![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Jul 7, 2017, 12:42 PM IST
ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಡಾ.ಸುಧಾಕರ್ ರೆಡ್ಡಿ ಟ್ವೀಟ್ ಮಾಡಿದ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಂಧಾನ ನಡೆಸಿ ಯುವ ನಾಯಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಾ.ಸುಧಾಕರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸಕ್ಕಾಗಮಿಸಿದ ಸಚಿವ ರಾಮಲಿಂಗಾ ರೆಡ್ಡಿ ,ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡುರಾವ್ , ಸಂಸದ ಮುನಿಯಪ್ಪ ,ಮಧು ಸೇರಿದಂತೆ ಹಲವರು ಡಾ.ಸುಧಾಕರ್ ರೆಡ್ಡಿ ಅವರೊಂದಿಗೆ ಫಲಪ್ರದ ಸಮಾಲೋಚನೆ ನಡೆಸಿ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ.
ಚಾರಿತ್ರ್ಯ ವಧೆ ಬೇಸರ ತಂದಿತು!
ಸಂಧಾನ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್ ನನಗೆ ಜಿಲ್ಲಾ ನಾಯಕರೊಬ್ಬರು ಚಾರಿತ್ರ್ಯ ವಧೆಗೆ ಯತ್ನಿಸಿರುವುದು ತುಂಬಾ ಬೇಸರ ತಂದಿತು. ಹೀಗಾಗಿ ರಾಜೀನಾಮೆ ನಿರ್ಧಾರ ತಳೆದೆ. ನನ್ನ ತಂದೆ 82 ವರ್ಷದ ಹಿರಿಯವರಿದ್ದಾರೆ. 2 ಬಾರಿ ಜಿ.ಪಂ. ಸದಸ್ಯರಾಗಿದ್ದಾರೆ. ಶಾಸಕರ ತಂದೆ ಎಂದು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಿಲ್ಲ. 40 ವರ್ಷದ ರಾಜಕೀಯ ಅನುಭವದಲ್ಲಿ ಹುದ್ದೆ ನೀಡಲಾಗಿತ್ತು,ಅದನ್ನು ವಾಪಾಸ್ ಕೇಳಿದ್ದು ಬೇಸರ ತಂದಿತ್ತು ಎಂದರು.
ನಾನು ಅಧಿಕಾರಕ್ಕಾಗಿ ವಾಮಮಾರ್ಗದಿಂದ ಬಂದವನಲ್ಲ. ಎನನ್ನಾದರು ಸಾಧಿಸಬೇಕು. ಹೆಸರು ಮಾಡಬೇಕು ಎನ್ನುವ ಉದ್ದೇಶದಿಂದ ರಾಜಕೀಯಕ್ಕೆ ಬಂದವನು . ಜೀವನ ಇರುವವರೆಗೆ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದರು.
ಮನೆಯ ಹೊರಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಗಮಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು , ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಘೋಷಣೆಗಳನ್ನು ಕೂಗಿ ಡಾ. ರೆಡ್ಡಿ ಪರ ಜೈಕಾರಗಳನ್ನು ಕೂಗಿದರು.
ಸುಧಾಕರ್ ರೆಡ್ಡಿ ನಿರ್ಧಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಕೆ.ಸಿ.ವೇಣುಗೋಪಾಲ್ ಅವರಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ಸುಧಾಕರ್ ತಂದೆ ಕೇಶವ್ ರೆಡ್ಡಿಯವರು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೂಚನೆ ನೀಡಿದ್ದರು. ಇದರಿಂದ ಬೇಸರಗೊಂಡ ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದರು. ಅದಾದ ಬೆನ್ನಲ್ಲೇ ಆಕ್ರೋಶಗೊಂಡ ಬೆಂಬಲಿಗರು ಚಿಕ್ಕಬಳ್ಳಾಪುರ ನಗರದ ಶಂಕರಮಠದಲ್ಲಿರುವ ಸಂಸದ ವೀರಪ್ಪ ಮೊಯ್ಲಿ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದರು.
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.