Nagamangala case; ಬಂಧಿತರಲ್ಲಿ ಅಮಾಯಕರಿದ್ದರೆ ಚಾರ್ಜ್‌ಶೀಟ್‌ನಿಂದ ಹೊರಕ್ಕೆ
ಗಲಭೆ ಹಿಂದೆ ಎಚ್‌ಡಿಕೆ ಕೈವಾಡ ಎಂದ ಡಿ.ಕೆ.ಸುರೇಶ್
Team Udayavani, Sep 15, 2024, 6:30 AM IST
ಮಂಡ್ಯ: ನಾಗಮಂಗಲ ಗಲಾಟೆಯಲ್ಲಿ ಬಂಧನಕ್ಕೆ ಒಳಗಾದವರು ಅಮಾಯಕರೆಂದು ಖಚಿತವಾದರೆ ಚಾರ್ಜ್‌ಶೀಟ್ ವೇಳೆ ಹೆಸರು ಕೈಬಿಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿ, ಗುಂಪು ಘರ್ಷಣೆಗಳಾದಾಗ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ನೋಡಿಯೋ ಗುಂಪಲ್ಲಿದ್ದರು ಎಂಬ ಕಾರಣಕ್ಕೋ ಬಂ ಧಿಸಿರುತ್ತಾರೆ. ಅಮಾಯಕರಿದ್ದರೆ ಖಂಡಿತವಾಗಿ ಚಾರ್ಜ್‌ಶೀಟ್ ವೇಳೆ ಕೈಬಿಡಲಾಗುವುದು ಎಂದರು. ಸೋಮವಾರ ಮುಸ್ಲಿಮರ ಹಬ್ಬವಿರುವುದರಿಂದ ಗಣಪತಿ ವಿಸರ್ಜನೆ ಬೇಡ ಎಂದಿದ್ದೇವೆ ಎಂದರು. ನಾಗಮಂಗಲ ಬಹುತೇಕ ಶಾಂತವಾಗಿದ್ದು, ಶನಿವಾರ ಶೇ. 80ರಷ್ಟು ಅಂಗಡಿ-ಮುಂಗಟ್ಟುಗಳು ತೆರೆದಿವೆ. ಜನ ಜೀವನ ಸಹಜ ಸ್ಥಿತಿಗೆ ಮರಳಿತ್ತು.
ಗಲಭೆ ಹಿಂದೆ ಎಚ್‌ಡಿಕೆ ಕೈವಾಡ: ಡಿ.ಕೆ.ಸುರೇಶ್
ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕೈವಾಡವೂ ಇರಬಹುದು. ವಾರಕ್ಕೊಮ್ಮೆ ಬಂದು ಏನೇನೋ ಸಂದೇಶ ಕೊಟ್ಟು ಹೋಗುತ್ತಿರುತ್ತಾರೆ. ಅವರೂ ಕಾರಣ ಇರಬಹುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವರಿಗೆ ಡಿ.ಕೆ. ಬ್ರದರ್ಸ್ ನೆನಪು ಮಾಡಿಕೊಳ್ಳದಿದ್ದರೆ ಒಂದೂ ಆಗುವುದಿಲ್ಲ, ಎರಡೂ ಆಗುವುದಿಲ್ಲ. ಮೂರನೇಯದಂತೂ ವರ್ಕ್ ಆಗುವುದೇ ಇಲ್ಲ ಎಂದು ಟೀಕಿಸಿದರು.
ಡಿಕೆ ಬ್ರದರ್‌ಗಳ ಹಿನ್ನೆಲೆ ಜಗತ್ತಿಗೆ ಗೊತ್ತಿದೆ: ಎಚ್‌ಡಿಕೆ
ಬೆಂಗಳೂರು: ಡಿಕೆ ಬ್ರದರ್‌ಗಳ ಹಿನ್ನೆಲೆ ಏನು ಎಂಬುದು ಇಡೀ ಜಗತ್ತಿಗೇ ಗೊತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳುವ ಮೂಲಕ ನಾಗಮಂಗಲ ಗಲಭೆ ಹಿಂದೆ ಎಚ್‌ಡಿಕೆ ಇದ್ದಾರೆ ಎಂಬ ಡಿ.ಕೆ. ಸುರೇಶ್ ಆರೋಪಕ್ಕೆ ತಿರುಗೇಟು ನೀಡಿದರು.
ವರದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ. ಸುರೇಶ್ ಹಿನ್ನೆಲೆ ಏನು ಎಂದು ಗೊತ್ತಿಲ್ಲವೇ? ಅಣ್ಣ – ತಮ್ಮಂದಿರು ಯಾವ ಮಾರ್ಗದಲ್ಲಿ ಬಂದಿದ್ದಾರೆ. ಯಾರಿಗೆ ಹೇಗೆಲ್ಲ ಬೆದರಿಕೆ ಹಾಕಿದ್ದಾರೆ. ಯಾರ ಯಾರ ಆಸ್ತಿಗಳನ್ನು ಲಪಟಾಯಿಸಿ ಲೂಟಿವೂಡಿದ್ದಾರೆ ಎಂಬುದೆಲ್ಲ ಜನರಿಗೆ ಗೊತ್ತಿದೆ. ಅಂತವರ ಬಗ್ಗೆ ನಾನು ಹೇಳಿಕೆ ಕೊಡಬೇಕಾ? ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.