ಬೆಡ್, ಆಕ್ಸಿಜನ್ ಕೊರತೆಗೆ ಕಾಂಗ್ರೆಸ್ ಕಾರಣ
Team Udayavani, May 11, 2021, 10:42 AM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ, ಅದರ ನಿಯಂತ್ರಣಕ್ಕೆ ಆಡಳಿತ ಪಕ್ಷವಾಗಿ ಕೋವಿಡ್ ನಿಯಂತ್ರಿಸಲು ಮಾಡುತ್ತಿರುವ ಕೆಲಸ, ಜಿಂದಾಲ್ ಸಂಸ್ಥೆಗೆ ಸರ್ಕಾರ ಜಮೀನುನೀಡಲು ಮುಂದಾಗಿರುವುದಕ್ಕೆ ಸ್ವಪಕ್ಷೀಯ ಶಾಸಕರ ವಿರೋಧ, ನಾಯಕತ್ವ ಬದಲಾವಣೆ ಈ ಎಲ್ಲ ವಿಚಾರಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷನಳಿನ್ ಕುಮಾರ್ ಕಟೀಲ್”ಉದಯವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.
ಕೋವಿಡ್ ನಿಯಂತ್ರಿಸಲು ಬಿಜೆಪಿ ಏನು ಮಾಡುತ್ತಿದೆ?
ನಾವು ಕೋವಿಡ್ ಮೊದಲು ಬಂದಾಗಲೂ ಸೇವಾ ಹಿ ಸಂಘಟನೆ ಮಾಡಿದ್ದೆವು. ಈಗಲೂ ಪಕ್ಷದ 37 ಜಿಲ್ಲಾ ಘಟಕಗಳಲ್ಲಿ ಒಂದು ವಾರ್ ರೂಮ್ ಮಾಡಿದ್ದೇವೆ. 250 ಸಹಾಯ ಕೇಂದ್ರಗಳನ್ನು ತೆರೆದಿದ್ದೇವೆ. 13 ಸೇವೆಗಳನ್ನು ನೀಡುತ್ತಿದ್ದೇವೆ.
ಶಾಸಕರಿಗೆ ಯಾವ ಜವಾಬ್ದಾರಿ ನೀಡಿದ್ದೀರಾ?
ಎಲ್ಲ ಶಾಸಕರಿಗೆ ಜವಾಬ್ದಾರಿ ನೀಡಿದ್ದೇವೆ. ಕಡ್ಡಾಯ ಕ್ಷೇತ್ರದಲ್ಲಿದ್ದು, ಮಂಡಲ ಅಧ್ಯಕ್ಷ ರೊಂದಿಗೆ ಸೇರಿ ವಾರ್ ರೂಂ ಜವಾಬ್ದಾರಿ ವಹಿಸಿ ದ್ದೇವೆ.ಗ್ರಾಮಗಳಲ್ಲಿ ಕೊರೊನಾ ಕಾರ್ಯಪಡೆಯೊಂದಿಗೆ ಕೆಲಸ ಮಾಡಬೇಕೆಂದು ಸೂಚಿಸಿದ್ದೇವೆ.
ಬೆಡ್ ಬ್ಲಾಕಿಂಗ್ ಹಗರಣ ನಿಮ್ಮ ಸರ್ಕಾರದ ವಿರುದ್ಧ, ನಿಮ್ಮ ಸಂಸದರೇ ಆರೋಪ ಮಾಡುತ್ತಿದ್ದಾರಲ್ಲಾ?
