ಕೋವಿಡ್ ಸೋಂಕು ತಡೆಗೆ ಬೆಂಗಳೂರಿನಲ್ಲಿ ಹೊಸ ನಿಯಮಗಳು: ನೆಗೆಟಿವ್ ವರದಿ ಕಡ್ಡಾಯ, ಕೈಗೆ ಸೀಲ್
Team Udayavani, Mar 25, 2021, 1:16 PM IST
ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ದೃಢಪಟ್ಟ ಎಲ್ಲರಿಗೂ ಕೋವಿಡ್ ದೃಢಪಟ್ಟಿದೆ ಎಂಬ ಸೀಲ್ ಹಾಕಲಾಗುವುದು ಎಂದು ಸಚಿವ ಡಾ. ಸುಧಾಕರ್ ಹೇಳಿದರು.
ಕೋವಿಡ್-19 ಸೋಂಕು ತಡೆಗೆ ಸಚಿವ ಡಾ. ಸುಧಾಕರ್ ಅವರಿಂದ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಹೊರ ರಾಜ್ಯದಿಂದ ಬರುವ ಎಲ್ಲರಿಗೂ ಏ.1 ರಿಂದ ಆರ್ ಟಿಪಿಸಿ ಆರ್ ವರದಿ ನೆಗೆಟಿವ್ ಕಡ್ಡಾಯ ಜಾರಿ ಮಾಡಲಾಗುವುದು ಎಂದರು.
ಇದನ್ನೂ ಓದಿ:“ತಂದೆತಾಯಿಗೆ ರಕ್ಷಣೆ ನೀಡಿದರೆ SIT ಮುಂದೆ ಬರುತ್ತೇನೆ!” ಸಿಡಿ ಲೇಡಿಯ ಮತ್ತೊಂದು ವಿಡಿಯೋ
ನಗರದಲ್ಲಿ ನಾಲ್ಕು ತಿಂಗಳ ನಂತರ ಮತ್ತೆ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ದೃಢಪಡುತ್ತಿವೆ. ಇದು ನಗರದಲ್ಲಿ ಸೋಂಕು ಹೆಚ್ಚಳವಾಗುವ ಮುನ್ಸೂಚನೆಯಾಗಿದೆ. ಕೋವಿಡ್ ನಿಯಮ ಪಾಲನೆ ಮಾಡದಿದ್ದರೆ ದಂಡ ವಿಧಿಸಲಾಗುವುದು. ಕಾರ್ಯಕ್ರಮ ಆಯೋಜನೆ ಮಾಡುವವರನ್ನು ಸಹ ಹೊಣೆಗಾರರನ್ನಾಗಿ ಮಾಡಲಾಗುವುದು. ಆಯೋಜಕರಿಗೂ ದಂಡ ವಿಧಿಸಲಾಗುವುದು ಡಾ. ಸುಧಾಕರ್ ಹೇಳಿದರು.
ದಿನೇ ದಿನೆ ರಾಜ್ಯದಲ್ಲಿ ಕೋವಿಡ್ 19 ಸೋಂಕು ಹೆಚ್ಚಾಗುತ್ತಿದ್ದು, ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮುಚ್ಚಿದ ಸಭಾಂಗಣದಲ್ಲಿ 200 ಜನ, ತೆರೆದ ಸಭಾಂಗಣದಲ್ಲಿ 500 ಜನರಿಗೆ ಮಾತ್ರ ಭಾಗವಹಿಸಬೇಕೆನ್ನುವ ನಿಯಮ ಕಡ್ಡಾಯ ಪಾಲನೆ ಆಗಬೇಕು ಎಂದರು.
ಇದನ್ನೂ ಓದಿ: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 53,476 ಕೋವಿಡ್ ಪ್ರಕರಣ ಪತ್ತೆ, 5 ತಿಂಗಳಲ್ಲಿ ಗರಿಷ್ಠ
ಕೋವಿಡ್ ಎರಡನೇ ಅಲೆ ತಡೆಗೆ ಕಠಿಣ ಕ್ರಮ ಕೈಗೊಂಡಿದ್ದು, ಬೆಂಗಳೂರಿನಲ್ಲಿ ಕೋವಿಡ್ ಸೋಂಕು ತಡೆದರೆ ಉಳಿದ ಜಿಲ್ಲೆಗಳಿಗೆ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.