Politics: ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ: ಎನ್ ರವಿಕುಮಾರ್ ವಾಗ್ದಾಳಿ
Team Udayavani, May 22, 2024, 1:12 PM IST
ಕೊಪ್ಪಳ: ರಾಜ್ಯ ಸರ್ಕಾರ ಗ್ಯಾರಂಟಿಗಳ ಅಮಲಿನಲ್ಲಿದೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊಡುತ್ತಿಲ್ಲ. ಗ್ಯಾರಂಟಿ ಬಿಟ್ಟು ರಾಜ್ಯದಲ್ಲಿ ಏನೂ ಇಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ದಾಹಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ ತಂದರು.ರಾಜ್ಯದಲ್ಲಿ ನೀರಾವರಿ, ಕೈಗಾರಿಕೆ, ಕಂದಾಯ, ಶಿಕ್ಷಣ ಹಳ್ಳಹತ್ತಿ ಹೋಗಿವೆ. ಪೋಷಕರೂ ಸಹ ಆತಂಕದಲ್ಲಿದ್ದಾರೆ.ಸರ್ಕಾರಿ ಕೆಲಸ ಶಿಕ್ಷಕರಿಗೆ ಕೊಡಬೇಡಿ. ಶಿಕ್ಷಣದ ಕೆಲಸ ಮಾತ್ರ ಶಿಕ್ಷಕರಿಗೆ ಕೊಡಿ.ರಾಜ್ಯದ ಯುವ ನಿಧಿ ಒಬ್ಬರಿಗೂ ಕೊಟ್ಟಿಲ್ಲ. 5, 8, 9, ಪಬ್ಲಿಕ್ ಪರೀಕ್ಷೆ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಮುನ್ನೋಟವೇ ಇಲ್ಲ. ಶಿಕ್ಷಣ ಸಚಿವರು ಸಿನಿಮಾಲೋಕದಲ್ಲಿ ಹೀರೋ ಆಗಿದ್ದವರು ಇಲ್ಲಿ ಬಂದು ಜೀರೋ ಆಗಿದ್ದಾರೆ ಸಿನಿಮಾ ಹೀರೋ ಇಲ್ಲಿ ಜೀರೋ ಆದರಲ್ಲ ಯಾಕೆ ? ಎಂದು ಸಿಎಂ ಹೇಳಲಿ.ಶಿಕ್ಷಣ ಸಚಿವರಿಗೆ ಶಿಕ್ಷಣದ ಗಂಧ ಗಾಳಿಯು ಗೊತ್ತಿಲ್ಲ ಅವರನ್ನು ಶಿಕ್ಷಣ ಕ್ಷೇತ್ರದಿಂದ ಮುಕ್ತಿ ಮಾಡಲಿ ಎಂದರು.
ಸರ್ಕಾರ ಮಕ್ಕಳ ಶಿಕ್ಷಣದ ಜೊತೆ ಆಟ ಆಡುತ್ತಿದೆ.ವಿವಿಗಳು ಮುಚ್ಚುವ ಪರಿಸ್ಥಿತಿಯಲ್ಲಿ ಇವೆ. 45 ಸಾವಿರ ತರಗತಿಗಳು ಶಿಥಿಲಾವಸ್ಥೆಯಲ್ಲಿವೆ. ಕನ್ನಡ ಮಾತನಾಡಲು ಬರದ ಶಿಕ್ಷಣ ಸಚಿವರ ಬಗ್ಗೆ ಸಿಎಂ ಕ್ರಮ ಕೈಗೊಳ್ಳಬೇಕು ಎಂದರು.
ಪೋನ್ ಟ್ಯಾಪಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು, ಟ್ಯಾಪಿಂಗ್ ವಿಚಾರ ಸಿಬಿಐಗೆ ಕೊಡಲಿ. ಚೀನಾ ಯಂತ್ರ ಬಳಸಿ ಪೋನ್ ಟ್ಯಾಪಿಂಗ್ ಮಾಡುವ ವಿಚಾರದ ಬಗ್ಗೆ ಬಿಜೆಪಿ ದೂರು ಕೊಡುವ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಬಿಜೆಪಿಗೆ ಎಕನಾಮಿಕ್ಸ್ ಗೊತ್ತಿಲ್ಲ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಎಂ ಅವರು ಭದ್ರತಾ ವೆಚ್ಚಕ್ಕೆ ಶೇ.103 ರಷ್ಟು ವೆಚ್ಚ ಮಾಡಿದ್ದಾರೆ. ನಾವು ಎಕನಾಮಿಕ್ಸ್ ತಿಳಿದಿದ್ದೇವೆ, ಸಮಾಜವೂ ಎಕನಾಮಿಕ್ಸ್ ತಿಳಿದಿದೆ ಎಂದರು.
