ಇನ್ನಾದರೂ ಎಚ್ಚೆತ್ತುಕೊಳ್ಳಿ:92 ದಿನದಲ್ಲಿ ರಾಜ್ಯದಲ್ಲಿ ಒಂಬತ್ತು ಸಾವಿರ ಜನರು ಸೋಂಕಿಗೆ ಬಲಿ!

Team Udayavani, Oct 13, 2020, 8:09 AM IST

ಇನ್ನಾದರೂ ಎಚ್ಚೆತ್ತುಕೊಳ್ಳಿ:92 ದಿನದಲ್ಲಿ ರಾಜ್ಯದಲ್ಲಿ ಒಂಬತ್ತು ಸಾವಿರ ಜನರು ಸೋಂಕಿಗೆ ಬಲಿ!

ಬೆಂಗಳೂರು: ಕೋವಿಡ್-19 ಸೋಂಕಿನಷ್ಟೇ ತೀವ್ರ ಗತಿಯಲ್ಲಿ ಸೋಂಕಿತರ ಸಾವಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿಯೇ (92 ದಿನ) ಒಂಬತ್ತು ಸಾವಿರ ಸಾವು ವರದಿಯಾಗುವ ಮೂಲಕ ನಿತ್ಯ ಸರಾಸರಿ 101 ಮಂದಿ ರಾಜ್ಯದಲ್ಲಿ ವೈರಸ್‌ಗೆ ಬಲಿಯಾದಂತಾಗಿದೆ. ಅಲ್ಲದೆ, ಸೋಂಕಿತರ ಸಾವು ಹತ್ತು ಪಟ್ಟು ಹೆಚ್ಚಳವಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಾವು ಹತ್ತು ಸಾವಿರ ಗಡಿದಾಟಿವೆ. ರಾಜ್ಯಕ್ಕೆ ಕೋವಿಡ್ ಸೋಂಕು ಕಾಲಿಟ್ಟು ಏಳು ತಿಂಗಳಾಗಿದ್ದು, ಈ ಪೈಕಿ ಮೊದಲ ನಾಲ್ಕು ತಿಂಗಳಲ್ಲಿ (ಮಾರ್ಚ್ 12ರಿಂದ ಜುಲೈ 12) 757 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ನಂತರದ ಮೂರು ತಿಂಗಳಲ್ಲಿ (ಜುಲೈ 13 ರಿಂದ ಅಕ್ಟೋಬರ್ 12) ಬರೋಬ್ಬರಿಗೆ 9,279 ಸೋಂಕಿತರ ಸಾವಾಗಿದೆ. ಅಂದರೆ, ಕಳೆದ ಮೂರು ತಿಂಗಳಲ್ಲಿ ನಿತ್ಯ ಸರಾರಸರಿ 101 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎನ್ನುತ್ತಿವೆ ಅಂಕಿ ಅಂಶಗಳು.

ಅಲ್ಲದೆ, ರಾಜ್ಯಕ್ಕೆ ಸೋಂಕು ಬಂದ ಮೊದಲಾರ್ಧಕ್ಕೆ ಹೋಲಿಸಿದರೆ, ದ್ವಿತೀಯಾರ್ಧದಲ್ಲಿ ಸೋಂಕಿತರ ಸಾವು ಹತ್ತು ಪಟ್ಟು ಹೆಚ್ಚಳವಾಗಿದೆ. ಮೊದಲ ನಾಲ್ಕು ತಿಂಗಳು ಅಂದರೆ, ಮಾರ್ಚ್ 3, ಏಪ್ರಿಲ್ 18, ಮೇ 30, ಜೂನ್ 195 ಸಾವಾಗಿವೆ. ಕಳೆದ ಮೂರು ತಿಂಗಳು ಜುಲೈ 2,068, ಆಗಸ್ಟ್ 3,296, ಸೆಪ್ಟೆಂಬರ್ 3162 ಸಾವಾಗಿವೆ. ಇನ್ನು ಅಕ್ಟೋಬರ್‌ನಲ್ಲಿ ತೀವ್ರತೆ ಮುಂದುವರೆದಿದ್ದು, 12 ದಿನಗಳಲ್ಲಿ 1,172 ಸಾವಾಗಿವೆ.

ಮೃತರಲ್ಲಿ ಶೇ. 76 ರಷ್ಟು ಮಂದಿ 50 ವರ್ಷ ಮೇಲ್ಪಟ್ಟವರು
ಈವರೆಗೂ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ.76 ರಷ್ಟು ಅಂದರೆ, 7,600 ಮಂದಿ 50 ವರ್ಷ ಮೇಲ್ಪಟ್ಟವರು. ಇದರಲ್ಲಿಯೇ 5,200 ಮಂದಿ (ಶೇ.50ರಷ್ಟು) 60 ವರ್ಷ ಮೇಲ್ಪಟ್ಟವರರಾಗಿದ್ದಾರೆ. ಉಳಿದಂತೆ 41-50 ವರ್ಷದವರು ಶೇ. 13.5, 31 ರಿಂದ 40 ವರ್ಷದ ವಯಸ್ಕರು ಶೇ.6, 21 ರಿಂದ 30 ವರ್ಷದವರು ಶೇ.2, 11 ರಿಂದ 20 ವರ್ಷದವರು ಶೇ. 0.4, 0- 10 ವರ್ಷದ ಮಕ್ಕಳ 0.2 ರಷ್ಟಿದೆ.

