ಉದ್ಯೋಗ ಖಾತರಿ ಖಜಾನೆ ಖಾಲಿ ಖಾಲಿ !
Team Udayavani, Sep 12, 2021, 8:30 AM IST
ಮಸ್ಕಿ: ಗ್ರಾಮೀಣ ಕೂಲಿ ಕಾರ್ಮಿಕರ ಕಾಮಧೇನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಖಜಾನೆ ಬರಿದಾಗಿದ್ದು, ಕೂಲಿ ಹಣ ಕಾರ್ಮಿಕರ ಕೈ ಸೇರಿಲ್ಲ. 130.38 ಕೋಟಿ ರೂ. ಕೂಲಿ ಮತ್ತು ಸಾಮಗ್ರಿಗಳ 378 ಕೋಟಿ ರೂ. ಸೇರಿ ಒಟ್ಟು 438.38 ಕೋಟಿ ರೂ. ಬಾಕಿ ಉಳಿದಿದೆ! ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಸುಮಾರು 10.27 ಕೋ.ರೂ.ಗಳಷ್ಟು ಕೂಲಿ ಹಣ ಪಾವತಿಯಾಗಬೇಕಿದೆ.
2 ತಿಂಗಳುಗಳಿಂದ ನರೇಗಾ ಯೋಜನೆಗೆ ಇಂಥ ದುಸ್ಥಿತಿ ಬಂದೊದಗಿದೆ. ಸಾಮಗ್ರಿ ವೆಚ್ಚದ ಮೊತ್ತ ತಡವಾಗುವುದು ಸಾಮಾನ್ಯವಾಗಿತ್ತು. ಆದರೆ ಈಗ ಕೂಲಿ ಹಣವೂ ಬಾಕಿಯಾಗಿದೆ. 1,73,56,162 ಕಾರ್ಮಿಕರು ನರೇಗಾ ಕೆಲಸಕ್ಕೆ ನೋಂದಾಯಿತರಾಗಿದ್ದು, ಈ ವರ್ಷ 8,14,384 ಕಾರ್ಮಿಕರು ಯೋಜನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಇವರಿಗೆ 130 ಕೋಟಿ ರೂ.ಗಳಿಗೂ ಅ ಧಿಕ ಕೂಲಿ ಹಣ ಪಾವತಿಯಾಗಿಲ್ಲ.
ನಿತ್ಯ ಅಲೆದಾಟ
ಕೋವಿಡ್-19 ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಮರಳಿದ್ದ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿತ್ತು. ಆದರೆ ಈ ಬಾರಿ ಬಾಕಿ ನರೇಗಾ ಕೂಲಿಗಾಗಿ ಗ್ರಾ.ಪಂ., ಬ್ಯಾಂಕ್‌ಗೆ ಅಲೆದಾಡುತ್ತಿದ್ದಾರೆ. ಪಂಚಾಯತ್ ಅ ಧಿಕಾರಿಗಳನ್ನು ಕೇಳಿದರೆ, “ಸರಕಾರದಿಂದ ದುಡ್ಡು ಬಂದಿಲ್ಲ’ ಎನ್ನುವ ಉತ್ತರ ನೀಡುತ್ತಿದ್ದಾರೆ.
ಕೈ ಚೆಲ್ಲಿದ ಅಧಿ ಕಾರಿಗಳು
ಹಣ ಸ್ಥಗಿತಗೊಂಡಿದ್ದರಿಂದ ಅ ಧಿಕಾರಿಗಳೂ ಕೈ ಚೆಲ್ಲಿದ್ದಾರೆ. ಗುರಿ ಬೆನ್ನು ಹತ್ತಿ ಕೆಲಸ ಮಾಡುತ್ತಿದ್ದ ಅವರು ಉದ್ಯೋಗ ಖಾತ್ರಿ ಕಾಮಗಾರಿ ಕೈಗೊಳ್ಳಲು ಪ್ರೇರೇಪಿಸುವುದನ್ನು ಕೈ ಬಿಟ್ಟಿದ್ದಾರೆ. ಬಾಕಿ ಹಣ ಬಿಡುಗಡೆಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಸಾಮಗ್ರಿ ವೆಚ್ಚ 348 ಕೋ.ರೂ ಬಾಕಿ :
ಉದ್ಯೋಗ ಖಾತ್ರಿ ಯೋಜನೆಯಲ್ಲಿ 130,38,07,291 ರೂ. ಕೂಲಿ ಹಣ ಬಾಕಿ ಉಳಿದಿದ್ದರೆ, ಸಾಮಗ್ರಿ ವೆಚ್ಚದ ಬಾಕಿ 348 ಕೋಟಿ ರೂ.ಗಳಿಗೆ ಏರಿದೆ. ಹೀಗಾಗಿ ಈ ಬಾರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಾಕಿ ಮೊತ್ತ 478.38 ಕೋಟಿ ರೂ.ಗಳಿಗೆ ಏರಿದೆ.
ಎರಡು ತಿಂಗಳ ಉದ್ಯೋಗ ಖಾತ್ರಿ ಯೋಜನೆ ಹಣ ಬಂದಿಲ್ಲ. ಏಕೆ ಎನ್ನುವುದು ನಮಗೂ ತಿಳಿದಿಲ್ಲ. ಈ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಜತೆ ಮಾತನಾಡಿದ್ದೇನೆ. ಶೀಘ್ರ ಹಣ ಬಿಡುಗಡೆ ಬಗ್ಗೆ ಭರವಸೆ ನೀಡಿದ್ದಾರೆ. ಮೊದಲ ಹಂತವಾಗಿ ಎಸ್‌ಸಿ-ಎಸ್‌ಟಿ ಕೂಲಿಕಾರರಿಗೆ ಹಣ ಜಮೆಯಾಗಲಿದ್ದು, ಬಳಿಕ ಉಳಿದ ಕೂಲಿ ಕಾರ್ಮಿಕರಿಗೆ ಪಾವತಿಯಾಗಲಿದೆ. –ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ
-ಮಲ್ಲಿಕಾರ್ಜುನ ಚಿಲ್ಕರಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola: ಆಟವಾಡುವ ವೇಳೆ ಮೈ ಮೇಲೆ ಗೇಟ್ ಬಿದ್ದು 6 ವರ್ಷದ ಬಾಲಕ ಮೃತ್ಯು
Highcourt: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಬಿಐಗಿಲ್ಲ… ಎಸ್‌ಐಟಿ ರಚಿಸಿದ ಹೈಕೋರ್ಟ್
Notice: ಅಕ್ರಮ ಮದ್ಯ ಮಾರಾಟ… ರಾಜ್ಯ ಸರಕಾರಕ್ಕೆ ನೋಟಿಸ್
MUDA Case: ಲೋಕಾಯುಕ್ತಕ್ಕೆ ಇಡಿ ಬರೆದಿರುವ ಪತ್ರ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ದತ್ತು ಪಡೆಯಲು ಅವಕಾಶ: ಸಚಿವ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.