ಮೈಸೂರು ಅತ್ಯಾಚಾರ ಪ್ರಕರಣ : ರಾಜ್ಯದಲ್ಲಿರುವುದು ತಾಲಿಬಾನ್ ಆಡಳಿತ.! : ಕಾಂಗ್ರೆಸ್
ಮೈಸೂರು ವಿವಿ ಹೊರಡಿಸಿದ ಸುತ್ತೋಲೆಯ ಆದೇಶ ಪ್ರತಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಶ್ನೆ
Team Udayavani, Aug 28, 2021, 12:24 PM IST
ಬೆಂಗಳೂರು : ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಿಗೆ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಜೆ 6.30 ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ಓಡಾಡುವುದಕ್ಕೆ ನಿಷೇಧ ಹೇರಲಾಗಿದೆ. ಪ್ರಸಿದ್ಧ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಇದೇ ಅವಧಿಯಲ್ಲಿ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ : ತರಕಾರಿ ಗಾಡಿಯಲ್ಲಿ ಗಾಂಜಾ ಸಾಗಾಟ: ಚಿಕ್ಕಮಗಳೂರಿನಲ್ಲಿ 102 ಕೆಜಿ ಒಣ ಗಾಂಜಾ ವಶ
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಇಂದು ( ಆಗಸ್ಟ್ 28, ಶನಿವಾರ) ಬಿಜೆಪಿಯನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆಯನ್ನು ಉಲ್ಲೇಖಿಸಿ, ತರಾಟೆ ತೆಗೆದುಕೊಂಡಿದ್ದು, ರಾಜ್ಯದಲ್ಲಿರುವುದು ಪ್ರಜಾಪ್ರಭುತ್ವದ ತಳಹದಿಯ ಆಡಳಿತವಲ್ಲ, ತಾಲಿಬಾನ್ ಆಡಳಿತ..!ಇದಕ್ಕೆ ಪೂರಕವೆಂಬಂತೆ ಹಲವು ಸಚಿವರು ಮಾತನಾಡಿದ್ದು, ಈಗ ಮೈಸೂರು ವಿಶ್ವವಿದ್ಯಾಲಯದ ತಾಲಿಬಾನ್ ಮಾದರಿಯ ಆದೇಶದಿಂದ ರಾಜ್ಯ ಎತ್ತ ಸಾಗುತ್ತಿದೆ ಎಂಬ ದಿಗಲು ಮೂಡುತ್ತಿದೆ. ಬಿಜೆಪಿ ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ದೊರಕದು ಎಂದು ವಿವಿ ಮನಗಂಡಿದೆಯೇ..? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿರುವುದು ಪ್ರಜಾಪ್ರಭುತ್ವ ತಳಹದಿಯ ಆಡಳಿತವಲ್ಲ, ತಾಲಿಬಾನ್ ಆಡಳಿತ!
ಇದಕ್ಕೆ ಪೂರಕವೆಂಬಂತೆ ಹಲವು ಸಚಿವರು ಮಾತಾಡಿದ್ದರು, ಈಗ ಮೈಸೂರು ವಿಶ್ವವಿದ್ಯಾಲಯದ ತಾಲಿಬಾನ್ ಮಾದರಿಯ ಆದೇಶದಿಂದ ರಾಜ್ಯ ಎತ್ತ ಸಾಗುತ್ತಿದೆ ಎಂಬ ದಿಗಿಲು ಮೂಡುತ್ತಿದೆ.@BJP4Karnataka ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ದೊರಕದು ಎಂದು ವಿವಿ ಮನಗಂಡಿದೆಯೇ? pic.twitter.com/xBWZ3SyL2T
— Karnataka Congress (@INCKarnataka) August 28, 2021
ಇನ್ನು, ಸಂಜೆ 6:30 ರ ನಂತರ ಮೈಸೂರು ವಿವಿ ಆವರಣದಲ್ಲಿ ಹೆಣ್ಣು ಮಕ್ಕಳು ಓಡಾಡಬಾರದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಆದೇಶ ಹೊರಡಿಸಿರುವುದು ಏತಕ್ಕಾಗಿ..? ರಾಜ್ಯ ಬಿಜೆಪಿ ಸರ್ಕಾರದಿಂದ ರಕ್ಷಣೆ ನಿರೀಕ್ಷಿಸುವುದು ವ್ಯರ್ಥ ಎಂದೇ..? ಈ ಎಲ್ಲಾ ಬೇಜವಾಬ್ದಾರಿ ಸಚಿವರನ್ನು ಕಂಡು ಕುಲಪತಿಗಳು ಹತಾಶರಾಗಿದ್ದಾರೆಯೇ..? ಎಂದು ಪ್ರಶ್ನಿಸಿದ್ದಲ್ಲದೇ, ಗಾಂಧೀಜಿಯ ಆಶಯದ ಸ್ವತಂತ್ರ ಇದಲ್ಲ ಎಂದು ಕಿಡಿ ಕಾರಿದೆ.
ಸಂಜೆ 6.30ರ ನಂತರ ಮೈಸೂರು ವಿವಿ ಆವರಣದಲ್ಲಿ ಹೆಣ್ಣು ಮಕ್ಕಳು ಓಡಾಡಬಾರದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಆದೇಶ ಹೊರಡಿಸಿರುವುದು ಏತಕ್ಕಾಗಿ?@BJP4Karnataka ಸರ್ಕಾರದಿಂದ ರಕ್ಷಣೆ ನಿರೀಕ್ಷಿಸುವುದು ವ್ಯರ್ಥ ಎಂದೇ?
ಈ ಎಲ್ಲಾ ಬೇಜವಾಬ್ದಾರಿ ಸಚಿವರನ್ನ ಕಂಡು ಕುಲಪತಿಗಳು ಹತಾಶರಾಗಿದ್ದಾರೆಯೇ?
ಗಾಂಧೀಜಿಯ ಆಶಯದ ಸ್ವತಂತ್ರ ಇದಲ್ಲ.
— Karnataka Congress (@INCKarnataka) August 28, 2021
ಇನ್ನು, ಸುರಕ್ಷತೆ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದ್ದು, ಈ ಕುರಿತು ಮೈಸೂರು ವಿವಿ ಕುಲಸಚಿವರಿಂದ ಸುತ್ತೋಲೆ ಹೊರಡಿಸಿದ್ದಾರೆ. ಸಂಜೆ 6ರಿಂದ 9ರವರೆಗೆ ವಿವಿ ಭದ್ರತಾ
ಸಿಬ್ಬಂದಿ ಗಸ್ತು ತಿರುಗಲಿದ್ದು, ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ ಓಡಾಟ ನಿಷೇಧಿಸಲಾಗಿದೆ. ಪೊಲೀಸ್ ಇಲಾಖೆ ಮೌಖಿಕ ನಿರ್ದೇಶನ ಮೇರೆಗೆ ಆದೇಶಿಸಲಾಗಿತ್ತು.
ಇದನ್ನೂ ಓದಿ : ದೇಶದಲ್ಲಿ ಕಳೆದೊಂದು ದಿನದಲ್ಲಿ 46,759 ಹೊಸ ಪ್ರಕರಣಗಳು ಪತ್ತೆ |509 ಮಂದಿ ಸೋಂಕಿನಿಂದ ಮೃತ.!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.