ಹಿರಿಯರಿಗೂ ಹುಮ್ಮಸ್ಸು ನೀಡಿದ ನರೇಗಾ!
Team Udayavani, May 17, 2022, 1:59 PM IST
ಬೆಂಗಳೂರು: ಕೊರೊನಾ ಬಳಿಕ ನರೇಗಾ ದ ಮೂಲಕ ಉದ್ಯೋಗ ಪಡೆಯುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಇದೀಗ ವಿಶೇಷವಾಗಿ 60ವರ್ಷಮೇಲ್ಪಟ್ಟ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಪಡೆಯುವ ಮೂಲಕ ಮುಪ್ಪಿನಲ್ಲಿಯೂ “ಕಾಯಕ’ದಲ್ಲಿ ತೊಡಗಿದ್ದಾರೆ.
ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಅಳವಡಿಸಿಕೊಂಡಿದೆ. ಜತೆಗೆ ಗ್ರಾಮೀಣ ಸಮಾಜದಲ್ಲಿ ವಿವಿಧ ದುರ್ಬಲ ಗುಂಪುಗಳಿಗೆ ಸಾಮಾಜಿಕಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ವಿಶೇಷ ರಿಯಾಯಿತಿ ನೀಡುತ್ತಿದೆ. ಕೊರೊನಾ ಬಳಿಕ ಅಂಗವಿಕಲರು, ಹಿರಿಯ ನಾಗರಿಕರು ನರೇಗಾದಡಿಯಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಇದುವರೆಗೆ 3.85 ಲಕ್ಷ ಮಂದಿ 60 ವರ್ಷದಿಂದ 80ವರ್ಷ ಮೇಲ್ಪಟ್ಟ ವರು ನೋಂದಾಯಿಸಿ ಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 83 ಸಾವಿರ ಹಿರಿಯ ನಾಗರಿಕರು ಉದ್ಯೋಗ ಪಡೆದು ಕೊಂಡಿದ್ದಾರೆ. ವರ್ಷದಿಂದವರ್ಷಕ್ಕೆ ಹಿರಿಯ ನಾಗರಿಕರಲ್ಲಿ ಉದ್ಯೋಗ ಪಡೆಯುವವರ ಸಂಖ್ಯೆ ಕನಿಷ್ಠ ಶೇ.10ರಿಂದ ಶೇ.30 ಏರಿಕೆಯಾಗುತ್ತಿದೆ.ವಿಶೇಷವೆಂದರೆ 80ವರ್ಷ ಮೇಲ್ಪಟ್ಟವರಲ್ಲಿ 2019-22 ರವರೆಗೆ ಸುಮಾರು20,000 ಮಂದಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ.
ವಿಶೇಷ ವ್ಯವಸ್ಥೆ: ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಿಗೆ ಉದ್ಯೋಗ ಮಾಡುವ ಹುಮ್ಮಸ್ಸು ಇದ್ದರೂ, ಕೆಲಸ ನೀಡುವವರು ಕಡಿಮೆ. ಈ ನಿಟ್ಟಿನಲ್ಲಿ 2014ರಲ್ಲಿ ಕೂಲಿ ಕೆಲಸದಲ್ಲಿ ಶೇ.25ರಷ್ಟು ರಿಯಾಯಿತಿಯನ್ನು ಇದೀಗ ಶೇ.50 ಏರಿಕೆ ಮಾಡಲಾಗಿದೆ. ಇತರೆ ಕಡೆಯಲ್ಲಿ ಎಲ್ಲರಂತೆ ಕೂಲಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯ ಹಾಗೂ ಜನರು ಕೂಲಿ ಕೆಲಸ ನೀಡದೆ ಇರುವುದರಿಂದಇದೀಗ ನರೇಗಾದಡಿಯಲ್ಲಿ ಉದ್ಯೋಗ ಬಯಸಿ ಬರುವ ಹಿರಿಯ ನಾಗರಿಕರ ಸಂಖ್ಯೆ ಅಧಿಕವಾಗಿದೆ.
ಬೆಳಗಾವಿ ಮೊದಲು :
ಬೆಳಗಾವಿ ಜಿಲ್ಲೆಯಲ್ಲಿ 9200 ಮಂದಿ ಹಿರಿಯ ನಾಗರಿಕರು ಉದ್ಯೋಗ ಪಡೆಯುವ ಮೂಲಕ ಅತ್ಯಧಿಕ ಸಂಖ್ಯೆಯಲ್ಲಿ ಹಿರಿಯ ನಾಗರಿಕರಿಗೆ ಉದ್ಯೋಗ ನೀಡಿದ ಕೀರ್ತಿಗೆ ಪಾತ್ರವಾಗಿದೆ. ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದಲ್ಲಿ ನರೇಗಾದಡಿಯಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಿದೆ. ಕೊಪ್ಪಳ, ಕಲ ಬುರಗಿ, ಬಳ್ಳಾರಿ, ರಾಯ ಚೂರು ಜಿಲ್ಲೆಗಳು ಅಗ್ರ 5 ಸ್ಥಾನ ಪಡೆದು ಕೊಂಡಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ 34 ಮಂದಿ ಮಾತ್ರ ಉದ್ಯೋಗ ಪಡೆದುಕೊಂಡಿ ದ್ದು, ದಾವಣಗೆರೆ, ಕೊಡಗು, ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಹಿರಿಯ ನಾಗರಿಕರು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ.
-ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.