ಪ್ರಸಾದದ ಬಗ್ಗೆ ಕಾಳಜಿ ಇರಲಿ, ಅನುಮಾನವಲ
Team Udayavani, Dec 19, 2018, 9:15 AM IST
ಧಾರವಾಡ: ಪ್ರಸಾದ ಶಿವನ ತುತ್ತು, ದಾಸೋಹ ಪರಂಪರೆ ಕೊಂಡಿ. ಇಂತಹ ಸಾಮಾಜಿಕ ಸಾಮರಸ್ಯದ ವ್ಯವಸ್ಥೆಯನ್ನೇ ಚಾಮರಾಜನಗರ ಜಿಲ್ಲೆ ಸುಳ್ವಾಡಿಯಲ್ಲಿ ದುಷ್ಕರ್ಮಿಗಳು ತಮ್ಮ ಸೇಡಿನ ಗಾಳ ಮಾಡಿಕೊಂಡಿದ್ದಕ್ಕೆ ನಾಡಿನ ಮಠಾಧೀಶರು, ಶರಣರು, ದಾಸೋಹ ಪರಂಪರೆಯನ್ನು ಜೀವಂತವಾಗಿಟ್ಟುಕೊಂಡು ಬಂದ ಮಠ ಮಾನ್ಯಗಳು ವಿಷಪ್ರಾಶನ ಮಾಡಿದ ದುಷ್ಕರ್ಮಿಗಳಿಗೆ ಹಿಡಿಶಾಪ ಹಾಕುತ್ತಿವೆ. ತಮ್ಮ ಸೇಡಿಗೆ ಪ್ರಸಾದವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಕ್ಕೆ ನಾಡಿನ ಧರ್ಮಾಧಿಕಾರಿಗಳು ಮತ್ತು ಮಠಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು, ದಾಸೋಹ ಪರಂಪರೆಯ ಮೇಲೆ ಸರ್ಕಾರ ತನ್ನ ಹಿಡಿತ ಸಾಧಿಸುವ ಪ್ರಯತ್ನ ಮಾಡಬಾರದು. ಪ್ರಸಾದ ಪರಂಪರೆಯ ಬಗ್ಗೆ ನಂಬಿಕೆ ಇರಬೇಕೇ ಹೊರತು ಒಂದು ಘಟನೆಯ ಆಧಾರದಲ್ಲಿ ಎಲ್ಲವನ್ನೂ ಅನುಮಾನದಿಂದ ನೋಡಬಾರದೆಂದು ಮಠಾಧೀಶರು
ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಪ್ರಸಾದ ಸಿದ್ಧ ಮಾಡುವ ಅಡುಗೆ ಮನೆಗೆ ಸಿಸಿಟಿವಿ ಅಳವಡಿಕೆ, ಸರ್ಕಾರದ ಅನುಮತಿ ಪಡೆದು ಪ್ರಸಾದ ವಿನಿಯೋಗ ಮಾಡುವುದು ಸೇರಿದಂತೆ 20 ಅಂಶಗಳನ್ನು ಪಾಲಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿರುವುದಕ್ಕೆ ಮಠಾಧೀಶರು, ಶರಣರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ಪುನರ್
ಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಮದುವೆ, ಶಾಲಾ ಮಕ್ಕಳಿಗೆ ಏನು?: ಮದುವೆಯಂತಹ ಕಾರ್ಯಗಳಲ್ಲೂ ಇಂತಹ ಘಟನೆಗಳು ನಡೆದು ಜನ ಸತ್ತಿದ್ದಾರೆ, ಅಸ್ವಸ್ಥರಾಗಿದ್ದಾರೆ. ಅನೇಕ ಶಾಲೆಗಳಲ್ಲಿ ಮಕ್ಕಳು ಕೂಡ ಮಧ್ಯಾಹ್ನದ ಬಿಸಿಯೂಟ ಮಾಡಿ ತೀವ್ರ ಅಸ್ವಸ್ಥರಾಗಿದ್ದ ನೂರಾರು ಪ್ರಕರಣಗಳಿವೆ. ಹೀಗಾಗಿ, ಒಂದು ದೇವಸ್ಥಾನದಲ್ಲಿ ನಡೆದ ಘಟನೆಯನ್ನು ಸರ್ಕಾರ ದೊಡ್ಡದಾಗಿ ಬಿಂಬಿಸಿ ಭಕ್ತರಿಗೆ ತೊಂದರೆಯಾಗುವ
ಯಾವ್ಯಾವುದೋ ಕಾನೂನು ಜಾರಿಗೊಳಿಸುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ದಾಸೋಹ ಪರಂಪರೆಯಲ್ಲಿ ನಂಬಿಕೆ ಇಟ್ಟವರು.