ಜೂ. 03 ರಂದು ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಈಶಾನ್ಯ ಭಾಗದಲ್ಲಿ 1.60 ಲಕ್ಷ ಮತದಾರರು ಇರಬಹುದು.ನಮ್ಮಲ್ಲಿ ಅನೇಕ ಆಕಾಂಕ್ಷಿಗಳಿದ್ದರು. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಅಮರನಾಥ ಪಾಟೀಲ್ ಅಭ್ಯರ್ಥಿಯಾಗಿದ್ದಾರೆ. ನಮ್ಮ ಬಿಜೆಪಿ ಹಾಗೂ ಜೆಡಿಎಸ್ ನೆಟವರ್ಕ್ ಚೆನ್ನಾಗಿದೆ. ನಾವು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲ್ಲುತ್ತೇವೆ. ಪದವೀಧರ, ಶಿಕ್ಷಕರ ಕ್ಷೇತ್ರಗಳಲ್ಲಿ ಸಾಕಷ್ಟು ಸಮಸ್ಯೆ ಇವೆ ಎಂದರು.
ಈ ಬಾರಿ SSLC ಫಲಿತಾಂಶ ಶೇ. 53 ಇತ್ತು. ರಾಜ್ಯ ಸರ್ಕಾರ 20 % ಗ್ರೇಸ್ ಅಂಕ ಕೊಟ್ಟಿದೆ ಗ್ರೇಸ್ ಮಾರ್ಕ್ಸ್ ನಿಂದ ಶಿಕ್ಷಣ ಸುಧಾರಣೆ ಅಸಾಧ್ಯ. ಕಕ ಭಾಗದ ಫಲಿತಾಂಶ ಶೇ.53 ರಷ್ಟು ಬಂದಿದೆ ಶಿಕ್ಷಣ ಸಚಿವರು ಈ ಬಗ್ಗೆ ಸಭೆ ಕರೆದು ಮಾತನಾಡಿದ್ದಾರಾ ? ಗ್ರೇಸ್ ಅಂಕ ಅತಿ ಹೆಚ್ಚು ಕೊಡಲಾಗಿದೆ. ಪ್ರೌಢ ಶಾಲೆ ಶಿಕ್ಷಕರು ಬರಿ ಪರೀಕ್ಷೆ ನಡೆಸಲಿದ್ದಾರೆ. ಪ್ರೌಢ ಶಾಲಾ ಶಿಕ್ಷಕರಿಗೆ ರಜೆ ಸಿಗುತ್ತಿಲ್ಲ. ಶಿಕ್ಷಕರು ಬಿಸಿಯೂಟ, ಸರ್ಕಾರದ ಸರ್ವೆ, ಚುನಾವಣಾ ಕೆಲಸ ಮಾಡಬೇಕು. ಮಕ್ಕಳ ಕಲಿಕೆಗೆ ಶಿಕ್ಷಕರನ್ನು ಬಿಡುತ್ತಿಲ್ಲ. ಸರ್ಕಾರಿ ಶಾಲೆ ಶಿಕ್ಷಕರಿಗೆ ಸಾಕಷ್ಟು ಕೆಲಸ ಕೊಡಲಾಗುತ್ತಿದೆ ಎಂದರು.
ಕಲ್ಯಾಣ ಭಾಗದಲ್ಲಿ ಶಿಕ್ಷಕರ ಕೊರತೆ 17796 ರಷ್ಟಿದೆ. ಈಗಾಗಲೇ 6 ಸಾವಿರ ಶಿಕ್ಷಕರು ವರ್ಗಾವಣೆ ತೆಗೆದುಕೊಂಡಿದ್ದಾರೆ. ಇದಕ್ಕೆ ಮಧು ಬಂಗಾರಪ್ಪ ಕಾರಣ. ಶಿಕ್ಷಕರ ನೇಮಕ ತಕ್ಷಣ ಆಗಬೇಕು. ದೇವದುರ್ಗ ತಾಲೂಕಿನಲ್ಲಿ ಒಬ್ಬ ಶಿಕ್ಷಕ ಇಲ್ಲದ ನೂರು ಶಾಲೆ ಇವೆ. ಈ ಎಲ್ಲ ಸಮಸ್ಯೆಗಳ ಕುರಿತು ಪರಿಷತ್ ಹಾಗೂ ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ ಗುಳಗಣ್ಣನವರ್, ಎಂಎಲ್ಸಿ ಹೇಮಲತಾ ನಾಯಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಡಾ. ಬಸವರಾಜ, ಜಿ. ಶ್ರೀಧರ್ , ಮಹಾಂತೇಶ ಮೈನಳ್ಳಿ ಸೋಮನಗೌಡ್ರು ಉಪಸ್ಥಿತಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.