ಮುಂದಿನ 5 ವರ್ಷವೂ ನಾನೇ ದಸರಾ ನಡೆಸ್ತೇನೆ; ಸಿಎಂ ಪ್ರಾರ್ಥನೆ
Team Udayavani, Sep 21, 2017, 2:41 PM IST
ಮೈಸೂರು : 5 ವರ್ಷ ನಾನೇ ದಸರಾ ನಡೆಸಿದ್ದು,ಮುಂದಿನ 5 ವರ್ಷವೂ ದಸರಾವನ್ನು ನಾನೇ ನಡೆಸುತ್ತೇನೆ..ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವವಿಖ್ಯಾತ ನಾಡಹಬ್ಬ 407ನೇ ಮೈಸೂರು ದಸರಾದ ಮೊದಲ ದಿನದ ಸಮಾರಂಭದಲ್ಲಿ ವ್ಯಕ್ತಪಡಿಸಿದ ಮನದಾಳದ ಬಯಕೆ.
ಗುರುವಾರ ಬೆಳಗ್ಗೆ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ದಸರೆಗೆ ಚಾಲನೆ ನೀಡಿದ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಮುಖ್ಯಮಂತ್ರಿಗಳು ಸ್ವಾರಸ್ಯಕರ ಭಾಷಣ ಮಾಡಿದರು.
‘ದಸರಾ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ನಮ್ಮ ನಾಡಿನ ಸಂಸ್ಕೃತಿಗೆ ಹಿಡಿದ ಕನ್ನಡಿ .ಇದನ್ನು ಕಣ್ತುಂಬಿಕೊಳ್ಳಲು ವಿದೇಶದಿಂದಲೂ ಪ್ರವಾಸಿಗರು ಬಂದು ಹಾಡಿ ಹೊಗಳುತ್ತಿರುವುದು ಹೆಮ್ಮೆಯ ವಿಚಾರ’ ಎಂದರು.
‘ನಾನೂ ಮೈಸೂರಿನವನೇ, ಚಿಕ್ಕವನಿದ್ದಾಗ ತಂದೆ ಹೆಗಲ ಮೇಲೆ ಕೂರಿಸಿ ದಸರಾ ತೊರಿಸುತ್ತಿದ್ದರು. ತಾಯಿಯ ಮಹಿಮೆ ಎಂತಹದ್ದು ಅಂದರೆ ಈಗ ನಾನೇ ದಸರಾ ನಡೆಸುತ್ತಿದ್ದೇನೆ. ತಾಯಿಯ ಕೃಪೆ ಇದೆ , ಹೀಗಾಗಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ’ ಎಂದು ಸಂತಸ ವ್ಯಕ್ತ ಪಡಿಸಿದರು.
‘ನಾನು ಹೊರಗಿನಿಂದ ಒರಟಾಗಿದ್ದರೂ ಒಳಗೆ ಮೃದು, ಆದರೆ ಕವಿ ನಿಸಾರ್ ಅಹಮದ್ ಅವರು ಹೊರಗೂ ಮೃದು ಒಳಗೂ ಮೃದು’ ಎಂದರು.
ಇದೇ ವೇಳೆ ಮುಂದಿನ ದಸರಾ ವಿಚಾರ ಪ್ರಸ್ತಾವಿಸಿ ‘5 ವರ್ಷ ನಾನೇ ದಸರಾ ನಡೆಸಿದ್ದು, ಮುಂದಿನ 5 ವರ್ಷವೂ ನಡೆಸುತ್ತೇನೆ. ಹಿರಿಯ ನಾಯಕರಾದ ಜಿ.ಟಿ.ದೇವೇಗೌಡರೂ ನನಗೆ ಶುಭ ಕೋರಿದ್ದಾರೆ. ನೀನೂ ಕೂಡ ವಿಶ್ ಮಾಡು’ ಎಂದು ವೇದಿಕೆಯಲ್ಲಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹರನ್ನು ಕಿಚಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.