ನಮ್ಮ ಮೆಟ್ರೋ: ಆಗಮನ, ನಿರ್ಗಮನಕ್ಕೆ ಒಂದೇ ಪ್ಲಾಟ್‌ಫಾರಂ!
Team Udayavani, Feb 26, 2022, 8:10 AM IST
ಬೆಂಗಳೂರು: “ನಮ್ಮ ಮೆಟ್ರೋ’ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಮುಂದಿನ ಆರು ತಿಂಗಳು ಆಗಮನ ಮತ್ತು ನಿರ್ಗಮನಕ್ಕೆ ಒಂದೇ ಪ್ಲಾರ್ಟ್‌ಫಾರಂ!
ಹೌದು, ಉದ್ದೇಶಿತ ನಿಲ್ದಾಣದಿಂದ ಎರಡನೇ ಹಂತದ ಮೆಟ್ರೋ ಯೋಜನೆ ಅಡಿ ವಿಸ್ತರಿತ ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಮಾರ್ಚ್ 2ರಿಂದ ಮುಂದಿನ ಆರು ತಿಂಗಳು ಒಂದೇ ಪ್ಲಾಟ್‌ಫಾರಂ ಸೇವೆಗೆ ಲಭ್ಯ ಇರಲಿದೆ.
ಹಾಗಾಗಿ, ಬೈಯಪ್ಪನಹಳ್ಳಿಗೆ ಬರುವ ಎಲ್ಲ ರೈಲುಗಳು ಪ್ಲಾಟ್‌ಫಾರಂ 3ರಲ್ಲಿ ಬಂದು ನಿಲ್ಲುತ್ತವೆ. ಬೇರೆ ಬೇರೆ ಕಡೆ ಹೊರಡುವ ರೈಲುಗಳು ಕೂಡ ಇದೇ ಪ್ಲಾಟ್‌ಫಾರಂನಿಂದ ತೆರಳುತ್ತವೆ. ಆರಂಭದಲ್ಲಿ ಈ ಬಗ್ಗೆ ಪ್ರಯಾಣಿಕರಿಗೆ ಗೊಂದಲ ಆಗಬಹುದು. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿರುತ್ತದೆ. ಜತೆಗೆ ಭದ್ರತಾ ಸಿಬ್ಬಂದಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾರ್ಪಾಡಿನಿಂದ ಮೆಟ್ರೋ ರೈಲುಗಳ ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಎಂದಿನಂತೆ ಸೇವೆಗಳು ಇರಲಿವೆ ಎಂದೂ ಪ್ರಕಟಣೆಯಲ್ಲಿ ನಿಗಮವು ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.