ಸಿದ್ದು ಜಾತಿಗಳ ಮಧ್ಯೆ ಸಂಘರ್ಷ ಹುಟ್ಟು ಹಾಕಿದ ನರಹಂತಕ: ನಳಿನ್
Team Udayavani, Sep 30, 2022, 6:42 AM IST
ರಾಮದುರ್ಗ: ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಕೆಟ್ಟದ್ದಾಗಿ ತೆಗಳಿದ್ದರು. ಕಾಂಗ್ರೆಸ್ ಕಾಲಿಗೆ ಬಿದ್ದು ಅಧಿಕಾರ ಪಡೆದು ಪೇಮೆಂಟ್ ಸೀಟ್ ಮೇಲೆ ಮುಖ್ಯಮಂತ್ರಿ ಯಾಗಿ ಭ್ರಷ್ಟಾಚಾರ ನಡೆಸುವ ಜತೆಗೆ ಜಾತಿ ನಡುವೆ ಸಂಘರ್ಷ ಹುಟ್ಟು ಹಾಕಿದ ನರಹಂತಕ ಎಂದು ನಳಿನ್‌ಕುಮಾರ್ ಹೇಳಿದರು.
ತಾಲೂಕಿನ ಖಾನಪೇಠ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬಿಜೆಪಿ ರಾಮದುರ್ಗ ಮಂಡಲ ನೇತೃತ್ವದಲ್ಲಿ ಗುರುವಾರ ನಡೆದ ಜನಸ್ಪಂದನ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 5 ವರ್ಷಗಳ ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಉದ್ಧಾರಕ ಎಂದು ಪೋಸ್ ಕೊಟ್ಟು, ಭ್ರಷ್ಟಾಚಾರದ ಹೊಳೆಯನ್ನೇ ಹರಿಸಿದರು. ಕೈಯಲ್ಲಿ ಕಟ್ಟಿಕೊಂಡ ಕೋಟಿ ರೂಪಾಯಿ ವಾಚ್ ಅನ್ನು ಯಾರು ದೇಣಿಗೆ ನೀಡಿದ್ದು ಎಂಬುದನ್ನು ಮರೆತು ಉತ್ತಮ ಆಡಳಿತ ನೀಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಮಾತಾಡುತ್ತಾರೆ. ಮುಸ್ಲಿಮ ರಿಗೂ ಬೇಡವಾಗಿದ್ದ ಟಿಪ್ಪು ಜಯಂತಿ ಮಾಡುವ ಮೂಲಕ ಹಿಂದೂ- ಮುಸ್ಲಿಮರಲ್ಲಿ ಘರ್ಷಣೆ ತಂದಿದ್ದಟ್ಟರೆ, ಒಂದಾಗಿದ್ದ ವೀರಶೈವ ಲಿಂಗಾಯತರಲ್ಲಿ ಪಂಗಡಗಳ ಬೀಜ ಬಿತ್ತಿ ಒಡೆದಾಳುವ ಕೆಲಸ ಮಾಡಿದರು. ಇಂತಹ ವ್ಯಕ್ತಿಗಳಿಗೆ ಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿ ಶಾಶ್ವತ ರಾಜಕೀಯ ಸನ್ಯಾಸತ್ವ ನೀಡಲಿದ್ದಾರೆ ಎಂದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅವಧಿ ಪೂರ್ವಚುನಾವಣೆ ಬರುವುದಿಲ್ಲ. ಐದು ವರ್ಷ ಪೂರ್ಣಗೊಳಿಸುತ್ತೇವೆ. ನಮಗೆ ಚುನಾವಣೆ ಧಾವಂತ ಇಲ್ಲ. – ನಳಿನ್‌ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.