ಮೈಸೂರು ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಆಯ್ಕೆ ; ಸಿದ್ದು ಮೇಲುಗೈ
Team Udayavani, Nov 17, 2018, 1:17 PM IST
ಮೈಸೂರು: ದೋಸ್ತಿ ಪಕ್ಷಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್ ಅವರು ಆಯ್ಕೆಯಾಗಿದ್ದಾರೆ.
ಪುಷ್ಪಲತಾ ಅವರ ಪರವಾಗಿ 48 ಮತಗಳು ಬಂದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ಸುನಂದಾ ಪಾಲನೇತ್ರ ಪರ 24 ಮತಗಳು ಬಂದವು. ಪುಷ್ಪಲತಾ 11 ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಯಾಗಿದ್ದಾರೆ.
ಉಪಮೇಯರ್ ಆಗಿ ಕಾಂಗ್ರೆಸ್‌ನ ಶಫಿ ಅಹ್ಮದ್ ಅವರು 48 ಮತಗಳನ್ನು ಪಡೆದು ಆಯ್ಕೆಯಾದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಸತೀಶ್ 24 ಮತಗಳನ್ನು ಮಾತ್ರ ಪಡೆದರು.
ಪಾಲಿಕೆ ಚುನಾವಣೆ ಮುಗಿದು,ಮೀಸಲಾತಿ ಘೋಷಣೆಯಾದ ದಿನದಿಂದಲೂ
ಮೇಯರ್ ಸ್ಥಾನಕ್ಕಾಗಿ ಎರಡು ಪಕ್ಷದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿತ್ತು.
ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಬಿಟ್ಟು ಕೊಡುವ ಬಗ್ಗೆ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ತೀವ್ರ ಅಸಮಾಧಾನ ಹೊಂದಿದ್ದರು. ಉಭಯ ಪಕ್ಷಗಳ ನಾಯಕರು ಮಾತುಕತೆ ನಡೆಸಿ ಜಿಟಿಡಿ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದಸ್ಯರ ಬಲಾಬಲ
ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ-22, ಕಾಂಗ್ರೆಸ್-19, ಜೆಡಿಎಸ್-18, ಬಿಎಸ್ಪಿ-1 ಹಾಗೂ 5 ಪಕ್ಷೇತರ ಸದಸ್ಯರಿದ್ದಾರೆ. ಇದರಲ್ಲಿ 18 ಸ್ಥಾನವನ್ನು ಪಡೆದಿರುವ ಜೆಡಿಎಸ್ ಮಿತ್ರ ಪಕ್ಷ ಬಿಸ್ಪಿ ಜತೆ ಸೇರಿ 19 ಸ್ಥಾನಗಳನ್ನು ಹೊಂದಿದೆ. ಜತೆಗೆ ಓರ್ವ ಶಾಸಕ ಹಾಗೂ ಮೂವರು ವಿಧಾನಪರಿಷತ್ ಸದಸ್ಯರ ಬೆಂಬಲದೊಂದಿಗೆ 23 ಸ್ಥಾನಗಳನ್ನು ಪಡೆದಿದೆ. ಇನ್ನೂ 19 ಸ್ಥಾನವನ್ನು ಗಳಿಸಿರುವ ಕಾಂಗ್ರೆಸ್ ಮೂವರು ಪಕ್ಷೇತರರು ಓರ್ವ ವಿಧಾನಪರಿಷತ್ ಸದಸ್ಯ ಹಾಗೂ ಓರ್ವ ಶಾಶಕರ ನೆರವಿನಿಂದ 24 ಚುನಾಯಿತ ಸದಸ್ಯರ ಬೆಂಬಲ ಹೊಂದಿದೆ.
ಪಾಲಿಕೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ 22 ಸದಸ್ಯರ ಜತೆಗೆ ಇಬ್ಬರು ಶಾಸಕರು, ಓರ್ವ ಸಂಸದರ ಬೆಂಬಲದಿಂದ 25 ಸ್ಥಾನ ಹೊಂದಿದೆ. ನಗರ ಪಾಲಿಕೆ ಸದಸ್ಯರು ಹಾಗೂ ಚುನಾಯಿತ ಸದಸ್ಯರು ಸೇರಿ 74 ಮಂದಿ ಮತದಾನದ ಅರ್ಹತೆ ಪಡೆದಿದ್ದು, ಬಹುಮತಕ್ಕೆ 38 ಸದಸ್ಯರ ಬೆಂಬಲ ಅಗತ್ಯವಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.