ವಯಸ್ಸಿನ ಆಧಾರದದಲ್ಲಿ ಮರಣ ದರ ನೋಡಿದರೆ 0 – 30 ವರ್ಷದವರಿನವರಲ್ಲಿ ಶೇ 0.1ರಷ್ಟಿದೆ. 31-40 ಶೇ 0.4ರಷ್ಟು, 41 ರಿಂದ 50 ಶೇ 1.1ರಷ್ಟು, 51 ರಿಂದ 60 ಶೇ. 2.4 ರಷ್ಟಿದೆ. ಇನ್ನು 60 ವರ್ಷ ಮೇಲ್ಪಟ್ಟವರಲ್ಲಿ ಶೇ.5.5 ಇದೆ. ಅಂದರೆ, ಸೋಂಕಿಗೊಳಗಾಗಿವ 100 ವಯೋವೃದ್ಧರಲ್ಲಿ ಐದು ಮಂದಿ ಸಾವಿಗೀಡಾಗುತ್ತಿದ್ದಾರೆ. ಈ ಮೂಲಕ ವಯೋವೃದ್ಧದಲ್ಲಿ ಕೋವಿಡ್ ಸಾವು ಹೆಚ್ಚಿದೆ ಎಂಬುದು ಸ್ಪಷ್ಟವಾಗುತ್ತದೆ.

ಐದು ಜಿಲ್ಲೆಗಳಲ್ಲಿ ಹೆಚ್ಚು ಮರಣ ದರ
ರಾಜ್ಯದ ಐದು ಜಿಲ್ಲೆಗಳಲ್ಲಿ ಮರಣ ದರ (100 ಸೋಂಕಿತರಿಗೆ ಇಂತಿಷ್ಟು ಮಂದಿ ಸಾವು) ಶೇ. 2ಕ್ಕಿಂತಲೂ ಹೆಚ್ಚಿದೆ. ಧಾರವಾಡ ಶೇ 2.8, ಬೀದರ್ ಶೇ 2.4, ದಕ್ಷಿಣ ಕನ್ನಡ ಶೇ.2.3, ಮೈಸೂರು ಶೇ 2.1, ಕೊಪ್ಪಳ ಶೇ.2.

ದೇಶದ ಮೊದಲ ಸಾವು ವರದಿಯಾಗಿ ಸೋಮವಾರಕ್ಕೆ ಏಳು ತಿಂಗಳು!
ದೇಶದಲ್ಲಿಯೇ ಕೋವಿಡ್ ಸೋಂಕಿಗೆ ಮೊದಲ ಸಾವಾಗಿದ್ದು ಕರ್ನಾಟಕದ ಕಲಬುರಗಿ ನಗರದಲ್ಲಿ. ಮಾರ್ಚ್ 10 ರಂದು ಮೃತಪಟ್ಟಿದ್ದ 76 ವರ್ಷದ ವೃದ್ಧನಿಗೆ ಸೋಂಕು ತಗುಲಿತ್ತು ಎಂದು ಘೋಷಣೆಯಾಗಿದ್ದು ಮಾರ್ಚ್ 12 ರಂದು.  ಸೋಮವಾರಕ್ಕೆ (ಅಕ್ಟೋಬರ್ 12) ಕೊರೊನಾ ಸೋಂಕಿತರ ಮೊದಲ ಸಾವು ವರದಿಯಾಗಿ ಏಳು ತಿಂಗಳಾಗಲಿದೆ. ಇದೇ ಸಂದರ್ಭದಲ್ಲಿ ಒಟ್ಟಾರೆ ಸಾವು ಕೂಡಾ ಹತ್ತು ಸಾವಿರಕ್ಕೆ ತಲುಪಿದೆ.

ಸೋಂಕಿತ ಸಾವು 1000 2000 3000 4000 5000 6000 7000 8000 9000
ದಿನಾಂಕ ಜುಲೈ 16 ಜುಲೈ 28 ಆಗಸ್ಟ್‌ 8 ಆಗಸ್ಟ್‌ 17 ಆಗಸ್ಟ್‌ 26 ಸಪ್ಟೆಂಬರ್ 3 ಸಪ್ಟೆಂಬರ್ 11 ಸಪ್ಟೆಂಬರ್ 20 ಅಕ್ಟೋಬರ್ 2

ಜಯಪ್ರಕಾಶ್ ಬಿರಾದಾರ್

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

SOMANNA-2

Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

ಯಾರು, ಯಾರನ್ನು, ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ

CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.