ಶಾಲೆಗಳ ಪ್ರಾರಂಭ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ
Team Udayavani, May 15, 2020, 10:11 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಕೋವಿಡ್ ಕಾಟದಿಂದಾಗಿ ಹೊಸ ಶೈಕ್ಷಣಿಕ ವರ್ಷ ರಾಜ್ಯದಲ್ಲಿ ಯಾವಾಗ ಪ್ರಾರಂಭವಾಗುತ್ತದೆ ಎಂಬ ಗೊಂದಲ ಇನ್ನೂ ಮುಂದುವರೆದಿದೆ.
ಈ ನಡುವೆ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಮಾರ್ಗಸೂಚಿಯೊಂದನ್ನು ಇಂದು ಬಿಡುಗಡೆ ಮಾಡಿದೆ.
ಮಾರ್ಗಸೂಚಿಯಲ್ಲಿನ ಪ್ರಮುಖ ಸೂಚನೆಗಳು ಹೀಗಿವೆ:
– ಶಾಲಾ ತರಗತಿ ಕೊಠಡಿಗಳಲ್ಲಿ ಸಾಮಾಜಿಲ ಅಂತರ ಕಾಯ್ದುಕೊಳ್ಳಲು ಒಂದು ಡೆಸ್ಕ್ ನಲ್ಲಿ ಮೂವರ ವಿದ್ಯಾರ್ಥಿಗಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ.
– ಈ ಸಂದರ್ಭದಲ್ಲಿ ಕೊಠಡಿಗಳ ಕೊರತೆ ಕಂಡುಬಂದರೆ ಶಾಲಾ ಗ್ರಂಥಾಲಯ ಕೊಠಡಿ, ಕ್ರೀಡಾ ಕೊಠಡಿ ಮತ್ತು ಕಂಪ್ಯೂಟರ್ ಕೊಠಡಿಗಳನ್ನು ಬಳಸಿಕೊಳ್ಳಬಹುದು.
– ಇನ್ನು ಜನವಸತಿ ಪ್ರದೇಶಗಳಲ್ಲಿ ಲಭ್ಯವಿರುವ ಸಮುದಾಯ ಭವನಗಳು, ಸರಕಾರಿ ಕಟ್ಟಡಗಳು ಹಾಗೂ ಮಧ್ಯಾಹ್ನದ ಬಳಕ ಲಭ್ಯವಿರುವ ಅಂಗನವಾಡಿ ಕಟ್ಟಡಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಶಿಪ್ಟ್ (ಪಾಳಿ) ಪದ್ಧತಿಯಲ್ಲಿ ತರಗತಿಗಳನ್ನು ನಡೆಸುವುದು:
ರಾಜ್ಯದಲ್ಲಿ 1 ರಿಂದ 5 ನೇ ತರಗತಿವರೆಗಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಇವುಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಪಾಳಿ ವ್ಯವಸ್ಥೆಯಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.
1 ರಿಂದ 7ನೇ ತರಗತಿವರಗಿನ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ನಡೆಸಲು ಲಭ್ಯ ಎಲ್ಲಾ ವ್ಯವಸ್ಥೆಗಳು ಸಾಲದಾದಲ್ಲಿ ಪಾಳಿ ಪದ್ದತಿಯಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.
– 1 ಮತ್ತು 2ನೇ ತರಗತಿ ನಲಿ ಕಲಿ ಮಕ್ಕಳನ್ನು ಒಟ್ಟಿಗೆ ಸೇರ್ಪಡೆ ಮಾಡಿ ಬೋಧನೆಗೆ ಅವಕಾಶ.
– 1ರಿಂದ 7ನೇ ತರಗತಿಯವರೆಗೆ ಶಿಕ್ಷಕರ ಕೊರತೆ ಇದ್ದಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ.
– ಪ್ರಾಥಮಿಕ ಶಾಲೆಗಳಲ್ಲಿಯೂ ಪದವಿಗಳನ್ನು ಪಡೆದಿರುವ ಶಿಕ್ಷಕರು ಲಭ್ಯವಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪರಸ್ಪರ ಸಮಾಲೋಚನೆ ನಡೆಸಿ ಪ್ರೌಢ ಶಾಲಾ ಶಿಕ್ಷಕರು 6 ಮತ್ತು 7 ನೇ ತರಗತಿಗಳಿಗೂ ಪ್ರಾಥಮಿಕ ಶಾಲೆಗಳಲ್ಲಿ ಪದವಿ ಹೊಂದಿರುವ ಶಿಕ್ಷಕರು 8 ಮತ್ತು 9ನೇ ತರಗತಿಗಳಿಗೂ ಬೋಧಿಸಲು ಅವಕಾಶ.
– ಸದ್ಯಕ್ಕೆ ಪಿಯು ತರಗತಿಗಳು 10 ಗಂಟೆಯಿಂದ 3.30ರವರೆಗೆ ನಡೆಯುತ್ತಿವೆ ಆದರೆ ಈ ತರಗತಿಗಳನ್ನು ಬೆಳಿಗ್ಗೆ 8.30 ರಿಂದ 12.30ರವರೆಗೆ ನಡೆಸಿದಲ್ಲಿ ಪ್ರೌಢಶಾಲಾ ಕೊಠಡಿಗಳನ್ನು ಬಳಸಿಕೊಂಡು ಪಿಯು ತರಗತಿಗಳನ್ನು ಸೂಕ್ತ ಸಾಮಾಜಿಕ ಅಂತರದೊಂದಿಗೆ ನಡೆಸಲು ಸೂಚನೆ.
– ರಾಜ್ಯದ ತಾಲೂಕು/ಹೋಬಳಿ ಕೇಂದ್ರಗಳಲ್ಲಿ ಕೆಲವು ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿದ್ದು, ಅವುಗಳನ್ನು ಅಗತ್ಯ ದುರಸ್ತಿ ಮಾಡಿಸಿ ಪ್ರೌಢಶಾಲೆಯ ಕೆಲವು ತರಗತಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸೂಚನೆ.
ಪಾಳಿ ಪದ್ಧತಿಯಲ್ಲಿ ತರಗತಿ ಸಮಯಗಳ ವಿಂಗಡನೆ:
ಮೊದಲನೇ ಪಾಳಿ ಸಮಯ ಬೆಳಿಗ್ಗೆ 7.50ರಿಂದ ಪ್ರಾರಂಭಗೊಂಡು ಮಧ್ಯಾಹ್ನ 12.20ರವರೆಗೆ ನಡೆಸುವುದು ಹಾಗೂ ಎರಡನೇ ಪಾಳಿಯನ್ನು ಮಧ್ಯಾಹ್ನ 12.10ರಿಂದ ಸಂಜೆ 5.00 ಗಂಟೆಯವರೆಗೆ ನಡೆಸಲು ಸಮಾಲೋಚನೆ ಮಾಡುವಂತೆ ಸೂಚನೆ.
– ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಸಾರಿಗೆ ವ್ಯವಸ್ಥೆಯನ್ನು ಒದಗಿಸುವಾಗ ವಿದ್ಯಾರ್ಥಿಗಳನ್ನು ವಾಹನಗಳಲ್ಲಿ ಕರೆತರುವಾಗ ಸೂಕ್ತ ಸಾಮಾಜಿಕ ಅಂತರ ನಿಯಮಗಳನ್ನು ಪಾಲನೆ ಮಾಡಲು ನಿರ್ದೇಶನ ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.