ಮೈಸೂರು ಜಲದರ್ಶಿನಿಯ ಕಲ್ಯಾಣಲೀಲೆ…ಸಿದ್ದು ಸಿದ್ಧಾಂತ ಮಜಾವಾದವೇ? ಬಿಜೆಪಿ ಟ್ವೀಟ್ ಸಮರ
ಪಕ್ಷದ ಚೌಕಟ್ಟಿನಲ್ಲಿ ಯಾವ ಹೋರಾಟವನ್ನೂ ರೂಪಿಸದ ಸಿದ್ದರಾಮಯ್ಯ ಹುತ್ತದಲ್ಲಿ ಸೇರುವ ಹಾವು, ಅಷ್ಟೇ.
Team Udayavani, Jun 3, 2022, 12:40 PM IST
ಬೆಂಗಳೂರು: ಸಿದ್ದರಾಮಯ್ಯ ಅವರ ಸಿದ್ಧಾಂತ ಯಾವುದು, ಮಜಾವಾದವೋ, ಸಮಾಜವಾದವೋ? ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದೇ ಎಲ್ಲರ ಮೇಲೂ ಎರಗುವ, ಎಲ್ಲರನ್ನೂ ಕಬಳಿಸುವ ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆಯನ್ನು ಅನಾವರಣಗೊಳಿಸಲು ಸಕಾಲ ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆ; ಸಿದ್ದು-ಡಿಕೆಶಿ ತಿರುಮಂತ್ರ; ಜೆಡಿಎಸ್ ಗೆ ತೀವ್ರ ಹಿನ್ನಡೆ!
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಜನತಾ ಪರಿವಾರದಲ್ಲಿರುವ ಸಿದ್ದರಾಮಯ್ಯ ಅವರ ಆಪ್ತರನ್ನು ತುಸು ವಿಚಾರಿಸಿದರೆ ಮೈಸೂರು ಜಲದರ್ಶಿನಿಯ ಕಲ್ಯಾಣಲೀಲೆಗಳು ಹೊರಬೀಳುತ್ತವೆ.
ಜನತಾ ಪರಿವಾರದಲ್ಲಿರುವ @siddaramaiah ಅವರ ಆಪ್ತರನ್ನು ತುಸು ವಿಚಾರಿಸಿದರೆ ಮೈಸೂರು ಜಲದರ್ಶಿನಿಯ ಕಲ್ಯಾಣಲೀಲೆಗಳು ಹೊರಬೀಳುತ್ತವೆ.
ಪಕ್ಷದ ಚೌಕಟ್ಟಿನಲ್ಲಿ ಯಾವ ಹೋರಾಟವನ್ನೂ ರೂಪಿಸದ ಸಿದ್ದರಾಮಯ್ಯ ಹುತ್ತದಲ್ಲಿ ಸೇರುವ ಹಾವು, ಅಷ್ಟೇ.#ಮಜವಾದಿಸಿದ್ದರಾಮಯ್ಯ
— BJP Karnataka (@BJP4Karnataka) June 2, 2022
ಪಕ್ಷದ ಚೌಕಟ್ಟಿನಲ್ಲಿ ಯಾವ ಹೋರಾಟವನ್ನೂ ರೂಪಿಸದ ಸಿದ್ದರಾಮಯ್ಯ ಹುತ್ತದಲ್ಲಿ ಸೇರುವ ಹಾವು, ಅಷ್ಟೇ. ನಂಜುಂಡಸ್ವಾಮಿಯ ಶಿಷ್ಯ ಎಂದು ಬಡಾಯಿ ಕೊಚ್ಚಿಕೊಳ್ಳುವ ಮಜವಾದಿಸಿದ್ದರಾಮಯ್ಯ ಅವರೇ, ನೀವು ಎಂದಾದರೂ ರೈತರಿಗೆ ನ್ಯಾಯ ಕೊಡಿಸಿದ್ದೀರಾ? ಸಿಎಂ ಆಗಿದ್ದಾಗ, ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಕುಡಿದು ಸತ್ತ ಎಂದು ನಿಂದಿಸಿರಲಿಲ್ಲವೇ ಎಂದು ಪ್ರಶ್ನಿಸಿದೆ. ನಂಜುಂಡಸ್ವಾಮಿ ಆ ಕ್ಷಣದಲ್ಲಿ ಬದುಕಿರುತ್ತಿದ್ದರೆ ಹಸಿರುಶಾಲಿನಲ್ಲೇ ನಿಮಗೆ ಕಪಾಳಮೋಕ್ಷ ಮಾಡಿರುತ್ತಿದ್ದರು.
ನಂಜುಂಡಸ್ವಾಮಿಯ ಶಿಷ್ಯ ಎಂದು ಬಡಾಯಿ ಕೊಚ್ಚಿಕೊಳ್ಳುವ #ಮಜವಾದಿಸಿದ್ದರಾಮಯ್ಯ ಅವರೇ, ನೀವು ಎಂದಾದರೂ ರೈತರಿಗೆ ನ್ಯಾಯ ಕೊಡಿಸಿದ್ದೀರಾ?
ಸಿಎಂ ಆಗಿದ್ದಾಗ, ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಕುಡಿದ ಸತ್ತ ಎಂದು ನಿಂದಿಸಿರಲಿಲ್ಲವೇ?
ನಂಜುಂಡಸ್ವಾಮಿ ಆ ಕ್ಷಣದಲ್ಲಿ ಬದುಕಿರುತ್ತಿದ್ದರೆ ಹಸಿರುಶಾಲಿನಲ್ಲೇ ನಿಮಗೆ ಕಪಾಳಮೋಕ್ಷ ಮಾಡಿರುತ್ತಿದ್ದರು.
— BJP Karnataka (@BJP4Karnataka) June 2, 2022
ನಾನು ಕಾರ್ಮಿಕ ನಾಯಕ ಜಾರ್ಜ್ ಫರ್ನಾಂಡೀಸ್ ಶಿಷ್ಯ ಎಂದೂ ಮಜವಾದಿ ಸಿದ್ದರಾಮಯ್ಯ ಹೇಳುತ್ತಿರುತ್ತಾರೆ. ಕಾರ್ಮಿಕರ ಕಲ್ಯಾಣಕ್ಕೆ ಹೋರಾಟ ಮಾಡಿದ ಒಂದಾದರೂ ಉದಾಹರಣೆ ಇದೆಯೇ? ಮಹಿಷಿ ವರದಿಯನ್ವಯ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಸಿದ್ದರಾಮಯ್ಯ ಅವರದ್ದು ಬಂಡವಾಳ ಇಲ್ಲದ ಶೂನ್ಯಬಡ್ಡಿ ಭಾಷಣ. ಅಧಿಕಾರಕ್ಕಾಗಿ ನಡೆಸಿದ ಬಳ್ಳಾರಿ ಪಾದಯಾತ್ರೆ ಹೊರತುಪಡಿಸಿ, ಸಿದ್ದರಾಮಯ್ಯ ರಾಜಕೀಯ ಬದುಕಿನ ಮೈಲಿಗಲ್ಲುಗಳೇನು? ಎಂದು ಕೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.