ವಿಧಾನಸೌಧದಲ್ಲಿ ದಲ್ಲಾಳಿಗಳಿಗೆ ಮಾತ್ರ ತಡೆ,ಮಾಧ್ಯಮಗಳಿಗಲ್ಲ ; ಸಿಎಂ
Team Udayavani, Jul 24, 2018, 2:38 PM IST
ಬೆಂಗಳೂರು: ವಿಧಾನಸೌಧದಲ್ಲಿ ದಲ್ಲಾಳಿಗಳ ಹಾವಳಿಯಿದ್ದು ಅವರನ್ನು ತಡೆಯುತ್ತೇವೆ, ಮಾಧ್ಯಮಗಳಿಗೆ ಯಾವುದೇ ತಡೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಕೆಲವರಿಂದ ವಿಧಾನಸೌಧದಲ್ಲಿ ಅನಾನುಕೂಲಗಳು ಆಗುತ್ತಿವೆ.ಸಾರ್ವಜನಿಕರು ಬೆಳಿಗ್ಗಿನಿಂದ ರಾತ್ರಿ ಯವರೆಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅಧಿಕಾರಿಗಳಿಗೂ ಕೆಲಸ ಮಾಡಲು ಅನಾನುಕೂಲ ಆಗುತ್ತಿದೆ. ದಲ್ಲಾಳಿಗಳು ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನರಿಗೆ ದಾರಿ ತಪ್ಪಿಸುವವರ ವಿರುದ್ಧ ಎಚ್ಚರಿಕೆ ವಹಿಸುತ್ತೇವೆ.ಕಾನೂನು ಬಾಹಿರ ಚಟುವಟಿಕೆಗಳಾಗದಂತೆ ತಡೆ ಹಾಕುತ್ತೇವೆ ಎಂದರು.
ಮಾಧ್ಯಮ ಮಿತ್ರರು ಪ್ರತ್ಯೇಕವಾಗಿ ಒಬ್ಬೊಬ್ಬರೇ ಮೈಕ್ ಹಿಡಿದು ಬರುತ್ತೀರಿ .ಬಳಿ ನಮಗೆ ಮಾಹಿತಿ ನೀಡಿಲ್ಲ ಎಂಬ ಟೀಕೆಗಳು ಬರುತ್ತಿವೆ. ಸಚಿವರಾಗಲಿ,ನನಗಾಲಿ ಕೆಲಸಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಮಾಧ್ಯಮ ಮಿತ್ರರಿಗೆ ಪ್ರತ್ಯೇಕ ರೂಮ್‌ನ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಈಗಿರುವ ಸ್ಟಾಂಡ್ ಬದಲು ಮಳೆ, ಬಿಸಿಲು, ಗಾಳಿಯಲ್ಲಿ ರಕ್ಷಣೆ ಕೊಡುವಂತ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.