ಹಾಗೇನಿಲ್ಲ. ಸರ್ಕಾರದ ವಿರುದ್ಧ ಆರೋಪ ಅಲ್ಲ ಅದು. ಎಲ್ಲಿ ಸಮಸ್ಯೆಯಾಗುತ್ತಿದೆ ಅನ್ನುವುದನ್ನು ಅವರು ಸರ್ಕಾರದ ಗಮನಕ್ಕೆತಂದಿದ್ದಾರೆ. ಕೆಳ ಮಟ್ಟದಲ್ಲಿ ಆಗುವ ಸಮಸ್ಯೆಗಳು ಕೆಲವು ಬಾರಿ ಸರ್ಕಾರದ ಗಮನಕ್ಕೆ ಬರುವುದಿಲ್ಲ. ಅದನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅದು ಸರ್ಕಾರದ ವಿರುದ್ಧವಲ್ಲ.
ಒಂದೇ ಕೋಮಿನವರನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಕಾಂಗ್ರೆಸ್‌ನವರು ಆರೋಪ ಮಾಡ್ತಿದ್ದಾರೆ?
ಒಂದೇ ಕೋಮಿನವರು ಅಂತೇನಿಲ್ಲ. ಬೇರೆ ಕೆಲವು ಅಧಿಕಾರಿಗಳೂ ಇದ್ದಾರೆ. ಅವರನ್ನೂ ಅಮಾನತು ಮಾಡಲಾಗಿದೆ. ಕಾಂಗ್ರೆಸ್‌ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಒಂದೇ ಜಾತಿಯವರು ಹೆಚ್ಚಿನವರಿದ್ದಾರೆ. ಕೋಮು ಭಾವನೆ ಹುಡುಕುವುದು ಸರಿಯಲ್ಲ.
ಚಾಮರಾಜನಗರ ದುರಂತ ಸರ್ಕಾರದ ನಿರ್ಲಕ್ಷ್ಯದಿಂದಲೇ ನಡೆಯಿತು ಎಂಬ ಆರೋಪ ಕೇಳಿ ಬರುತ್ತಿದೆ?
ಹಾಗೇನಿಲ್ಲ, ಪ್ರಕರಣ ಬೆಳಕಿಗೆ ಬಂದ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಲ್ಲಿಯೇ ಉಳಿದು ಸರಿಪಡಿಸುವ ಕೆಲಸ ಮಾಡಿದ್ದಾರೆ. ಮೈಸೂರು ಮತ್ತುಚಾಮರಾಜನಗರ ಜಿಲ್ಲೆಗಳ ನಡುವಿನ ಗೊಂದಲದಿಂದ ಹೀಗಾಗಿದೆ ಅಂತ ಇದೆ.
ಜಿಂದಾಲ್‌ಗೆ ಜಮೀನು ನೀಡಿರುವ ಬಗ್ಗೆ ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರಲ್ಲ?
ಈ ಬಗ್ಗೆ ನಾನೂ ಸಿಎಂ ಜೊತೆ ಮಾತನಾಡಿದ್ದೇನೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಹೇಳಿದ್ದಾರೆ. ಶಾಸಕರ ಸಲಹೆಗಳನ್ನು ಸಿಎಂ ಪಡೆದುಕೊಂಡಿದ್ದಾರೆ.
ಉಪ ಚುನಾವಣೆ ಫಲಿತಾಂಶದ ಬಗ್ಗೆ ಹೈಕಮಾಂಡ್ ಬೇಸರ ವ್ಯಕ್ತಪಡಿಸಿದೆಯಂತೆ?
ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಬಸವಕಲ್ಯಾಣ ನಮ್ಮದಾಗಿರಲಿಲ್ಲ. ಅಲ್ಲಿ ಗೆದ್ದಿದ್ದೇವೆ. ಮಸ್ಕಿಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದಿರಲಿಲ್ಲ. ಬೆಳಗಾವಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದೇವೆ. ಈ ಬಗ್ಗೆ ಬೂತ್ ಮಟ್ಟದಲ್ಲಿ ಮಾಹಿತಿ ಪಡೆಯಲು ಸೂಚಿಸಿದ್ದಾರೆ. ಕೋವಿಡ್ ಮುಗಿದ ನಂತರ ಈ ಬಗ್ಗೆ ಮಾಹಿತಿ ಪಡೆದು ವರದಿ ಮಾಡಲಾಗುವುದು.
ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿ ಸುತ್ತಿದ್ದಾರಲ್ಲ?
ರಾಜ್ಯ ಸರ್ಕಾರ ಉತ್ತಮ ಕ್ರಮ ತೆಗೆದುಕೊಳ್ಳುತ್ತಿದೆ. ಎರಡನೇ ಅಲೆಯಿಂದಕರ್ನಾಟಕ ಅಷ್ಟೇ ಅಲ್ಲ, ಕೇರಳ, ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿಯೂ ಕೈ ಮೀರಿ ಹೋಗುತ್ತಿದೆ. ಏಕಾಏಕಿ ಬಂದಿರುವುದರಿಂದ ನಿಯಂತ್ರಣ ಕಷ್ಟವಾಗುತ್ತಿದೆ. ಕಾಂಗ್ರೆಸ್‌ನವರು ಆರೋಪಿಸುವ ಬದಲು ಸಲಹೆ-ಸೂಚನೆ ನೀಡಲಿ. ಕಾಂಗ್ರೆಸ್ ಹೆಚ್ಚಿನ ಅವಧಿ ಅಧಿಕಾರ ನಡೆಸಿದೆ. ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್, ಆಕ್ಸಿಜನ್, ಕೊರತೆ ಆಗಲು ಇವರೇ ಕಾರಣ. ಸರ್ಕಾರ ಈಗ ಅಗತ್ಯ ಇರುವ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರದ ಕಾರ್ಯವೈಖರಿ ಬಗ್ಗೆ ತೃಪ್ತಿಯಿದೆ. ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕು.
ಲಾಕ್‌ಡೌನ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಅಂತ ಆರೋಪವಿದೆ?
ಕಳೆದ ವರ್ಷ ಲಾಕ್‌ಡೌನ್ ಘೋಷಣೆ ಮಾಡಿ ದ್ದರಿಂದ ಎಷ್ಟು ಸಮಸ್ಯೆ ಆಯಿತು ಅಂತ ಎಲ್ಲರ ಗಮನದಲ್ಲಿದೆ. ಹೀಗಾಗಿ ಈ ಬಾರಿ ಮುಖ್ಯಮಂತ್ರಿ ಯೋಚಿಸಿ ತೀರ್ಮಾನತೆಗೆದುಕೊಂಡಿದ್ದಾರೆ. ಬಿಗಿ ಕ್ರಮ ಕೈಗೊಂಡರೆರೈತರು ಬೆಳೆದ ಬೆಳೆ ಬೀದಿಯಲ್ಲಿ ಚೆಲ್ಲುವಂತಾಗುತ್ತದೆ. ಸರ್ಕಾರ ಎಲ್ಲವನ್ನೂ ಗಮನಿಸಿ ನಿರ್ಧಾರ ತೆಗೆದುಕೊಂಡಿದೆ.
ಲಾಕ್‌ಡೌನ್ ನಿಂದ ತೊಂದರೆಗೊಳಗಾದವರಿಗೆ ಪರಿಹಾರನೀಡಬೇಕೆಂಬ ಬೇಡಿಕೆ ಇದೆ. ಸರ್ಕಾರಕ್ಕೆ ನೀವೇನಾದರೂ ಸಲಹೆ ನೀಡಿದ್ದೀರಾ?
ಈ ಬಗ್ಗೆ ನಾವೂ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸಂಕಷ್ಟಕ್ಕೆ ಸಿಲುಕಿರುವ ವರ್ಗ ಹಾಗೂ ಸಮುದಾಯಗಳ ನೆರವಿಗೆ ಬರಲು ಸರ್ಕಾರ ಖಂಡಿತ ಕ್ರಮ ಕೈಗೊಳ್ಳುತ್ತದೆ. ಸಿಎಂ ಸಚಿವರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ.
-ಸಂದರ್ಶನ: ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.