BJP ಅಧ್ಯಕ್ಷರಾಗಿ 2 ವರ್ಷ ಪೂರೈಸಿದ ಕಟೀಲ್ : ತಳಮಟ್ಟದ ಸಂಘಟನೆಗೆ ಒತ್ತು ಕೊಟ್ಟದ್ದೇ ವಿಶೇಷ
Team Udayavani, Aug 27, 2021, 7:20 AM IST
ಬೆಂಗಳೂರು: ಬಿಜೆಪಿ ರಾಜ್ಯಾ ಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಯಶಸ್ವಿಯಾಗಿ ಎರಡು ವರ್ಷ ಪೂರೈ ಸಿದ್ದು, ಇವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವ ನಿರೀಕ್ಷೆ ಹುಟ್ಟುಹಾಕಿದೆ.
ಎಲ್ಲ ಜಿಲ್ಲೆ ಗಳಿಗೆ ನಿರಂತರ ಪ್ರವಾಸ ಕೈಗೊಂಡು ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿ ಸುವ ಪ್ರಯತ್ನವನ್ನು ನಳಿನ್ 2 ವರ್ಷಗಳಲ್ಲಿ ಮಾಡಿದ್ದರು.
37 ಜಿಲ್ಲಾ ಮಟ್ಟದ ನಿರಂತರ ಕಾರ್ಯಕಾರಿಣಿ, 290 ಮಂಡಲ ಮಟ್ಟದ ಕಾರ್ಯಕಾರಿಣಿ ಮತ್ತು 3 ತಿಂಗಳು ಗಳಿಗೊಮ್ಮೆ ರಾಜ್ಯ ಮಟ್ಟದ ಕಾರ್ಯ ಕಾರಿಣಿಗಳನ್ನು ನಿರಂತರವಾಗಿ ರಾಜ್ಯದ ವಿವಿಧ ಭಾಗ ಗಳಲ್ಲಿ ನಡೆಸಿದ್ದು, ಮತ್ತೂಂದು ಗಮನಾರ್ಹ ನಡೆ. ಇದು ಪಕ್ಷದ ಬೇರುಗಳನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವಲ್ಲಿ ಸಹಾಯಕವಾಯಿತು ಎಂದು ವ್ಯಾಖ್ಯಾನಿಸಲಾಗಿದೆ.
ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಹುದ್ದೆಗಳನ್ನು ಕಲ್ಪಿಸು ವಲ್ಲಿ ಅಧ್ಯಕ್ಷರಾಗಿ ಶ್ರಮಿಸಿದರೆಂಬುದು ನಳಿನ್ ಕುಮಾರ್ ಕಟೀಲು ಬಗೆಗೆ ಪಕ್ಷದಲ್ಲಿ ಸದಭಿಪ್ರಾಯ ಮೂಡುವಂತೆ ಮಾಡಿದೆ.
ಗ್ರಾ.ಪಂ. ಚುನಾವಣೆಯಲ್ಲಿ ಜಯ:
ಗ್ರಾ.ಪಂ. ಚುನಾವಣೆಗಳಲ್ಲಿ ಜಯ ಗಳಿಸಿದ ಕಾರ್ಯಕರ್ತರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡಿದ್ದು, ವಿಧಾನಸಭಾ ಕ್ಷೇತ್ರವಾರು ಗ್ರಾ.ಪಂ. ಸದಸ್ಯರ ಸಮಾವೇಶ ನಡೆಸಿ, ಅವರಲ್ಲಿ ಉತ್ಸಾಹ ತುಂಬಲಾಗಿತ್ತು. ಇದೂ ರಾಜ್ಯಾದ್ಯಂತ ಪಕ್ಷ ಬಲವರ್ಧನೆಗೆ ಸಹಾಯಕವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕೊರೊನಾ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರೇ ಆರೋಗ್ಯ ಸ್ವಯಂ ಸೇವಕರಾಗಿ ಗ್ರಾಮೀಣ ಪ್ರದೇಶದ ಪ್ರತೀ ಮನೆಗೂ ಭೇಟಿ ನೀಡಿ, ಆರೋಗ್ಯ ಜಾಗೃತಿ ಮೂಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ನಳಿನ್ ಅವರ ಯಶಸ್ವಿ ಕಾರ್ಯ ನಿರ್ವಹಣೆಗೆ ಪಕ್ಷದ ಹಿರಿಯ ನಾಯಕರು ಶುಭ ಹಾರೈಸಿದ್ದಾರೆ.
ಸಮನ್ವಯಕಾರ :
ನಳಿನ್ ಅಧ್ಯಕ್ಷರಾದ ಸಂದರ್ಭ ದಲ್ಲಿ ಬಿಜೆಪಿಯಲ್ಲಿ ವಲಸಿಗರು ಮತ್ತು ಮೂಲ ಕಾರ್ಯಕರ್ತರು ಎಂಬ ಮಾತಿತ್ತು. ಆದರೆ ನಳಿನ್ ಎಲ್ಲರನ್ನೂ ಸಮಾನ ವಾಗಿ ಪರಿಗಣಿಸಿ ವಲ ಸಿಗ ರಿಗೆ ತಾವು ಹೊರಗಿ ನವರು ಎನ್ನುವ ಭಾವ ಮೂಡ ದಂತೆ ನಿರ್ವಹಿಸಿರುವುದು ಪಕ್ಷ ಒಗ್ಗಟ್ಟಾಗಿರಲು ಕಾರಣ ವಾಗಿದೆ. ಅವರ ಸರಳ ಮತ್ತು ಸೂಕ್ಷ್ಮ ನಡೆಯೂ ಪಕ್ಷದ ವರ್ಚಸ್ಸು ವೃದ್ಧಿಗೆ ಕಾರಣ ಎಂಬ ಅಭಿಪ್ರಾಯ ಕಾರ್ಯಕರ್ತರ ವಲಯದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.