ಗ್ರೀನ್ ಸಿಗ್ನಲ್ ಸಿಕ್ಕರೂ ತೆರಳಲು ತಯಾರಿಲ್ಲ
ಕೂಲಿ ಕಾರ್ಮಿಕರು ರೆಡ್ ಝೋನ್ ಪ್ರದೇಶದವರೇ ಹೆಚ್ಚು; ಊರಿಗೆ ಮತ್ತೆ ತೆರಳಲು ಸೋಂಕು, ಭದ್ರತೆ ಭೀತಿ
Team Udayavani, Apr 29, 2020, 7:18 AM IST
ಬೆಂಗಳೂರು: ಒಂದೂವರೆ ತಿಂಗಳ ಹಿಂದಿನ ಮಾತು. ಅತ್ಯಂತ ಅಮಾನವೀಯ ವಲಸೆ ಆಯಿತು. ಪೊಲೀಸರಿಂದ ಥಳಿಸಿಕೊಂಡು, ಜನ ಗೂಡು ಸೇರಿದರು. ಇದೆಲ್ಲದರ ನಡುವೆ ವಲಸೆ ಭಾಗ್ಯ ಸಿಗದೆ, ಸಾವಿರಾರು ಕೂಲಿಕಾರ್ಮಿಕರು ನಿರಾಶ್ರಿತರಾಗಿ ನಗರದಲ್ಲೇ ಉಳಿಯಬೇಕಾಯಿತು. ಈಗ ಸರ್ಕಾರ ಅಧಿಕೃತವಾಗಿ ಆ ವರ್ಗಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಹೋಗಲು ಕಾರ್ಮಿಕರು ತಯಾರಿಲ್ಲ! ಇದಕ್ಕೆ ಎರಡು ಮುಖ್ಯ ಕಾರಣಗಳು- ಒಂದು ಈಗಷ್ಟೇ ಕಾಮಗಾರಿಗಳು ಶುರುವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಊರಿಗೆ ಹೋದರೆ, ಮತ್ತೆ ವಾಪಸ್ ಕೆಲಸ ಸಿಗುವುದು ಅನುಮಾನ. ಆಗ, ಜೀವನಕ್ಕೇನು ಮಾಡುವುದು ಎಂಬ ಚಿಂತೆ. ಮತ್ತೂಂದು ಹೆಚ್ಚು ವಲಸೆ ಇರುವ ಊರುಗಳಲ್ಲೇ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಈ ಸಂದರ್ಭದಲ್ಲಿ ಬೆಂಗಳೂರೇ ಸುರಕ್ಷಿತ. ಅಲ್ಲದೆ, ಕಾರ್ಮಿಕರ ಕೊರತೆಯಿಂದ ಇರುವವರಿಗೇ ಹೆಚ್ಚು ಬೇಡಿಕೆ ಬರಲಿದೆ.
ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಸರ್ಕಾರ ಅನುಮತಿ ನೀಡಿದರೂ “ನಾನೊಲ್ಲೆ… ನಾನೊಲ್ಲೆ…’ ಎನ್ನುತ್ತಿದ್ದಾರೆ. ಹೀಗೆ ಹೇಳುತ್ತಿರುವವರು ಬೆಂಗಳೂರು ನಗರ ಜಿಪಂ ವ್ಯಾಪ್ತಿಯಲ್ಲೇ ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರಿದ್ದಾರೆ. ಹಾಗಂತ, ಹೋಗಲೇಬೇಕು ಎಂಬ ಕಡ್ಡಾಯವೂ ಇಲ್ಲ. ಕಾರ್ಮಿಕರಿಗೆ ಅವರ ಹಕ್ಕು ನೀಡಿದೆ. ಹೋಗುವುದು ಬಿಡುವುದು ಅವರಿಗೆ ಬಿಟ್ಟಿದ್ದು ನ್ನುತ್ತಿದೆ ಸರ್ಕಾರ.
ಕೂಲಿಕಾರ್ಮಿಕರು ಬಹುತೇಕ ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ,ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ಹಲವು ಪ್ರದೇಶಗಳಿಂದ ವಲಸೆ ಬಂದವರಿದ್ದಾರೆ. ಇದರಲ್ಲಿ ಕೇವಲ 50-100 ಜನ ಕಾರ್ಮಿಕರು ಮಾತ್ರ ಸ್ವಗ್ರಾಮಗಳಿಗೆ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಂಗಳೂರು ನಗರ ಜಿಲ್ಲಾಡಳಿತದ ಸೂಚನೆ ಮೆರೆಗೆ ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು ಸ್ವಗ್ರಾಮಗಳಿಗೆ ಮರಳುವ ಕಾರ್ಮಿಕರ ಪಟ್ಟಿ ಸಿದಟಛಿಪಡಿಸುತ್ತಿದ್ದು, ಬಹುತೇಕ ಇಲ್ಲೇ ಇರುವ ಇಂಗಿತ ವ್ಯಕ್ತಪಡಿಸಿಸುತ್ತಿದ್ದಾರೆ ಎಂದು ಜಿಪಂ ಅಧಿಕಾರಿಗಳು
ತಿಳಿಸಿದ್ದಾರೆ.
ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಹಲವು ಕೈಗಾರಿಕೆಗಳಿವೆ. ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ, ಆನೇಕಲ್ ತಾಲೂಕಿನ ಹುಸ್ಕೂರು, ಮರಸೂರು, ಹೆನ್ನಾಗರ, ಚೊಕ್ಕನಾಯಕನಹಳ್ಳಿ ಸೇರಿ ದಂತೆ ಹಲವು ಪ್ರದೇಶಗಳಲ್ಲಿ ಹೊರರಾಜ್ಯಗಳ ಕೂಲಿ ಕಾರ್ಮಿಕರಂತೆ ನಮ್ಮ ರಾಜ್ಯದವರೂ ಇದ್ದಾರೆ.
ಕೂಲಿಕಾರ್ಮಿಕರು ಬಹಳಷ್ಟು ಉತ್ತರ ಕರ್ನಾಟಕದವರಾಗಿದ್ದು, ಜೀವನ ನಡೆಸಲು ಪರಿತಪಿಸುವಂತಾಗಿ ದೆ. ಇನ್ನೂ ಕೆಲವು ಕೂಲಿ ಕಾರ್ಮಿಕರು ಕಾರ್ಖಾನೆಗಳಲ್ಲಿ ಒಪ್ಪಂದಗಳಿಗೆ ಒಳಪಟ್ಟಿದ್ದಾರೆ. ಒಂದೇ ವೇಳೆ ಕಟ್ಟಡ ಕೆಲಸ, ಕಾರ್ಖಾನೆಗಳು ಕಾರ್ಯಾರಂಭ ಮಾಡಿದರೆ ಮತ್ತೆ ಊರಿಂದ ಬರುವುದು ಕಷ್ಟ. ಇತ್ತೀಚೆಗೆ ಕಲಬುರಗಿ, ರಾಯಚೂರು, ಬೀದರ್ ಮತ್ತಿತರ ಕಡೆಗಳಲ್ಲಿ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗುತ್ತಿವೆ. ಮಕ್ಕಳು, ಮಹಿಳೆಯರನ್ನು ಕಟ್ಟಿಕೊಂಡು ಆ “ರೆಡ್ ಝೋನ್’ಗೆಳಿಗೆ ಹೋಗುವುದು ಅಪಾಯಕಾರಿ ಹೆಜ್ಜೆ ಎಂಬ ಆತಂಕವೂ ಹಿಂದೇಟಿಗೆ ಕಾರಣ ಎಂದು ಜಿ.ಪಂ. ಅಧಿಕಾರಿಯೊಬ್ಬರು ತಿಳಿಸಿದರು.
ಹೊರಗಿನವರ ಬಗ್ಗೆ ಇರಲಿ ನಿಗಾ
ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಆಯಾ ಗ್ರಾಪಂಯ ಅಭಿವೃದಿಟಛಿ ಅಧಿಕಾರಿಗಳಿಂದ ಹೊರ ಜಿಲ್ಲೆಗಳ ಕೂಲಿಕಾರ್ಮಿಕರ ಪಟ್ಟಿಯನ್ನು ಸೋಮವಾರ ತೆಗೆದುಕೊಂಡಿದ್ದಾರೆ. ಇದನ್ನು ಜಿಲ್ಲಾವಾರು ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡಲಿದ್ದಾರೆ. ಆ ಬಳಿಕ ಹೊರ ಜಿಲ್ಲೆಯ ಕೂಲಿಕಾರ್ಮಿಕರನ್ನು ಅವರ ಊರುಗಳಿಗೆ ಬಸ್ ನಲ್ಲಿ ಕಳುಹಿಸಿಕೊಡಲಾಗುವುದು ಎಂದು ಹಿರಿಯ
ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಈಚೆಗೆ ಪಿಡಿಒಗಳೊಂದಿಗೆ ಸಭೆ ನಡೆಸಿದ್ದು ಗ್ರಾಮಗಳಲ್ಲಿ ಹೊರಗಿನವರು ಬರದಂತೆ
ನಿಗಾವಹಿಸುವಂತೆ ಸೂಚನೆ ನೀಡಿದ್ದಾರೆ.
ಈಗಾಗಲೇ ಹೊರ ಜಿಲ್ಲೆಗಳ ಕೂಲಿ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿ ಕೊಡುವ ಸಂಬಂಧ ಪಟ್ಟಿ ತಯಾರು ಮಾಡಲಾಗಿದೆ. ಆದರೆ ಹಲವು ಕೂಲಿ ಕಾರ್ಮಿಕರು ತಮ್ಮೂರುಗಳಿಗೆ ತೆರಳಲು ಆಸಕ್ತಿ ತೋರುತ್ತಿಲ್ಲ. ಬಹಳಷ್ಟು ಮಂದಿ ಬೆಂಗಳೂರಿನಲ್ಲೇ ಇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
● ಮಮತಾ, ಪಿಡಿಒ ಆವಲಹಳ್ಳಿ ಗ್ರಾಪಂ
● ದೇವೇಶ್ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.