ನರೇಗಾ ಕೂಲಿಕಾರ್ಮಿಕರಿಗೆ ಪ್ರಧಾನಿ “ದರ್ಶನ ಭಾಗ್ಯ’
Team Udayavani, Oct 9, 2017, 11:18 AM IST
ಬೆಂಗಳೂರು: ರಾಜ್ಯದ 92 ಹಳ್ಳಿ ಮಂದಿಗೆ ಪ್ರಧಾನಿ ನರೇಂದ್ರ ಮೋದಿ “ದರ್ಶನಭಾಗ್ಯ’ ಸಿಕ್ಕಿದೆ. ದೇಶದ “ಯಜಮಾನ’ನ್ನು
ಕಾಣುವ ತವಕದಲ್ಲಿರುವ ಈ ಹಳ್ಳಿ ಮಂದಿಯ ತಂಡ ಸೋಮವಾರ (ಅ.9) ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದೆ.
ನಾನಾಜಿ ದೇಶಮುಖ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅ.10 ಮತ್ತು 11ರಂದು ದೆಹಲಿಯಲ್ಲಿ
“ಜೀವನೋಪಾಯ ಅಭಿವೃದ್ಧಿ ಮತ್ತು ವೈವಿಧಿಕರಣ’ ಕುರಿತ ರಾಷ್ಟ್ರ ಮಟ್ಟದ ಸಮಾಲೋಚನೆ ಮತ್ತು ಪ್ರದರ್ಶನ
ನಡೆಯಲಿದೆ. ಇದರಲ್ಲಿ ಅ.11ರಂದು ಪ್ರಧಾನಿ ಮೋದಿಯವರು ದೇಶದ ವಿವಿಧ ರಾಜ್ಯಗಳ ಆಯ್ದ ಪಂಚಾಯಿತಿಗಳ ಅಧ್ಯಕ್ಷರು, ಉದ್ಯೋಗ ಖಾತರಿ, ರಾಷ್ಟ್ರೀಯ ಜೀವನೋಪಾಯ ಮಿಷನ್, ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಸೇರಿ ವಿವಿಧ ಯೋಜನೆಗಳ 10 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅವರ ಕಾರ್ಯಕ್ಷಮತೆ ಹಾಗೂ ಸಾಧನೆಯನ್ನು ಮಾನದಂಡವಾಗಿಟ್ಟು ಕೊಂಡು ಗ್ರಾಮೀಣಾಭಿವೃದ್ಧಿ ಇಲಾಖೆಯು ಆಯ್ಕೆ ಮಾಡಿರುವ ಆಯ್ದ ಗ್ರಾಮ ಪಂಚಾಯಿಗಳ ಅಧ್ಯಕ್ಷರು ಮತ್ತು ಉದ್ಯೋಗ ಖಾತರಿ ಯೋಜನೆ ಕೂಲಿಕಾರರು ಸೇರಿ 42 ಮಂದಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯ 42 ಮತ್ತು ಪ್ರಧಾನಮಂತ್ರಿ ಗ್ರಾಮೀಣ ಆವಾಸ್
ಯೋಜನೆಯ 8 ಮಂದಿ ಫಲಾನುಭವಿಗಳು ಸೇರಿ ಒಟ್ಟು 92 ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.
ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಮಂಜುನಾಥ್ ಅವರನ್ನು ಈ ಎರಡು ದಿನಗಳ ದಿಲ್ಲಿ ಪ್ರವಾಸದ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಪ್ರವಾಸ ಖರ್ಚು ವೆಚ್ಚಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಭರಿಸಲಿದೆ. ಸೋಮವಾರ (ಅ.9) ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ತೆರಳುವ ಈ ತಂಡ ಅ.12ಕ್ಕೆ ವಾಪಸ್ ಆಗಲಿದೆ. ಇದೇ ವೇಳೆ ನಡೆಯಲಿರುವ ಪ್ರದರ್ಶನದಲ್ಲಿ ಪಂಚಾಯಿತಿಗಳ ಆಡಳಿತ ವೈಖರಿ, ಉದ್ಯೋಗ ಖಾತರಿ, ರಾಷ್ಟ್ರೀಯ ಜೀವನೋಪಾಯ, ಗ್ರಾಮೀಣ ಆವಾಸ್ ಯೋಜನೆಗಳ ಅನುಷ್ಠಾನದಲ್ಲಿ ದೇಶದ ವಿವಿಧ ರಾಜ್ಯಗಳು ಅಳವಡಿಸಿಕೊಂಡಿರುವ ಅತ್ಯುತ್ತಮ ಮಾದರಿಗಳ ಯಶೋಗಾಥೆ ಇರುತ್ತದೆ. ಇದರಲ್ಲಿ ಗ್ರಾಮೀಣ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಂಡಿರುವ ಫಲಾನುಭವಿಗಳ ತಮ್ಮ ಮನೆಯ ಛಾಯಚಿತ್ರ ಪ್ರದರ್ಶಿಸಲಿಕ್ಕೂ ಅವಕಾಶವಿದೆ.
ಕಾರ್ಯಕ್ಷಮತೆ ಮತ್ತು ಸಾಧನೆ ಆಧರಿಸಿ ಆಯ್ಕೆಗೊಂಡಿರುವ 92 ಮಂದಿ ಗ್ರಾಮೀಣ ಪ್ರತಿನಿಧಿಗಳ ತಂಡ ದೆಹಲಿ ಪ್ರವಾಸ
ಕೈಗೊಳ್ಳುತ್ತಿದೆ. ಅಲ್ಲಿ ಕಲಿತ ಪಾಠ ಮತ್ತು ಪಡೆದ ಅನುಭವಗಳನ್ನು ಇಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗಬಹುದು.
●ಮಂಜುನಾಥ್, ನೋಡಲ್ ಅಧಿಕಾರಿ
ಉದ್ಯೋಗ ಖಾತರಿ ಯೋಜನೆಯ ಒಬ್ಬ ಫಲಾನುಭವಿಯಾಗಿ ಇಡೀ ರಾಜ್ಯದ ಕೂಲಿಕಾರರು, ರೈತರು ಹಾಗೂ ಶ್ರಮಿಕ
ವರ್ಗದ ಪ್ರತಿನಿಧಿಯಾಗಿ ಅವರೆಲ್ಲರ ಆಸೆಗಳನ್ನು ಹೊತ್ತುಕೊಂಡು ಪ್ರಧಾನಿ ಕಾಣಲು ದೆಹಲಿಗೆ ಹೋಗುತ್ತಿದ್ದೇನೆ.
●ವಿ.ಟಿ. ಪಾಟೀಲ, ಬಾಗಲಕೋಟೆ ಜಿಲ್ಲೆ ಕಜ್ಜಿಡೋಣಿಯ ಉದ್ಯೋಗ ಖಾತರಿ ಕಾರ್ಮಿಕ
ಪ್ರಧಾನಿ ಕಾಣಲು ದೆಹಲಿಗೆ ಹೋಗುತ್ತಿರುವುದು ಖುಷಿ ತಂದಿದೆ. ಅವರ ಮಾತು ಕೇಳಿ, ಉಳಿದ ರಾಜ್ಯಗಳ ಅಭಿವೃದ್ಧಿ
ಮಾದರಿಗಳನ್ನು ವೀಕ್ಷಿಸಿ ಅವುಗಳ ಆಧಾರದಲ್ಲಿ ಪಂಚಾಯಿತಿಗಳ ಅಭಿವೃದ್ಧಿ ಮಾಡಬಹುದು.
●ಅನ್ನಪೂರ್ಣ, ರಾಯಚೂರು ಜಿಲ್ಲೆ ಗೋರ್ಕಲ್ ಗ್ರಾಪಂ ಅಧ್ಯಕ್ಷೆ
ರಪೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.