ಸಿಸಿಟಿವಿ ಅಳವಡಿಕೆ, ಪ್ರತಿ ಬಾರಿಯೂ ಪ್ರಸಾದ ಸಜ್ಜಾದಾಗ ಅದನ್ನು ಪರಿಶೀಲನೆ ನಡೆಸುವುದು ಹೇಗೆ? ಪ್ರಸಾದ ಸಜ್ಜುಗೊಳಿಸುವ ಖಾಸಗಿ ವ್ಯಕ್ತಿಗಳಿಗೆ ಅನುಮತಿ ಪಡೆಯುವುದು ಹೇಗೆ? ಪ್ರಸಾದ ವಿತರಣೆಗೆ ಸಮಯಕ್ಕೆ ಸರಿಯಾಗಿ ಅವಕಾಶ ನೀಡದಿದ್ದರೆ ಹೇಗೆ? ಧಾರ್ಮಿಕ ಕಾರ್ಯಕ್ಕೆ ಇಂತಹ ಕಾನೂನು ಬೇಕೆ ಎಂಬೆಲ್ಲ ಪ್ರಶ್ನೆಗಳು ಇದೀಗ ಧಾರ್ಮಿಕ ವಲಯದಲ್ಲಿ ಗಿರಕಿ ಹೊಡೆಯುತ್ತಿವೆ.
ದಾಸೋಹಂ ಎನಿಸಯ್ಯ:12ನೇ ಶತಮಾನದ ಶರಣರಿಂದ ಆರಂಭಗೊಂಡ ದಾಸೋಹ ಪರಂಪರೆ ಈ ನಾಡಿನ ಎಲ್ಲಾ ಧರ್ಮಿಯರ ಮಠ-ಮಂದಿರಗಳಲ್ಲಿ ಕಾಯಂ ಆಗಿ ನಡೆದುಕೊಂಡು ಬರುತ್ತಿವೆ. ಉತ್ತರ ಕರ್ನಾಟಕದಲ್ಲಿನ ಪಂಚಪೀಠಗಳ ಮಠಗಳು, ಶರಣರ
ತತ್ವದಲ್ಲಿ ನಡೆಯುತ್ತಿರುವ ಸಾವಿರಕ್ಕೂ ಅಧಿಕ ವಿರಕ್ತ ಮಠಗಳಲ್ಲಿ ಪ್ರತಿದಿನ ದಾಸೋಹ ನಡೆಯುತ್ತದೆ. ಇನ್ನು ಕರಾವಳಿ ಪ್ರದೇಶದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಹೊರನಾಡು, ಕೊಲ್ಲೂರು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಅನ್ನದಾಸೋಹ ಇದ್ದೇ ಇರುತ್ತದೆ. ಸರ್ಕಾರ ಸದ್ಯಕ್ಕೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿನ ಪ್ರಸಾದ ವ್ಯವಸ್ಥೆ ಮೇಲೆ ನಿಗಾ ಇಡಲು 20 ಅಂಶಗಳನ್ನು ರೂಪಿಸಿದೆ. ಇತರ ಮಠಗಳಿಗೆ ಇದು ವಿಸ್ತರಣೆಯಾದರೆ ರಾಜ್ಯಾದ್ಯಂತ ಸರ್ಕಾರ ಮತ್ತು ಮಠಗಳ ಮಧ್ಯೆ ಮತ್ತೂಂದು ಸುತ್ತಿನ ಸಮರ
ನಡೆಯುವುದು ನಿಶ್ಚಿತ.
