Mysuru Dasara; ಸರಳವೂ ಅಲ್ಲದೇ, ಅದ್ದೂರಿಯಾಗಿಯೂ ಇಲ್ಲದೇ, ಸಾಂಪ್ರದಾಯಿಕ ಆಚರಣೆ
ಅನಗತ್ಯ ಕಾರ್ಯಕ್ರಮಗಳಿಗೆ ಕತ್ತರಿ....ಕವಿಗೋಷ್ಠಿಯಲ್ಲಿ ಸಂವಿಧಾನದ ಬಗ್ಗೆ ಮಾಹಿತಿ ಇರಬೇಕು
Team Udayavani, Sep 23, 2023, 8:52 PM IST
ಮೈಸೂರು : ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವವನ್ನು ಸರಳವೂ ಅಲ್ಲದೇ, ಅದ್ದೂರಿಯಾಗಿಯೂ ಇಲ್ಲದೇ, ಸಾಂಪ್ರದಾಯಿಕವಾಗಿ ಆಚರಿಸಲು ಸರಕಾರ ಶನಿವಾರ ತೀರ್ಮಾನ ಕೈಗೊಂಡಿದೆ.
ದಸರಾ ಉಪಸಮಿತಿ ಸಭೆಯ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದರು. ಇಂದು 4 ನೇ ಬಾರಿ ದಸರಾ ಉಪ ಸಮಿತಿ ಸಭೆ ನಡೆದಿದೆ. ಆರಂಭದಲ್ಲಿ ಇದ್ದ ರಾಜ್ಯದ ಪರಿಸ್ಥಿತಿ ದಿನ ಕಳೆದಂತೆ ಬೇರೆಯಾಗುತ್ತಾ ಬಂದಿದೆ.ಮಳೆ ಪ್ರಮಾಣ 123 ವರ್ಷಗಳ ಬಳಿಕ ತುಂಬಾ ಕಡಿಮೆಯಾಗಿದೆ.ಜಲಾಶಯಗಳಲ್ಲಿ ನೀರಿನ ಪ್ರಮಾಣ ತುಂಬಾ ಕಡಿಮೆಯಿದೆ.ಕಾವೇರಿ ಕಣಿವೆ ಭಾಗದ ಜಲಾಶಯಗಳಲ್ಲಿ ಒಟ್ಟಾರೆಯಾಗಿ 49 ಟಿಎಂಸಿ ನೀರು ಲಭ್ಯವಿದೆ.ಈಗಾಗಲೇ 196 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆ ಆಗಲಿವೆ.ಹಾಗಾಗಿ ಈ ಬಾರಿಯ ದಸರಾ ಮಹೋತ್ಸವವನ್ನು ಸರಳವೂ ಅಲ್ಲದೇ, ಅದ್ದೂರಿಯಾಗಿಯೂ ಇಲ್ಲದೇ, ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುವುದು ಎಂದರು.
ಅನಗತ್ಯ ಕಾರ್ಯಕ್ರಮಗಳಿಗೆ ಕತ್ತರಿ ಹಾಕಲಾಗುವುದು.ದುಂದು ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಯುವ ದಸರಾವನ್ನು ಕೂಡ ಅದ್ದೂರಿಯಾಗಿ ನಡೆಸುವುದಿಲ್ಲ.ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಬಿಂಬಿಸುವ ರೀತಿ ಇರಬೇಕು. ಕವಿಗೋಷ್ಠಿಯಲ್ಲಿ ಸಂವಿಧಾನ, ಗಣರಾಜ್ಯ, ಕರ್ನಾಟಕ ಏಕೀಕರಣ, ಮೈಸೂರು ಅರಸರ ಬಗ್ಗೆ ಮಾಹಿತಿ ಇರಬೇಕು. ಆಹಾರ ಮೇಳದಲ್ಲಿ ದೇಶೀಯ ಆಹಾರ ಪದ್ಧತಿಯ ಆಹಾರಗಳನ್ನು ನೀಡಬೇಕು ಅಲ್ಲದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆ ಮಾಡಬೇಕು. ದಸರಾ ಚಲನ ಚಿತ್ರೋತ್ಸವದಲ್ಲಿ ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಪ್ರದರ್ಶನ ಮಾಡಬೇಕು. ಯುವ ನಿರ್ದೇಶಕರಿಗೆ ಉತ್ತೇಜನ ನೀಡುವಂತೆ ಇರಬೇಕು. ಕಿರು ಚಿತ್ರಗಳ ಸ್ಪರ್ಧೆ ಏರ್ಪಡಿಸೇಕು ಎಂದು ತಿಳಿಸಿದರು.
ಫಲಪುಷ್ಪ ಪ್ರದರ್ಶನ ಆಕರ್ಷಣೀಯವಾಗಿ ಇರಬೇಕು. ಹಣ್ಣು ಮೇಳದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಹಣ್ಣುಗಳ ಪ್ರದರ್ಶನ ಆಗಬೇಕು. ರೈತರಿಂದ ನೇರವಾಗಿ ಹಣ್ಣುಗಳ ಖರೀದಿ ಅಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯತ್ರಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಿ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಶಿವರಾಜ್, ದಸರಾ ಉಪಸಮಿತಿಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
JPC ಅಧ್ಯಕ್ಷ ಪಾಲ್ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್ ಒವೈಸಿ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Puttur: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Mangalore: ವಂಚನೆ ಪ್ರಕರಣದಲ್ಲಿ ಭಾಗಿ ಆರೋಪಿಸಿ 30.65 ಲಕ್ಷ ರೂ. ಹಣ ವರ್ಗಾಯಿಸಿ ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.