ಸಿರಿಧಾನ್ಯ ರಫ್ತಿಗೆ ಚಿನ್ನದ ಮೌಲ್ಯ: ನಿರ್ಮಲಾ ಸೀತಾರಾಮನ್
Team Udayavani, Sep 29, 2022, 10:30 PM IST
ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಸಿರಿಧಾನ್ಯ ರಫ್ತಿಗೆ ಚಿನ್ನದ ಮೌಲ್ಯವಿದೆ. ಸಂಸ್ಕರಣಾ ಘಟಕಗಳ ಮೌಲ್ಯವರ್ಧನೆಗೆ ಲೆಕ್ಕಾಧಿಕಾರಿಗಳು, ತೆರಿಗೆ ಸಂಗ್ರಹಕಾರರು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ರೈತರಿಗೆ ಸಕ್ರಿಯ ಚಿಂತನೆಗಳನ್ನು ತುಂಬುವ ಮೂಲಕ ಹೆಚ್ಚಿನ ಲಾಭ ತಂದುಕೊಡಲು ಶ್ರಮಿಸಬೇಕಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಕೆಂಪೇಗೌಡ ರಸ್ತೆಯಲ್ಲಿರುವ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವಸದಸ್ಯರ 105ನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕಡಿಮೆ ದರದಲ್ಲಿ ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿಕೊಡುವ ಮೂಲಕ ರೈತರಿಗೆ ಭರ್ಜರಿ ಲಾಭ ಗಳಿಸಲು ಮತ್ತು ಮಾರುಕಟ್ಟೆ ಕಲ್ಪಿಸಲು ಸಹಕಾರಿಯಾಗಿದೆ. ಇದೇ ರೀತಿ ಆವಿಷ್ಕಾರ ಎಂದಾಕ್ಷಣ ಕೇವಲ ಸಾಫ್ಟ್ವೇರ್, ಐಟಿ ಸಂಬಂಧಿಸಿದ ಕ್ಷೇತ್ರಗಳು, ವೈದ್ಯಕೀಯ ಉಪಕರಣಗಳು ಮಾತ್ರವಲ್ಲ. ಸಿರಿಧಾನ್ಯದಂತಹ ಉತ್ಪಾದನಾ ಘಟಕಗಳಿಗೂ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಆವಿಷ್ಕಾರಗಳು ಭವಿಷ್ಯದ ಹಲವು ಸಮಸ್ಯೆಗಳಿಗೆ ಮತ್ತು ಆರ್ಥಿಕ ಸ್ಥಿತಿ ಬದಲಾವಣೆಗೆ ಪರಿಹಾರವಾಗಿದೆ. ಆವಿಷ್ಕಾರ ಮತ್ತು ನವೋದ್ಯಮಗಳಲ್ಲಿ ಬೆಂಗಳೂರು ಈಗಾಗಲೇ ಮುಂಚೂಣಿಯಲ್ಲಿದೆ. ಇದಕ್ಕೆ ಬೇಕಾದ ಪ್ರೋತ್ಸಾಹ ಮತ್ತು ಸಹಕಾರವನ್ನು ರಾಜ್ಯ ಸರ್ಕಾರ ನೀಡುತ್ತಿರುವುದು ಶ್ಲಾಘನೀಯ. “ಬಿಯಾಂಡ್ ಬೆಂಗಳೂರು’ ಹೆಜ್ಜೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಫ್ಕೆಸಿಸಿಸಿಐ ಅಧ್ಯಕ್ಷ ಡಾ.ಐ.ಎಸ್.ಪ್ರಸಾದ್, ನೂತನ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ, ಮಾಜಿ ಅಧ್ಯಕ್ಷರಾದ ಡಾ. ಪೆರಿಕಾಲ್ ಸುಂದರ್ ಉಪಸ್ಥಿತರಿದ್ದರು.
ಅಟಲ್ ಥಿಂಕರಿಂಗ್ ಲ್ಯಾಬ್ :
ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಂಶೋಧನಾ ಮನೋಭಾವ ರೂಢಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು “ಅಟಲ್ ಥಿಂಕರಿಂಗ್ ಲ್ಯಾಬ್’ ಆರಂಭಿಸಿದೆ. ಮಕ್ಕಳು ಶಾಲೆಯಲ್ಲಿಯೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹಾಗೂ ತಮ್ಮಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಈ ಲ್ಯಾಬ್ ಸಹಕಾರಿಯಾಗಲಿದೆ. ಮಂಗಳೂರು ವಿಶ್ವವಿದ್ಯಾಲಯದ ಹೃದಯ ಭಾಗದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಸಂಸದರು ಅಟಲ್ ಥಿಂಕರಿಂಗ್ ಮತ್ತು ನಾವಿನ್ಯತಾ ಕೇಂದ್ರಗಳಿಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.