ಗುತ್ತಿಗೆ ನೌಕರರ ಸಂಭಾವನೆ ಶೇ.15 ಹೆಚ್ಚಳ; ಏ.1ರಿಂದ ಅನ್ವಯವಾಗುವಂತೆ ಹೆಚ್ಚಳ
Team Udayavani, Mar 5, 2023, 6:40 AM IST
ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರ ಸಂಭಾವನೆ ಶೇ.15ರಷ್ಟು ಹೆಚ್ಚಿಸಲಾಗಿದ್ದು, ಏ.1ರಿಂದ ಇದು ಅನ್ವಯವಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಈ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೆಲಸಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ 20 ಸಾವಿರ ರೂ. ಗಿಂತ ಕಡಿಮೆ ಸಂಭಾವನೆ ಇರುವ ನೌಕರರಿಗೆ ಶೇ.15 ರಷ್ಟು ಹೆಚ್ಚಳವಾಗಲಿದೆ.
5 ವರ್ಷಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ಕಾರ್ಯ ನಿರ್ವಹಿಸಿದ ಎನ್‌ಎಚ್‌ಎಂ ಮೆಡಿಕಲ್ ಅಧಿಕಾರಿಗಳಿಗೆ (ಎಂಬಿಬಿಎಸ್, ಆಯುಷ್, ಆಬಿರ್‌ಎಸ್‌ಕೆ, ದಂತವೈದ್ಯ ಸರ್ಜನ್‌ಗಳು) ಕೂಡ ಶೇ.15ರಷ್ಟು ಸಂಭಾವನೆ ಹೆಚ್ಚಿಸಲಾಗಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ ಎಂದು ಹೇಳಿದರು.
ಎನ್‌ಎಚ್‌ಎಂ ಗುತ್ತಿಗೆ ತಜ್ಞರಿಗೆ, 3-5 ವರ್ಷಗಳ ಸೇವೆಯಲ್ಲಿರುವವರಿಗೆ ಶೇ.5, 5-10 ವರ್ಷಗಳ ಸೇವೆಯಲ್ಲಿರುವವರಿಗೆ ಶೇ.10, 10 ವರ್ಷಕ್ಕೂ ಅಧಿಕ ಕಾಲ ಸೇವೆಯಲ್ಲಿರುವವರಿಗೆ ಶೇ.15ರಷ್ಟು ಸಂಭಾವನೆ ಹೆಚ್ಚಳ ಮಾಡಲಾಗಿದೆ.
ನೌಕರರಿಗೆ ಮಾತು ನೀಡಿದ್ದಂತೆಯೇ ಕ್ರಮ ವಹಿಸಲಾಗಿದೆ. ಈ ಮೂಲಕ ನಮ್ಮ ಸರ್ಕಾರ ನೌಕರರ ಕ್ಷೇಮದ ಬದುಕಿಗೆ ಸದಾ ಶ್ರಮಿಸುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
Naxal Activity: ರಾಜ್ಯದಲ್ಲಿ ನಕ್ಸಲ್ ಚಳವಳಿ ಅಂತ್ಯಗೊಂಡೀತೇ?
Debt Reduction: ನಬಾರ್ಡ್ ಸಾಲ ಕಡಿತ: ಪ್ರಧಾನಿ ಮೋದಿ, ಶಾ ಭೇಟಿಗೆ ರಾಜ್ಯ ಸರಕಾರದ ನಿರ್ಧಾರ
Congress: ಸಂಪುಟದಲ್ಲಿ ನಮಗೂ ಅವಕಾಶ ಕೊಡಿ: ಇಬ್ಬರು ಕಾಂಗ್ರೆಸ್ ಶಾಸಕರ ಪಟ್ಟು
MUST WATCH
ಹೊಸ ಸೇರ್ಪಡೆ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.