ಮೈಸೂರು ಅರಮನೆ ಪ್ರವೇಶದರ 50 ರೂ.ಗೆ ಏರಿಕೆ
Team Udayavani, May 14, 2017, 3:45 AM IST
-5 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ
-ಪ್ರವೇಶದರ ಏಕರೂಪ ನಿಗದಿ
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಪ್ರವೇಶ ದರವನ್ನು ಏಕರೂಪಗೊಳಿಸಲು ತೀರ್ಮಾನಿಸಲಾಗಿದೆ.
ಮೈಸೂರು ಅರಮನೆ ಮಂಡಳಿ ಅಧ್ಯಕ್ಷರೂ ಆದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಠಿಯಾ ಅಧ್ಯಕ್ಷತೆಯಲ್ಲಿ ನಡೆದ ಅರಮನೆ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಭಾರತೀಯರಿಗೆ ನಿಗದಿಪಡಿಸಿದ್ದ ಪ್ರವೇಶ ದರವನ್ನು 40 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ. ವಿದೇಶಿಯರಿಗೂ ಸಹಾ ಇದೇ ದರ ಅನ್ವಯವಾಗಲಿದೆ. ಮಕ್ಕಳಿಗೆ ನಿಗದಿಪಡಿಸಲಾಗಿದ್ದ 10 ರೂ. ಪ್ರವೇಶ ದರವನ್ನು ಹಾಗೆಯೇ ಮುಂದುವರಿಸಲು ಹಾಗೂ ಐದು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಸಭೆ ತೀರ್ಮಾನಿಸಿದೆ.
ಅರಮನೆ ಆವರಣದಲ್ಲಿ ಆಯೋಜಿಸಲಾಗುವ ಧ್ವನಿ-ಬೆಳಕು ಕಾರ್ಯಕ್ರಮವು ಪ್ರಸ್ತುತ ಕನ್ನಡದಲ್ಲಿ ಇದ್ದು, ಈ ಕಾರ್ಯಕ್ರಮವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲೂ ಸಹಾ ಎರಡು ತಿಂಗಳೊಳಗೆ ಏರ್ಪಡಿಸಲು ಅರಮನೆಯ ಉದ್ಯಾನಗಳ ಮೇಲುಸ್ತುವಾರಿಗೆ ಸಮಿತಿ ರಚಿಸುವುದು, ಹೆಚ್ಚುವರಿಯಾಗಿ 1000 ಎಲ್‌ಪಿಎಚ್ ಸಾಮರ್ಥ್ಯದ ನೀರಿನ ಘಟಕ ಸ್ಥಾಪಿಸಲು ತೀರ್ಮಾನಿಸಲಾಯಿತು.
ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಯುಗಾದಿ ಉತ್ಸವ, ಜೂನ್‌ನಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ, ಡಿಸೆಂಬರ್‌ನಲ್ಲಿ ಫಲಪುಷ್ಪ$ಪ್ರದರ್ಶನ ಹಾಗೂ ಅರಮನೆಯ ಪ್ರಾಂಗಣದಲ್ಲಿ ಸಾಂಸಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಅರಮನೆ ಮಂಡಳಿ ಕಚೇರಿಯ ಕಡತ ನಿರ್ವಹಣೆಗೆ ಇ-ಕಚೇರಿ ತಂತ್ರಾಂಶ ಅನುಷ್ಠಾನ, ಅರಮನೆಯಲ್ಲಿ 3-ಡಿ ಪೊ›ಜೆಕ್ಷನ್ ಕೈಗೊಳ್ಳಲು ವಿಸ್ತತ ಯೋಜನಾ ವರದಿ ಸಿದ್ಧಪಡಿಸುವುದು, ಅರಮನೆ ಆವರಣದಲ್ಲಿ ಅಗ್ನಿ ಶಾಮಕ ನಿಯಂತ್ರಣ ಘಟಕ ಸ್ಥಾಪಿಸಲು ತೀರ್ಮಾನಿಸಲಾಯಿತು.
ಚಾಮುಂಡಿ ಬೆಟ್ಟದಲ್ಲಿರುವಂತೆ ಸಿಐಐ ವತಿಯಿಂದ ಸಿಎಸ್‌ಆರ್ ಯೋಜನೆಯಡಿ ಪಾರಂಪರಿಕ ಕಟ್ಟಡವಾದ ಅರಮನೆಯ ವಿನ್ಯಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹೈಟೆಕ್ ಹಸಿರು ಶೌಚಾಲಯಗಳನ್ನು ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆಯಿಂದ ಅನುಮತಿ ಪಡೆದು ನಿರ್ಮಿಸಲು ಸಭೆ ನಿರ್ಧರಿಸಿತು.
ಇತ್ತೀಚೆಗೆ ಅರಮನೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹಚ್ಚುತ್ತಿರುವುದರಿಂದ, ಪ್ರತಿ ದಿನ ಧ್ವನಿ-ಬೆಳಕು ಕಾರ್ಯಕ್ರಮದ ನಂತರ, ಅರಮನೆ ವಿದ್ಯುತ್ ದೀಪಗಳನ್ನು 5 ನಿಮಿಷಗಳ ಬದಲಿಗೆ 15 ನಿಮಿಷ ಬೆಳಗಲು ಹಾಗೂ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು 1 ಗಂಟೆ ಬೆಳಗಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಂಡಳಿ ಸದಸ್ಯರುಗಳಾದ ಲೋಕೋಪಯೋಗಿ ಇಲಾಖೆ, ಕಾನೂನು ಇಲಾಖೆ ಕಾರ್ಯದರ್ಶಿಗಳು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಆಯುಕ್ತರು, ಅರಮನೆ ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕರಾದ ಜಿಲ್ಲಾಧಿಕಾರಿ ಡಿ.ರಂದೀಪ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.