ನಂದಿನಿ ರಾಜ್ಯದ ಹೆಮ್ಮೆ, ಯಾವುದೇ ಕಾರಣಕ್ಕೂ ಉತ್ಪನ್ನಗಳಿಗೆ ಸಮಸ್ಯೆ ಆಗದು: KMF ಅಧ್ಯಕ್ಷ
Team Udayavani, Apr 8, 2023, 7:40 PM IST
ಬೆಂಗಳೂರು: ನಂದಿನಿ ರಾಜ್ಯದ ಹೆಮ್ಮೆ. ಯಾವುದೇ ಕಾರಣಕ್ಕೂ ನಮ್ಮ ಉತ್ಪನ್ನಗಳ ಮಾರುಕಟ್ಟೆಗೆ ಸಮಸ್ಯೆ ಆಗುವುದಿಲ್ಲ, ಆಗಲು ಬಿಡುವುದೂ ಇಲ್ಲ ಎಂದು ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಂದಿನಿ ನಂಬರ್ ಒನ್ ಬ್ರ್ಯಾಂಡ್ ಆಗಿದೆ. ದೆಹಲಿ, ಗುಜರಾತ್, ರಾಜಸ್ಥಾನ ಸೇರಿ ದೇಶದ ಹಲವು ರಾಜ್ಯಗಳಲ್ಲಿ ನಂದಿನಿ ಉತ್ಪನ್ನ ಮಾರಾಟ ಆಗುತ್ತಿದೆ. ಅಮೂಲ್ ವಿಚಾರದಲ್ಲಿ ಅನಗತ್ಯ ಆತಂಕ ಸಲ್ಲ ಎಂದು ಹೇಳಿದ್ದಾರೆ.
ನಂದಿನಿ ಮಾರುಕಟ್ಟೆ ವಿಸ್ತರಣೆಗೆ ನಾವು ಹೊಸ ಹೊಸ ಯೋಜನೆ ರೂಪಿಸಿದ್ದೇವೆ. ಹೊಸ ಉತ್ಪನ್ನ ಪರಿಚಯಿಯಿಸಿದ್ದೇವೆ. ರಾಜ್ಯದ ಜನತೆಯ ಮನೆ- ಮನದಲ್ಲಿ ನಂದಿನಿ ನೆಲೆ ನಿಂತಿದೆ. ನಮ್ಮತನಕ್ಕೆ ನಂದಿನಿ ಸಾಕ್ಷಿಯಾಗಿದೆ. ನಾವು ನಂದಿನಿ ಉತ್ಪನ್ನ ಮತ್ತಷ್ಟು ಬೆಳೆಸಲು ಯೋಜನೆ ರೂಪಿಸಿದ್ದೇವೆ.
ಅಮುಲ್ ವಿಚಾರದಲ್ಲಿ ಯಾರೂ ಸಹ ರಾಜಕಾರಣ ಮಾಡಬಾರದು ಎಂದು ತಿಳಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡ ಮಾಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಅಮುಲ್ ಅಷ್ಟೇ ಅಲ್ಲ ಬೇರೆ ಬ್ರಾಂಡ್ ಬಂದರೂ ಸ್ಪರ್ಧೆ ನೀಡಿ ಹಿಮ್ಮೆಟ್ಟಸಲಿದ್ದೇವೆ ಎಂದು ಹೇಳಿದ್ದಾರೆ.
ಅಮೂಲ್ ಪ್ರವೇಶದಿಂದ ನಂದಿನಿ ಗೆ ಪೆಟ್ಟು ಬೀಳಲು ಸಾಧ್ಯವೇ ಇಲ್ಲ. ನಂದಿನಿ ಮತ್ತಷ್ಟು ಶಕ್ತಿಯುತ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಜನತೆ ಅನಗತ್ಯ ವಾಗಿ ಆತಂಕ ಪಡುವುದು ಬೇಡ. ಕೆಲವರು ರಾಜಕೀಯ ಕಾರಣಕ್ಕಾಗಿ ಈ ವಿಷಯ ಪ್ರಸ್ತಾಪಿಸಿ ಗೊಂದಲ ಮೂಡಿಸುತ್ತಿರುವುದು ಖಂಡನೀಯ. ನಾನು ರಾಜ್ಯದ ಜನತೆಯಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ ವದಂತಿ ನಂಬಬೇಡಿ. ನಮ್ಮ ಹೆಮ್ಮೆಯ ನಂದಿನಿ ಮತ್ತಷ್ಟು ಬಲಪಡಿಸಲು ಎಲ್ಲರೂ ಕೈ ಜೋಡಿಸೋಣ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: DJ ಗೆ ಪೊಲೀಸರ ತಡೆ; ಠಾಣೆ ಎದುರು ಪ್ರತಿಭಟನೆಗೆ ಕುಳಿತ ವಧು-ವರ!!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.