಶಿಶುವಿನೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಾರೆ.
ಭಕ್ತರ ಒತ್ತಾಸೆಯೇನು?
ರಾಜ್ಯದ ಎಲ್ಲ ಎ ಹಾಗೂ ಬಿ ವರ್ಗ ಸೇರಿದ ದೇಗುಲಗಳಲ್ಲಿ ಶಿಶು ಆರೈಕೆ ಕೇಂದ್ರ ನಿರ್ಮಿಸಬೇಕು. ಶಿಶು ಆರೈಕೆಗೆ ಪ್ರತ್ಯೇಕ ಕೊಠಡಿ ಇರುವ ಮಾಹಿತಿಯನ್ನು ದೇವಸ್ಥಾನದ ಪ್ರಾಂಗಣದಲ್ಲಿ ಉÇÉೇಖೀಸಬೇಕು. ಜತೆಗೆ ಕೊಠಡಿಯ ಸ್ವತ್ಛತೆಯತ್ತ ದೇಗುಲಗಳ ಆಡಳಿತ ಮಂಡಳಿಯೊಂದಿಗೆ ಭಕ್ತರು ಕೂಡ ಗಮನ ಹರಿಸಬೇಕು ಎನ್ನುವ ಒತ್ತಾಸೆ ಭಕ್ತ ಸಮೂಹದ್ದು.
ಇರುವ ಸಮಸ್ಯೆಗಳೇನು?
ಇಲಾಖೆಯ ಆದೇಶವನ್ನು ಎಲ್ಲ ದೇಗುಲಗಳು ಪಾಲಿಸುತ್ತಿಲ್ಲ.
ಇರುವ ಶಿಶು ಆರೈಕೆ ಕೇಂದ್ರಗಳು ಇಕ್ಕಟ್ಟಾಗಿವೆ.
ಕೇಂದ್ರದೊಳಗೆ ಸರಿಯಾದ ಗಾಳಿ, ಬೆಳಕು ಆಡುತ್ತಿಲ್ಲ.
ನಿರ್ವಹಣೆ ಸರಿಯಾಗಿಲ್ಲ, ಭದ್ರತೆಯೂ ನಿರೀಕ್ಷೆಯಷ್ಟಿಲ್ಲ.
ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಿಗೂ ಶಿಶು ಆರೈಕೆ ಕೇಂದ್ರ ನಿರ್ಮಿಸಲು ನಿರ್ದೇಶನವಿದೆ. ಪ್ರಮುಖ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳು ಉತ್ತಮ ರೀತಿಯ ಕೇಂದ್ರಗಳನ್ನು ನಿರ್ಮಿಸಿಕೊಂಡಿವೆ. ಇತರ ದರ್ಜೆಯ ದೇವಸ್ಥಾನಗಳಲ್ಲಿ ಅಳವಡಿಸಿಕೊಳ್ಳಲು ಒಂದಷ್ಟು ಸಮಸ್ಯೆಗಳಿರಬಹುದು. ತಾಯಂದಿರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಆಯಾ ದೇಗುಲಗಳ ಜವಾಬ್ದಾರಿ.
ಪ್ರಶಾಂತ್ ಶೆಟ್ಟಿ , ಗೋವಿಂದ ನಾಯ್ಕ ಉಡುಪಿ ಮತ್ತು ದ.ಕ. ಜಿಲ್ಲಾ ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.