ಮೂರು ವರ್ಷದಿಂದ ಕುಟುಂಬದ ಸಂಪರ್ಕವಿಲ್ಲ
Team Udayavani, Jan 23, 2020, 3:00 AM IST
ಮಂಗಳೂರು: “ನಮಗೆ ಅಣ್ಣ ಆದಿತ್ಯನ ಸಂಪರ್ಕವಿಲ್ಲದೆ 3 ವರ್ಷಗಳಾಗಿವೆ. ತಾಯಿ ಮೃತಪಟ್ಟಾಗ ಕರೆದರೂ ಬಂದಿರಲಿಲ್ಲ. ಆದ್ದರಿಂದ ನಾವು ಅವನನ್ನು ಬಿಟ್ಟೇ ಬಿಟ್ಟಿದ್ದೆವು’ ಎಂದು ಆದಿತ್ಯ ರಾವ್ ತಮ್ಮ ಅಕ್ಷತ್ ರಾವ್ ಹೇಳಿದ್ದಾರೆ. ಆರೋಪಿ ಆದಿತ್ಯ ಉಡುಪಿ ಮೂಲದವನಾದರೂ ಕುಟುಂಬಸ್ಥರು 6 ತಿಂಗಳಿನಿಂದ ಮಂಗಳೂರಿನ ಚಿಲಿಂಬಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿರುವ ಸಹೋದರ ಅಕ್ಷತ್ ಮತ್ತು ತಂದೆ ಅಲ್ಲಿದ್ದಾರೆ. ಆದಿತ್ಯ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಪೊಲೀಸರ ಮುಂದೆ ಶರಣಾಗುತ್ತಿದ್ದಂತೆ ಬಾಂಬ್ ಇರಿಸಿದ್ದು ಆತನೇ ಎಂಬುದು ಖಚಿತಗೊಂಡಿದ್ದು, ಆತನ ಕುಟುಂಬ ದವರೂ ಆತಂಕಗೊಂಡಿದ್ದಾರೆ.
ಸರಿದಾರಿಗೆ ತರುವ ಯತ್ನ ವಿಫಲ: ಮಾಧ್ಯಮ ದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಕ್ಷತ್ ರಾವ್, ಇದಕ್ಕೂ ಮೊದಲು ತಂದೆ ಮಣಿಪಾಲದಲ್ಲಿದ್ದರು. ಆಗಲೂ ಆದಿತ್ಯನೊಂದಿಗೆ ಹೆಚ್ಚಿನ ಸಂಪರ್ಕ ವಿರಲಿಲ್ಲ. 2018ರಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ ಘಟನೆಯ ನಂತರವಂತೂ ಆತನನ್ನು ತಂದೆ ತುಂಬಾ ದ್ವೇಷಿಸುತ್ತಿದ್ದರು. ಮನೆಗೆ ಬರುವುದೇ ಬೇಡ ಎಂದಿದ್ದರು. ಆತನ ಸಂಪರ್ಕವನ್ನೇ ಬಿಟ್ಟಿ ದ್ದೆವು. ಅಂದು ಜೈಲಿನಲ್ಲಿರುವಾಗ ಅವನನ್ನು ನೋಡುವುದಕ್ಕಾಗಲಿ, ಜಾಮೀನು ಕೊಡು ವುದಕ್ಕಾಗಲಿ ಹೋಗಿರಲಿಲ್ಲ ಎಂದರು.
ಯಾರೀತ ಆದಿತ್ಯರಾವ್?: ಉಡುಪಿ ಮೂಲದ ಆದಿತ್ಯರಾವ್ ವಾಸ್ತವದಲ್ಲಿ ಎಂಜಿನಿಯರ್, ಎಂಬಿಎ ಪದವೀಧರ. ಆದರೆ, ಇಷ್ಟೊಂದು ಓದಿ ದ್ದರೂ ಮಾಡುತ್ತಿದ್ದುದು ಮಾತ್ರ ಸೆಕ್ಯುರಿಟಿ ಗಾರ್ಡ್, ವೇಟರ್ ಕೆಲಸ. ವಿಚಿತ್ರ ವೆಂದರೆ ಇಂಥ ಕೆಲಸ ಪಡೆಯುವಾಗ ಆತ ತನ್ನ ಪೂರ್ಣ ವಿದ್ಯಾರ್ಹತೆ ಬಹಿರಂಗ ಮಾಡುತ್ತಿರಲಿಲ್ಲ. ಹತ್ತಾರು ಕಡೆ ಕೆಲಸ ಮಾಡಿ ಹಲವಾರು ಅಪರಾಧ ಕೃತ್ಯಗಳನ್ನು ಎಸಗಿರುವ ಆರೋಪ ಹೊತ್ತಿರುವ ಆದಿತ್ಯ ಒಂದು ಕಡೆ ಕೆಲಸಕ್ಕಾಗಿ ನೀಡಿದ್ದ ಬಯೋ ಡೇಟಾ ಉದಯವಾಣಿಗೆ ಲಭಿಸಿದ್ದು, ಅದರಲ್ಲಿ ಆತನ ವಿದ್ಯಾ ರ್ಹತೆಯನ್ನು ಪಿಯುಸಿ ಎಂದಷ್ಟೇ ನಮೂದಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.