ಕಾನೂನುಗಳಿಂದ ಎಲ್ಲವನ್ನೂ ರಕ್ಷಣೆ ಮಾಡುವುದು ಅಸಾಧ್ಯ. ಮುಜರಾಯಿ ದೇವಸ್ಥಾನ ಗಳಿಗೆ ಮೂಲ ಸೌಕರ್ಯಗಳೇ ಇಲ್ಲ. ಇನ್ನು ಈ 20 ಅಂಶಗಳನ್ನು ಹೇಗೆ ಜಾರಿಗೊಳಿಸಲು ಸಾಧ್ಯ. ಎಲ್ಲರೂ ಕಟುಕರಿರುವುದಿಲ್ಲ.
● ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠ
ಎಲ್ಲವನ್ನೂ ಕಾನೂನಿಂದಲೇ ಸರಿ ಮಾಡಲಾಗದು. ಅರಣ್ಯ, ಊರಾಚೆ ಇರುವ ದೇವಸ್ಥಾನ ಗಳಲ್ಲಿ ಸಿಸಿಟಿವಿ ಹಾಕಿ ಕಾಯಲು
ಸಾಧ್ಯವೆ? ಜಾತ್ರಾ ಸಮಿತಿ, ಭಕ್ತರ ಸಾಮರಸ್ಯದಲ್ಲಿ ಪ್ರಸಾದ ವ್ಯವಸ್ಥೆ ಸಾಗುವುದು ಉತ್ತಮ.
●ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠ
ಸಾವಿರ ವರ್ಷದ ಪರಂಪರೆಯನ್ನು ಒಂದು ಘಟನೆಯಲ್ಲಿ ವಿಶ್ಲೇಷಣೆ ಮಾಡಬಾರದು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಕೊಟ್ಟರೆ ಇಂತಹ
ಘಟನೆಗಳಿಗೆ ಕಡಿವಾಣ ಬೀಳುತ್ತದೆ. ಅದನ್ನು ಬಿಟ್ಟು ಪ್ರಸಾದ ಪರೀಕ್ಷೆ ಮಾಡೋದು ಸರಿಯಲ್ಲ.
● ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ, ಮಹಾರಾಷ್ಟ್ರ
ದಾಸೋಹ ಮಾಡುವವರು ಸರ್ಕಾರದ ಅನುಮತಿಗೆ ಕಾಯಬೇಕು ಎನ್ನುವುದು ಸರಿಯಲ್ಲ. ಇದು ದಾಸೋಹ ಪರಂಪರೆಯ ದಿಕ್ಕನ್ನು ಬದಲಿಸುತ್ತದೆ. ಮದುವೆ, ಶಾಲೆಗಳಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ. ಎಲ್ಲದಕ್ಕೂ ಹೇಗೆ ನಿಬಂಧನೆ ಹಾಕಲು ಸಾಧ್ಯ?
●ಶ್ರೀ ಡಾ.ಚನ್ನ ಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು, ಶ್ರೀಶೈಲ ಪೀಠ
ಪ್ರಸಾದ ಸಜ್ಜಾದಾಗ ಮೊದಲು ಮಠಾಧೀಪತಿಗಳೇ ಊಟ ಮಾಡುವ ಪದ್ಧತಿ ಶರಣ ಪರಂಪರೆಯಲ್ಲಿದೆ. ಹೀಗಾಗಿ, ಸರ್ಕಾರ ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಪ್ರಸಾದ ಪರೀಕ್ಷೆ, ಅಧಿಕಾರಿಗಳ ಅನುಮತಿಗೆ ಕಾಯುವುದನ್ನು ಜಾರಿಗೆ ತರಲೇಬಾರದು.
●ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘಾಮಠ, ಧಾರವಾಡ.
ಪ್ರಸಾದ ಪರೀಕ್ಷೆ ಸರ್ಕಾರಕ್ಕೂ ತಲೆನೋವು, ದಾಸೋಹ ಪರಂಪರೆಗೂ ತಲೆನೋವು. ಇದನ್ನು ನಿಯಂತ್ರಿಸಲು ಸರ್ಕಾರಕ್ಕೆ ಪ್ರತ್ಯೇಕ ಇಲಾಖೆಯೇ ಬೇಕಾಗಬಹುದು. ಹೀಗಾಗಿ ಸುತ್ತೋಲೆ ಕೈ ಬಿಟ್ಟು, ಸುಳ್ವಾಡಿ ಘಟನೆಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು.
●ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಬಾಲೆಹೊಸೂರು.
●ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.